ಈ ವರ್ಷ ಬಾಹ್ಯಾಕಾಶಕ್ಕೆ ಪ್ರಯಾಣಿಸಲಿರುವ ಸೌದಿಯ ಮಹಿಳಾ ಗಗನಯಾತ್ರಿ

Update: 2023-02-14 17:51 GMT

ರಿಯಾದ್,ಫೆ.13:  ಈ ವರ್ಷಾಂತ್ಯದಲ್ಲಿ ಸೌದಿ ಆರೇಬಿಯವು ತನ್ನ ಬಾಹ್ಯಾಕಾಶಕ್ಕೆ  ಪ್ರಪ್ರಥಮ ಬಾರಿಗೆ ಮಹಿಳಾ ಗಗನಯಾತ್ರಿಯೊಬ್ಬರನ್ನು ಕಳುಹಿಸಲಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

2023ನೇ ಇಸವಿಯ ದ್ವಿತೀಯ ತ್ರೈಮಾಸಿಕದಲ್ಲಿ  ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ಕ್ಕೆ ತೆರಳಲಿರುವ ಬಾಹ್ಯಾಕಾಶ ನೌಕೆಯಲ್ಲಿ ರೆಯಾನಾ ಬರ್ನಾವಿ ಅವರು  ಪ್ರಯಾಣಿಸಲಿದ್ದಾರೆ. ಸೌದಿಯ ಪುರುಷ ಗಗನಯಾತ್ರಿ ಅಲಿ ಅಲ್-ಖ್ವಾರ್ನಿ  ಜೊತೆಗಿರುವವರು’’ ಎಂದು ಸೌದಿ ಆರೇಬಿಯದ ಅಧಿಕೃತ ಸುದ್ದಿಸಂಸ್ಥೆ ಸೌದಿ ಪ್ರೆಸ್ ಏಜೆನ್ಸಿ ತಿಳಿಸಿದೆ.

ಅಮೆರಿಕದಿಂದ ಉಡಾವಣೆಗೊಳ್ಳಲಿರುವ  ಎಎಕ್ಸ್-2 ನೌಕೆಯಲ್ಲಿ ಸೌದಿ ಆರೇಬಿಯದ ಈ ಇಬ್ಬರು ಗಗನಯಾತ್ರಿಕರು ಇತರ ಗಗನಯಾತ್ರಿಗಳೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ ಎಂದು ಏಜೆನ್ಸಿ ತಿಳಿಸಿದೆ.

2019ರಲ್ಲಿ ನೆರೆಯ ರಾಷ್ಟ್ರವಾದ ಯುಎಇ ಬಾಹ್ಯಾಕಾಶಕ್ಕೆ ತನ್ನ ದೇಶದ ಪೌರರೊಬ್ಬರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಆ ಸಾಧನೆಯನ್ನು ಮಾಡಿದ ಪ್ರಪ್ರಥಮ ಆರಬ್‌ರಾಷ್ಟ್ರವೆಂಬ ದಾಖಲೆಯನ್ನು  ನಿರ್ಮಿಸಿತ್ತು.

ಯುಎಇನ ಗಗನಯಾತ್ರಿ ಹಝ್ಝಾ ಅಲ್ ಮನ್ಸೂರಿ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಎಂಟು ದಿನಗಳನ್ನು ಕಳೆದಿದ್ದರು.  ಇನ್ನೋರ್ವ ಯುಎಇ ಗಗನಯಾತ್ರಿ ಸುಲ್ತಾನ್ ಅಲ್-ನೆಯಾದಿ ಅವರು ಕೂಡಾ ಈ ತಿಂಗಳ ಅಂತ್ಯದಲ್ಲಿ ಗಗನಯಾತ್ರೆ ನಡೆಸಲಿದ್ದಾರೆ.

Similar News