ತುಂಬೆ ಮೆಡಿಸಿಟಿಗೆ ಕೇಂದ್ರದ ಸಹಾಯಕ ಸಚಿವ ವಿ. ಮುರಳೀಧರನ್ ಭೇಟಿ

Update: 2023-01-24 13:53 GMT

ಅಜ್ಮಾನ್, ಜ. 23: ಭಾರತದ ವಿದೇಶಾಂಗ ವ್ಯವಹಾರ ಹಾಗೂ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ವಿ. ಮುರಳೀಧರನ್ ಅವರು ಜನವರಿ 21ರಂದು ತುಂಬೆ ಮೆಡಿಸಿಟಿಗೆ ಭೇಟಿ ನೀಡಿದರು. ಭಾರತದ ಕಾನ್ಸುಲ್ ಜನರಲ್ ಡಾ. ಅಮನ್ ಪುರಿ ಹಾಗೂ ಭಾರತದ ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿ ವಿಪುಲ್ ಅವರ ಜೊತೆಗಿದ್ದರು.

 ತುಂಬೆ ಮೆಡಿಸಿಟಿಯ ಸ್ಥಾಪಕಾಧ್ಯಕ್ಷ ತುಂಬೆ ಮೊಯ್ದಿನ್ ಅವರು ಪ್ರತಿನಿಧಿಗಳನ್ನು ಸ್ವಾಗತಿಸಿದರು. ಅನಂತರ ನಡೆದ ಸಭೆಯಲ್ಲಿ ಸಮೂಹದ ಹಿರಿಯ ಅಧಿಕಾರಿಗಳು ಕೂಡ ಪಾಲ್ಗೊಂಡರು. ಭೇಟಿಯ ಸಂದರ್ಭ ಪ್ರತಿನಿಧಿಗಳಿಗೆ ಸಂಪೂರ್ಣ ತುಂಬೆ ಮೆಡಿಸಿಟಿ, ತುಂಬೆ ಯುನಿವರ್ಸಿಟಿ ಆಸ್ಪತ್ರೆಯನ್ನು ತೋರಿಸಲಾಯಿತು ಹಾಗೂ ಸಮೂಹ ಕೈಗೊಂಡ ಹಲವು ವಿಸ್ತರಣಾ ಉಪಕ್ರಮಗಳನ್ನು ವಿವರಿಸಲಾಯಿತು. ಈ ಸಂದರ್ಭ ಮಾತನಾಡಿದ ವಿ. ಮುರಳೀಧರನ್ ಅವರು, ‘‘ಯುಎಇಯ ಸಮದಾಯಕ್ಕೆ ಪ್ರಯೋಜನಕಾರಿಯಾದ ಸೇವೆಗಳೊಂದಿಗೆ ಉದ್ಯಮದ ಕಾರ್ಯಾಚರಣೆಯ 25 ವರ್ಷ ಪೂರ್ಣಗೊಳಿಸಿರುವುದಕ್ಕಾಗಿ ನಾನು ಡಾ. ತುಂಬೆ ಮೊಯ್ದಿನ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ’’ ಎಂದರು.

Similar News