ಜಿದ್ದಾ: ಯನೆಪೊಯ (ಡೀಮ್ಡ್) ವಿಶ್ವವಿದ್ಯಾನಿಲಯದ ಗ್ಲೋಬಲ್ ಅಲುಮ್ನಿ ಸಭೆ

Update: 2022-10-24 15:12 GMT

ಜಿದ್ದಾ: ಯನೆಪೊಯ (ಡೀಮ್ಡ್) ವಿಶ್ವವಿದ್ಯಾನಿಲಯದ ಗ್ಲೋಬಲ್ ಅಲುಮ್ನಿ ಸಭೆ-2022 ಸೌದಿ ಅರೇಬಿಯಾದ ಜಿದ್ದಾದಲ್ಲಿರುವ ಜಿದ್ದಾ ನ್ಯಾಷನಲ್  ಆಸ್ಪತ್ರೆಯಲ್ಲಿ ನಡೆಯಿತು.

ಯನೆಪೊಯ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಸಂಘದ YUAA ಸೌದಿ ಅರೇಬಿಯಾ ವಿಭಾಗವು ಈ ಕಾರ್ಯಕ್ರವನ್ನು ಆಯೋಜಿಸಿತ್ತು.

ಸೌದಿ ಅರೇಬಿಯಾಕ್ಕೆ ಭಾರತದ ಗೌರವಾನ್ವಿತ ರಾಯಭಾರಿ ಜನರಲ್ ಮೊಹಮ್ಮದ್ ಶಾಹಿದ್ ಆಲಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಯನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಅಬ್ದುಲ್ಲಾ ಕುಂಞಿ, ಯನೆಪೊಯ ದಂತ ಮಹಾವಿದ್ಯಾಲಯದ ಡೀನ್ ಡಾ. ಅಖ್ತರ್ ಹುಸೇನ್, ಜೆದ್ದಾ ನ್ಯಾಷನಲ್  ಆಸ್ಪತ್ರೆಯ ಅಧ್ಯಕ್ಷ ವಿ.ಪಿ.ಮೊಹಮ್ಮದ್ ಅಲಿ, YUAA ಸೌದಿ ಅರೇಬಿಯಾ ವಿಭಾಗದ ಅಧ್ಯಕ್ಷ ಡಾ.ಲುಕ್ಮಾನ್, ಸಂಚಾಲಕ ಡಾ. ಮಹಮೂದ್ ಮೂತೇದತ್, ಸಂಘಟನಾ ಸಮಿತಿ ಅಧ್ಯಕ್ಷ  ಡಾ. ದಿಲ್ಶಾದ್ ಅವರು ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಯಭಾರಿ ಶಾಹಿದ್ ಆಲಂ, ಯನೆಪೊಯ ವಿಶ್ವವಿದ್ಯಾನಿಲಯದ ಕಾರ್ಯವನ್ನು ಶ್ಲಾಘಿಸಿದರು ಮತ್ತು ವಲಸಿಗ ಸಮುದಾಯದ ಶೈಕ್ಷಣಿಕ ವಾತಾವರಣವನ್ನು ಪುನರುಜ್ಜೀವನಗೊಳಿಸಲು ಸೌದಿ ಅರೇಬಿಯಾದಲ್ಲಿ ಯನೆಪೊಯ ವಿಶ್ವವಿದ್ಯಾನಿಲಯದ ಕಡಲಾಚೆಯ ಕ್ಯಾಂಪಸ್ ಅನ್ನು ಸ್ಥಾಪಿಸಲು ಯನೆಪೊಯ ಕುಲಪತಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಸ್ತಾಪಿಸಿದರು. ಗೌರವಾನ್ವಿತ ಕಾನ್ಸುಲೇಟ್ ಜನರಲ್ ಅವರು ರಿಯಾದ್‌ನಲ್ಲಿ ಐಐಟಿ ಕೇಂದ್ರದ ಯೋಜನೆಗಳನ್ನು ನೆನಪಿಸಿಕೊಂಡರು. ಈ ಸಂದರ್ಭ ಆಲಂ ಅವರು YUAA ಸೌದಿ ಅಧ್ಯಾಯದ ಹಳೆಯ ವಿದ್ಯಾರ್ಥಿಗಳ ಡೇಟಾ-ಬೇಸ್ ಡೈರೆಕ್ಟರಿಯನ್ನು ಬಿಡುಗಡೆ ಮಾಡಿದರು.

ಡಾ. ವೈ. ಅಬ್ದುಲ್ಲಾ ಕುಂಞಿ ತಮ್ಮ ಹೇಳಿಕೆಯಲ್ಲಿ ರಾಯಭಾರಿ ಆಲಂ ಅವರ ಪ್ರಸ್ತಾವನೆಯನ್ನು ಒಪ್ಪಿಕೊಂಡು ಸೌದಿ ಅರೇಬಿಯಾದಲ್ಲಿ ಶಿಕ್ಷಣ ಸಚಿವಾಲಯದ ನೇತೃತ್ವದ ಎಲ್ಲಾ ನಿಯಮಗಳನ್ನು ಪರಿಗಣಿಸುತ್ತ ಯನೆಪೊಯ (ಡೀಮ್ಡ್) ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಕ್ಯಾಂಪಸ್ ಅನ್ನು ಸೌದಿಯಲ್ಲಿ ಶೀಘ್ರದಲ್ಲೇ ಪ್ರಾರಂಭಿಸುವುದರ ಬಗ್ಗೆ ಪರಿಗಣಿಸಲಾಗುವುದೆಂದು ಹೇಳಿದರು.

