ಐಒಸಿ ಸೌದಿ ಅರೇಬಿಯಾ ವತಿಯಿಂದ ಯು.ಟಿ.ಖಾದರ್ ಗೆ ಸನ್ಮಾನ
Update: 2022-05-03 00:09 IST
ಮಕ್ಕಾ/ಸೌದಿ ಅರೇಬಿಯಾ: ಈದ್ ಆಚರಣೆ ಭಾಗವಾಗಿ ಸೋಮವಾರ ಐಒಸಿ ಸೌದಿ ಅರೇಬಿಯಾ ವತಿಯಿಂದ ಶಾಸಕ, ಮಾಜಿ ಸಚಿವ, ವಿಧಾನ ಸಭೆಯಲ್ಲಿ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಮಕ್ಕಾದಲ್ಲಿ ಏರ್ಪಡಿಸಲಾಗಿತ್ತು.
ಐಒಸಿ ಮುಖ್ಯಸ್ಥರಾದ ಇಬ್ರಾಹಿಂ ಕನ್ನಂಗಾರ್ ಅವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಐಒಸಿ ಸೌದಿ ಅರೇಬಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಾವೇದ್ ಮಿಯಾಂದಾದ್ ಕಲ್ಲಡ್ಕ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು.