ಕೆಸಿಎಫ್ ಒಮನ್ ನ್ಯಾಷನಲ್ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ

Update: 2022-05-21 17:35 GMT

ಮಸ್ಕತ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮನ್ ರಾಷ್ಟ್ರೀಯ ಸಮಿತಿಯ ಮಹಾಸಭೆಯು ಅಯ್ಯೂಬ್ ಕೋಡಿ ಅವರ ಅಧ್ಯಕ್ಷತೆಯಲ್ಲಿ ಅಲ್ ಫವಾನ್ ಸಭಾಂಗಣ ಹಝ್ರತ್ ಮಾಝಿನ್ (ರ) ವೇದಿಕೆ ಬರ್ಕಾದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮದಲ್ಲಿ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ಅವರು ದುಆಗೆ ನೇತೃತ್ವ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಯ್ಯಿದ್ ಸೈಫುದ್ದೀನ್ ಹೈದ್ರೋಸಿ ತಂಙಳ್ ಕೊಡಗು ಅವರು ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ ವರದಿ ವಾಚಿಸಿದರು. ಕೋಶಾಧಿಕಾರಿ ಆರಿಫ್ ಕೋಡಿ ಲೆಕ್ಕ ಪತ್ರ  ಮಂಡಿಸಿ, ಸಭೆಯಲ್ಲಿ ಮಂಜೂರು ಮಾಡಲಾಯಿತು. ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯಿಂದ ಆರ್‌ಓ ಆಗಿ ಆಗಮಿಸಿದ್ದ ಇಕ್ಬಾಲ್ ಬೊಲ್ಮಾರ್  ಬರ್ಕ ಕೆಸಿಎಫ್ ನ ಆಯಾ ಹುದ್ದೆಗಳಲ್ಲಿರುವರು ಕಾರ್ಯ ನಿರ್ವವಹಿಸಬೇಕಾದ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ನಂತರ ಹಳೆ ಕಮಿಟಿಯನ್ನು ಬರ್ಕಾಸ್ತುಗೊಳಿಸಿ, ನೂತನ ಸಮಿತಿಯನ್ನು ರಚಿಸಲಾಯಿತು.

2022- 23ನೇ  ಸಾಲಿನ  ಸಮಿತಿಯ ಅಧ್ಯಕ್ಷರಾಗಿ ಅಯ್ಯೂಬ್ ಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಸ್ವಾದಿಕ್ ಹಾಜಿ ಸುಳ್ಯ, ಕೋಶಾಧಿಕಾರಿಯಾಗಿ ಆರಿಫ್ ಕೋಡಿ , ಸಂಘಟನಾಧ್ಯಕ್ಷರಾಗಿ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಎರುಮಾಡ್, ಸಂಘಟನಾ ಕಾರ್ಯದರ್ಶಿಯಾಗಿ ಸಫ್ವಾನ್ ಕರೋಪಾಡಿ, ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಝುಬೈರ್ ಸಅದಿ ಪಾಟ್ರಕೋಡಿ, ಕಾರ್ಯದರ್ಶಿಯಾಗಿ ನವಾಝ್ ಮಣಿಪುರ, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಕಲಂದರ್  ಬಾಷಾ ತೀರ್ಥಹಳ್ಳಿ, ಕಾರ್ಯದರ್ಶಿಯಾಗಿ ಅಬ್ಬಾಸ್ ಮರಕ್ಕಡ, ಇಹ್ಸಾನ್ ವಿಭಾಗದ ಅಧ್ಯಕ್ಷರಾಗಿ ಇಕ್ಬಾಲ್ ಎರ್ಮಾಳ್, ಕಾರ್ಯದರ್ಶಿಯಾಗಿ ಸಂಶುದ್ದೀನ್ ಪಾಲೆತ್ತಡ್ಕ, ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ಇರ್ಫಾನ್ ಕೂರ್ನಡ್ಕ, ಕಾರ್ಯದರ್ಶಿಯಾಗಿ ಮುಝಮ್ಮಿಲ್ ಅಳಕೆಮಜಲು, ಆಡಳಿತ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷರಾಗಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಕಾರ್ಯದರ್ಶಿಯಾಗಿ ಶಫೀಕ್ ಎಲಿಮಲೆ, ಐಟೀಮ್ ಕೋರ್ಡಿನೇಟರ್  ಆಗಿ ಹನೀಫ್ ಮನ್ನಾಪು, ಉರ್ದು ವಿಂಗ್ ಕೋರ್ಡಿನೇಟರ್  ಆಗಿ ಝುಬೈರ್ ಖಾಝಿ ತುಮಕೂರು ಹಾಗೂ  ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಸದಸ್ಯರುಗಳಾಗಿ ಇಕ್ಬಾಲ್ ಬೊಳ್ಮಾರ್ ಬರ್ಕ, ಇಬ್ರಾಹೀಂ ಹಾಜಿ ಅತ್ರಾಡಿ, ಹಂಝ ಹಾಜಿ ಕನ್ನಂಗಾರ್, ಉಬೈದುಲ್ಲಾ ಸಖಾಫಿ ಹಾಗೂ ರಾಷ್ಟ್ರೀಯ ಸಮಿತಿಯ ಎಕ್ಸಿಕ್ಯುಟಿವ್ ಸದಸ್ಯರುಗಳಾಗಿ ಎಲ್ಲಾ ಝೋನ್ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ಆರಿಸಲಾಯಿತು.

ಝುಬೈರ್ ಸಅದಿ ಪಾಟ್ರಕೋಡಿ ಸ್ವಾಗತಿಸಿ, ಸ್ವಾದಿಕ್ ಹಾಜಿ ಸುಳ್ಯ ವಂದಿಸಿದರು. ಸಭೆಯಲ್ಲಿ  ಕೆಸಿಎಫ್ ಒಮನ್ ರಾಷ್ಟ್ರೀಯ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಎಲ್ಲಾ ಝೋನ್ ಅಧ್ಯಕ್ಷರು, ರಾಷ್ಟ್ರೀಯ ಕೌನ್ಸಿಲರ್ ಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News