ಡಾ. ಅಬ್ದುಲ್ಲ ಕುಂಞಿ ಅವರು ಕಾನೂನು ಇತ್ಯಾದಿ ವಿಶೇಷತೆಗಳಲ್ಲಿ ಇತರ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ಯನೆಪೊಯ (ಡೀಮ್ಡ್) ವಿಶ್ವವಿದ್ಯಾಲಯದ ಮತ್ತಷ್ಟು ವಿಸ್ತರಣಾ ಯೋಜನೆಗಳ ಬಗ್ಗೆ ಮಾತನಾಡಿದರು.

ಯನೆಪೊಯ ದಂತ ಮಹಾವಿದ್ಯಾಲಯದ ಡೀನ್ ಡಾ. ಅಖ್ತರ್ ಹುಸೇನ್, ಜಿದ್ದಾ ನ್ಯಾಷನಲ್ ಆಸ್ಪತ್ರೆಯ ಅಧ್ಯಕ್ಷರಾದ ವಿ.ಪಿ. ಮೊಹಮ್ಮದ್ ಅಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಯನೆಪೊಯ ದಂತ ಮಹಾವಿದ್ಯಾಲಯದ 30 ವರ್ಷಗಳ ಸಂಭ್ರಮಾಚರಣೆಯ ಸಂದರ್ಭ ಯನೆಪೊಯ ಸಂಸ್ಥೆಗಳ ಪಯಣವನ್ನು ಸಭೆಯು ಸಂಭ್ರಮಿಸಿತು.

2016ರಲ್ಲಿ ಸ್ಥಾಪಿತವಾದ YUAA ಸೌದಿ ಅಧ್ಯಾಯವು ಯನೆಪೊಯ ವಿಶ್ವವಿದ್ಯಾಲಯದ ವೈದ್ಯಕೀಯ, ದಂತ ವೈದ್ಯಕೀಯ, ಭೌತ ಚಿಕಿತ್ಸೆ, ಶುಶ್ರೂಷೆ, ಫಾರ್ಮಸಿ ಹಾಗೂ 11 ಇತರ ಕಾಲೇಜುಗಳಿಂದ 250ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳನ್ನು ಹೊಂದಿದೆ. ಸೌದಿ ರಾಷ್ಟ್ರದ ವಿವಿಧ ಪ್ರಾಂತ್ಯಗಳಲ್ಲಿ ಇವರು ಕಾರ್ಯನಿರ್ವಹಿಸುತ್ತಿದಾರೆ. 150 ಹಳೆಯ ವಿದ್ಯಾರ್ಥಿಗಳು ಈ ಜಾಗತಿಕ ಸಭೆಯಲ್ಲಿ ಭಾಗವಹಿಸಿದ್ದರು. YUAA ಸೌದಿ ಅಧ್ಯಾಯದ ಹೊಸ ಕಾರ್ಯಕಾರಿ ಸಮಿತಿಯನ್ನು ಈ ಸಂದರ್ಭದಲ್ಲಿ ರಚಿಸಲಾಯೀತು.

ಹಳೆ ವಿದ್ಯಾರ್ಥಿಗಳ ಸಂವಾದಾತ್ಮಕ ವೈಜ್ಞಾನಿಕ, ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ಈ ಸಭೆಯ ಪ್ರಮುಖ ಆಕರ್ಷಣೆಯಾಗಿದ್ದವು. ಸಭೆಯ ಅಂಗವಾಗಿ ಹಳೆ ವಿದ್ಯಾರ್ಥಿಗಳ ಮಕ್ಕಳು ಮತ್ತು ಕುಟುಂಬಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. YUAA ಕಾರ್ಯದರ್ಶಿ ಡಾ.ಫವಾಝ್ ಪುಲಿಸ್ಸೆರಿ ವಂದಿಸಿದರು.

ಮಂಗಳೂರಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣವನ್ನು ಗುರಿಯಾಗಿಟ್ಟುಕೊಂಡು 1991ರಲ್ಲಿ ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್ ಟ್ರಸ್ಟ್ (IAE) ಅಡಿಯಲ್ಲಿ ಯನೆಪೊಯ ವಿಶ್ವವಿದ್ಯಾಲಯವನ್ನು ಡಾ. ವೈ. ಅಬ್ದುಲ್ಲಾ ಕುಂಞಿ ಅವರ ದೂರದೃಷ್ಟಿಯಲ್ಲಿ ಸ್ಥಾಪಿಸಲಾಯಿತು.

IAE ಮತ್ತು ಯನೆಪೊಯ ಡೆಂಟಲ್ ಕಾಲೇಜು (1992 ರಲ್ಲಿ ಸ್ಥಾಪಿಸಲಾಯಿತು) ಈ ವರ್ಷ ತನ್ನ 30 ವರ್ಷಗಳ ಉತ್ಕೃಷ್ಟತೆಯನ್ನು ಆಚರಿಸುತ್ತಿದೆ. ಯನೆಪೊಯ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘವು (YUAA) ತನ್ನ ಪ್ರಾರಂಭದಿಂದಲೂ ವಿಶ್ವವಿದ್ಯಾಲಯದೊಂದಿಗೆ ಸಂಬಂಧವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News