ದುಬೈ: SKSSF ವಿಖಾಯ ಕರ್ನಾಟಕ ಯುಎಇ ವತಿಯಿಂದ ರಫೀಕ್ ಆತೂರು ಸ್ಮರಣಾರ್ಥ ರಕ್ತದಾನ ಶಿಬಿರ

Update: 2022-09-07 12:19 GMT

ದುಬೈ: SKSSF ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ದುಬೈ ಹೆಲ್ತ್ ಅಥೋರಿಟಿ ರಕ್ತದಾನ ಕೇಂದ್ರದಲ್ಲಿ ರಫೀಕ್ ಆತೂರು ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವು ಸೆ.4ರಂದು ನಡೆಯಿತು.

SKSSF ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷ ಸಯ್ಯದ್ ಅಸ್ಕರ್ ಅಲಿ ತಂಙಳ್ ದುವಾ ನೆರವೇರಿಸಿ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ವಿಖಾಯ ಕರ್ನಾಟಕ ಯುಎಇ ಸಮಿತಿ ಕಾರ್ಯಕಾರಿ ಸದಸ್ಯ ಜಾಬಿರ್ ಬೆಟ್ಟಂಪಾಡಿ ಸ್ವಾಗತಿಸಿದರು.

ದುಬೈ ಮತ್ತು ಶಾರ್ಜಾದ ವಿವಿಧ ಸ್ಥಳಗಳಿಂದ 200ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗವಹಿಸಿದ್ದರು. ಆರೋಗ್ಯ ಇಲಾಖೆಯಲ್ಲಿ ಆವಶ್ಯಕತೆಯಿದ್ದ 25 ಪ್ಲೇಟ್ಲೆಟ್ ರಕ್ತ ಸೇರಿದಂತೆ 163 ಯುನಿಟ್ ರಕ್ತ ಸಂಗ್ರಹಿಸುವ ಮೂಲಕ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿ ಅಧ್ಯಕ್ಷ ಹಾಜಿ ಮೊಯಿದೀನ್ ಕುಟ್ಟಿ ದಿಬ್ಬ,  ರಕ್ತದಾನ ಶಿಬಿರದ ಚಯರ್‌ಮ್ಯಾನ್ ಜಲೀಲ್ ಶಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಕ್ತದಾನಿಗಳಿಗೆ ಮತ್ತು ಸ್ವಯಂ ಸೇವರಾಗಿ ಸೇವೆ ಸಲ್ಲಿಸಿದ ವಿಖಾಯ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ರಕ್ತದಾನ ಶಿಬಿರದಲ್ಲಿ ಯುಎಇ ಸಮಸ್ತ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಾದ‌ ಅಬ್ದುಲ್ ಸಲಾಂ ಬಪ್ಪಲಿಗೆ, ಬದ್ರುದ್ದೀನ್ ಹೆಂತಾರ್, ನೂರ್ ಮುಹಮ್ಮದ್ ನೀರ್ಕಜೆ, ಅಬ್ದುಲ್ ರಝಾಕ್ ಸೋಂಪಾಡಿ, ಅಬ್ದುಲ್ ರಝಾಕ್ ಹಾಜಿ ಮಣಿಲ, ಅಶ್ರಫ್ ಆರ್ತಿಕೆರೆ, ಹಮೀದ್ ಮುಸ್ಲಿಯಾರ್ ನೀರ್ಕಜೆ, ಶರೀಫ್ ಕೊಡಿನೀರು, ಅಬ್ದುಲ್ ಲತೀಫ್ ಮದರ್ ಇಂಡಿಯಾ, ಬಷೀರ್ ಕೆಮ್ಮಿಂಜೆ, ಉಸ್ಮಾನ್ ಮರೀಲ್ ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು. 

ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯುಎಇ ಸಮಿತಿ,  ದಾರುನ್ನೂರು ಯುಎಇ ರಾಷ್ಟ್ರೀಯ ಸಮಿತಿ, ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿ,  ಶಂಸುಲ್ ಉಲೆಮಾ ಅರೆಬಿಕ್ ಕಾಲೇಜು ತೋಡಾರು ಯುಎಇ ಸಮಿತಿ,  ದಾರುಸ್ಸಲಾಂ ಎಜುಕೇಶನ್ ಸೆಂಟರ್ ಯುಎಇ, ದಾರುಲ್ ಹಸನೀಯ ಸಾಲ್ಮರ ಯುಎಇ ಸಮಿತಿಯ ಪದಾಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿ ಯಶಸ್ವಿಗೆ ಸಹಕರಿಸಿದ್ದರು.

ವಿಖಾಯ ಕರ್ನಾಟಕ ಯುಎಇ ಸಮಿತಿಯ ಚಯರ್‌ಮ್ಯಾನ್‌ ನವಾಝ್ ಬಿಸಿ ರೋಡ್ ಅವರು ಸೆ. 18ರಂದು ದುಬೈಯಲ್ಲಿ ನಡೆಯುವ ಬೃಹತ್ ನೂರೇ ಅಜ್ಮೀರ್ ಕಾರ್ಯಕ್ರಮದ ಬಗ್ಗೆ ಮಾತನಾಡಿ ವಿಜಯಗೊಳಿಸಲು ಕರೆ ನೀಡಿ, ರಕ್ತದಾನಿಗಳಿಗೆ ಮತ್ತು ಸಹಕರಿಸಿದವರಿಗೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News