ದುಬೈ: ಕೆಸಿಎಫ್ ನಿಂದ ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಸನ್ಮಾನ

Update: 2022-02-22 06:41 GMT

ದುಬೈ, ಫೆ.22: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಯುಎಇ ಸಮಿತಿಯ ವತಿಯಿಂದ ದುಬೈನಲ್ಲಿ ನಡೆದ ಪ್ರತಿಭೋತ್ಸವ ಸಮಾರಂಭದಲ್ಲಿ ಅಕ್ಷರ ಸಂತ, ಪದ್ಮಶ್ರೀ ಹರೇಕಳ ಹಾಜಬ್ಬರನ್ನು ಸನ್ಮಾನಿಸಿ ಗೌರವಿಸಲಾಯಿತು.

ದುಬೈ ಸರಕಾರದ ಉನ್ನತ ಉನ್ನತ ಅಧಿಕಾರಿ ಶೈಖ್ ಸಲಾ ಮೂಸಾ ಅಲ್ ಮದನಿಯವರು ಹಾಜಬ್ಬರನ್ನು  ಸನ್ಮಾನಿಸಿದರು.

ಇದೇವೇಳೆ ಗಲ್ಫ್ ನಾದ್ಯಂತ ಕನ್ನಡ ಕಲಿಸುವ 'ನಮ್ಮ ಕನ್ನಡ ಕಲಿಕಾ ಪ್ರಾರಂಭೋತ್ಸವ' ಹರೇಕಳ ಹಾಜಬ್ಬ ಚಾಲನೆ ನೀಡಿದರು. 

ಕೆಸಿಎಫ್ ಯುಎಇ ವೆಲ್ಫೇರ್ ಸಮಿತಿಯ ಅಧ್ಯಕ್ಷ ಝೈನುದ್ದೀನ್ ಹಾಜಿ ಬೆಳ್ಳಾರೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಬಿ.ಎಂ.ಮುಮ್ತಾಝ್  ಕೃಷ್ಣಾಪುರ, ಅಬೂಸ್ವಾಲಿ ಹಾಜಿ (ನಫೀಸ್ ಗ್ರೂಪ್ ದುಬೈ), ಸೈಯದ್ ಶೈಖ್ ಮಖ್ಡೂಮ್, ರೊನಾಲ್ಡ್ ಮಾರ್ಟಿಸ್ (ಬ್ಲೂ ರಾಯಲ್ ಗ್ರೂಪ್), ಅಶ್ರಫ್ ಷಾ ನಂತೂರ್ (ಖೈರಿಯತ್ ಅಲ್ ಶಮ್ಸ್), ಬಿಸಿಎಫ್ ದುಬೈ ಅಧ್ಯಕ್ಷ ಡಾ.ಯೂಸುಫ್, ಅಬ್ದುಲ್ಲಾ ಮದುಮೂಲೆ (ಝಾಯಿದ್ ಫೌಂಡೇಶನ್ ಅಬುಧಾಬಿ), ಇಬ್ರಾಹೀಂ ಗಡಿಯಾರ್, ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ರಫೀಕ್ ಪಿ.ಕೆ., ರಾಝಿಕ್ ಉಳ್ಳಾಲ, ಮುಹಮ್ಮದ್ ಅಲಿ ಉಚ್ಚಿಲ, ಡಾ.ಕಾಪು ಮುಹಮ್ಮದ್, ಹಿದಾಯತ್ ಅಡ್ಡೂರ್, ಎಂ.ಇ.ಮೂಳೂರು, ಅಶ್ರಫ್ ಹಾಜಿ ಅಡ್ಯಾರ್, ಲತೀಫ್ ಮುಲ್ಕಿ ಮೊದಲಾದವರು ಭಾಗವಹಿಸಿದ್ದರು.

ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News