ʼಜಗತ್ತಿನ ಅತ್ಯಂತ ಸುಂದರ ಕಟ್ಟಡʼ ಬಣ್ಣನೆಯ ಮ್ಯೂಸಿಯಂ ಆಫ್‌ ದಿ ಫ್ಯೂಚರ್‌ ದುಬೈಯಲ್ಲಿ ಉದ್ಘಾಟನೆ

Update: 2022-02-23 06:31 GMT
twitter.com/HHShkMohd

ದುಬೈ: ಈಗಾಗಲೇ ಹಲವಾರುಜಾಗತಿಕ ದಾಖಲೆಗಳನ್ನು ಹೊಂದಿರುವ ಯುಎಇ ತಮ್ಮ ಬಗಲಿಗೆ ಮತ್ತೊಂದು ದಾಖಲೆಯನ್ನೂ ಸೇರಿಸಿಕೊಂಡಿದೆ. ಜಗತ್ತಿನ ಅತ್ಯಂತ ಸುಂದರ ಕಟ್ಟಡ ಎಂದು ಬಣ್ಣಿಸಲಾಗಿರುವ ಮ್ಯೂಸಿಯಂ ಆಫ್ ದಿ ಫ್ಯೂಚರ್ ಮಂಗಳವಾರ ದುಬೈಯಲ್ಲಿ ಉದ್ಘಾಟನೆಗೊಂಡಿದೆ.

ಈ ಮ್ಯೂಸಿಯಂ ಕಟ್ಟಡ ಏಳಂತಸ್ತಿನ ಹಾಲೋ ಸಿಲ್ವರ್ ಎಲ್ಲಿಪ್ಸ್ ಆಗಿದ್ದು ದುಬೈ ದೊರೆಯ ಉಲ್ಲೇಖಗಳನ್ನು ಹೊಂದಿರುವ ಅರೆಬಿಕ್ ಕ್ಯಾಲಿಗ್ರಫಿಗಳನ್ನೂ ಹೊಂದಿದೆ. ನಗರದ ಮುಖ್ಯ ಹೆದ್ದಾರಿಯಲ್ಲಿರುವ ಶೇಖ್ ಝಾಯೇದ್ ರಸ್ತೆಯಲ್ಲಿ ಈ ಕಟ್ಟಡವಿದೆ.

ಈ ಅದ್ಭುತ ಕಟ್ಟಡವು ಉದ್ಘಾಟನೆ ದಿನದಂದು ವರ್ಣರಂಜಿತ ಲೇಸರ್ ಬೆಳಕಿನ ಪ್ರದರ್ಶನದಲ್ಲಿ ಜನರನ್ನು ವಿಸ್ಮಯಗೊಳಿಸಿದೆ. ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಈ ಕಟ್ಟಡವನ್ನು ಉದ್ಘಾಟಿಸಿದ್ದಾರೆ.

ಈ ಮ್ಯೂಸಿಯಂನಲ್ಲಿ ಏನಿರಲಿದೆ ಎಂಬುದು ಇನ್ನೂ ತಿಳಿದಿಲ್ಲವಾದರೂ ಅದು ವಿನ್ಯಾಸ ಮತ್ತು ತಾಂತ್ರಿಕ ಆವಿಷ್ಕಾರಗಳನ್ನು ಪ್ರದರ್ಶಿಸಿ ಸಂದರ್ಶಕರನ್ನು ಭವಿಷ್ಯದ 2071 ವರ್ಷದ ಪಯಣಕ್ಕೆ ಕರೆದೊಯ್ಯಲಿದೆ ಎಂದು ಆಯೋಜಕರು ಹೇಳಿದ್ದಾರೆ.

ಮ್ಯೂಸಿಯಂ ಪಕ್ಕದ ರಸ್ತೆಬದಿ ಸೂಚನಾಫಲಕದಲ್ಲಿ "ಜಗತ್ತಿನ ಅತ್ಯಂತ ಸುಂದರ ಕಟ್ಟಡ" ಎಂದು ಬರೆಯಲಾಗಿದ್ದು ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಪಾಗಿಂತ ಕೆಲವೇ ನಿಮಿಷಗಳಷ್ಟು ದೂರದಲ್ಲಿ ಈ ಮ್ಯೂಸಿಯಂ ಇದೆ.

Photo: NYpost

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News