ದೋಹಾ: 13ನೇ ವಾರ್ಷಿಕ ರಕ್ತದಾನ ಶಿಬಿರವನ್ನು ಆಯೋಜಿಸಿದ ಕೆಎಮ್‌ಸಿಎ

Update: 2022-06-14 14:35 GMT

ದೋಹಾ: ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ಎಸ್‌ಕೆಎಂಡಬ್ಲ್ಯುಎ) ಸಹಯೋಗದೊಂದಿಗೆ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಷನ್ (ಕೆಎಂಸಿಎ) 13ನೇ ವಾರ್ಷಿಕ ರಕ್ತದಾನ ಶಿಬಿರವನ್ನು ಎಚ್‌ಎಂಸಿ ಬ್ಲಡ್ ಡೋನರ್ ಸೆಂಟರ್, ಬೈತ್ ಅಲ್ ದಿಯಾಫಾ ಮೆಡಿಕಲ್ ಸಿಟಿಯಲ್ಲಿ ಆಯೋಜಿಸಿತು.

ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ - ಕತರ್ (HIF-Q) ಮತ್ತು ಫ್ಯಾಮಿಲಿ ಫ್ರೆಂಡ್ಸ್ ಸರ್ಕಲ್ - ಕತರ್ (FFC-Q) ಶಿಬಿರಕ್ಕೆ ಸಹಕರಿಸಿದೆ.

ಕಾರ್ಯಕ್ರಮದಲ್ಲಿ  ಕನಿಷ್ಠ 175 ಜನರು ಭಾಗವಹಿಸಿದ್ದರು, ಅದರಲ್ಲಿ 110 ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ. ಆದಾಗ್ಯೂ, ಸ್ಥಳೀಯ ನಿಯಮಗಳಿಗೆ ಅನುಸಾರವಾಗಿ ಕಡ್ಡಾಯವಾದ ವಾಡಿಕೆಯ ತಪಾಸಣೆಗಳನ್ನು ಮಾಡಿದ ನಂತರ 60 ಮಂದಿ ರಕ್ತದಾನ ಮಾಡಿದ್ದಾರೆ ಎಂದು KMCA ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ.ಮೋಹನ್ ಥಾಮಸ್, ಸ್ವಯಂಪ್ರೇರಿತ ರಕ್ತದಾನ ಏಕೆ ಮುಖ್ಯ ಮತ್ತು ಅದು ಇತರ ಜನರ ಮತ್ತು ಕುಟುಂಬಗಳ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಮಾಹಿತಿ ನೀಡಿದರು.

ಡಾ. ತಬ್ರೇಝ್, ಡಾ.ಗಫಾರ್ ಅಲಿ ಮತ್ತು ಮಿಲನ್ ಅರುಣ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕೆಎಂಸಿಎ ಪ್ರಧಾನ ಕಾರ್ಯದರ್ಶಿ ಸುಹೈಬ್ ಅಹಮದ್ ಕಾರ್ಯಕ್ರಮ ನಿರೂಪಿಸಿದರು. ಕೆಎಂಸಿಎ ಅಧ್ಯಕ್ಷ ಫಯಾಝ್ ಅಹಮದ್  ಸ್ವಾಗತಿಸಿದರು.

ಫ್ಯಾಮಿಲಿ ಫ್ರೆಂಡ್ಸ್ ಸರ್ಕಲ್‌ನ ಅಧ್ಯಕ್ಷ ಜಾವೇದ್ ಶರೀಫ್ ಕಿರಾಅತ್ ಪಠಿಸಿದರು. ಎಸ್‌ಕೆಎಂಡಬ್ಲ್ಯುಎ ಅಧ್ಯಕ್ಷ ಅಬ್ದುಲ್ ರಝಾಕ್ ಪರವಾಗಿ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಬಂಟ್ವಾಳ್ ರಕ್ತದಾನದ ಪ್ರಯೋಜನಗಳ ಕುರಿತು ಮಾತನಾಡಿದ ವೈದ್ಯರನ್ನು ಪರಿಚಯಿಸಿದರು. ಎಚ್‌ಐಎಫ್‌ ಅಧ್ಯಕ್ಷ ಶಫಾಕತ್‌ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News