ಡೆಲಿವರಿ ಬಾಯ್‌ಗಳೊಂದಿಗೆ ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ ಯುಎಇ ‌ಬಿಲಿಯಾಧೀಶ

Update: 2023-04-24 10:23 GMT

ದುಬೈ: ಸಂಯುಕ್ತ ಅರಬ್‌ ಸಂಸ್ಥಾನದ ಆಹಾರ ಡೆಲಿವರಿ ಸಂಸ್ಥೆ ನೂನ್‌ ಇದರ ಸ್ಥಾಪಕರಾದ ಮುಹಮ್ಮದ್‌ ಅಲಬ್ಬರ್‌ ಅವರು ರಮಝಾನ್‌ ತಿಂಗಳ ಉಪವಾಸವನ್ನು ತಮ್ಮ ಸಂಸ್ಥೆಯ ಡೆಲಿವರಿ ಉದ್ಯೋಗಿಗಳೊಂದಿಗೆ ತೊರೆಯುವ ಮೂಲಕ ಮಾದರಿಯಾಗಿದ್ದಾರೆ.

ರಮಝಾನ್‌ ತಿಂಗಳಿನಲ್ಲಿ ಅವರು ಚಾಲಕರ ನಮ್ಶಿ ಫೆಸಿಲಿಟಿಗೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಈ ಕುರಿತು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿ ತಮ್ಮ ನೂನ್‌ ಮತ್ತು ನಮ್ಶಿ ಫ್ರಂಟ್‌ಲೈನ್‌ ತಂಡಗಳ ಸೇವೆ ಹಾಗೂ ರಮದಾನ್ ಮಾಸದಲ್ಲಿ ಅವರ ಅವಿರತ ಶ್ರಮವನ್ನು ಶ್ಲಾಘಿಸಿದರು.

ಅವರು ಶೇರ್‌ ಮಾಡಿದ ವೀಡಿಯೋದಲ್ಲಿ ತಮ್ಮ ಡೆಲಿವರಿ ಚಾಲಕರೊಂದಿಗೆ ಅವರು ಮಾತನಾಡುತ್ತಿರುವುದು ಹಾಗೂ ಅವರಿಗೆ ಇಫ್ತಾರ್‌ ಒದಗಿಸುತ್ತಿರುವುದನ್ನು ಕಾಣಬಹುದು.

ದಿನಸಿ ವಸ್ತುಗಳು ಮತ್ತು ಇತರ ಅಗತ್ಯ ಸಾಮಗ್ರಿಗಳು ಬಳಕೆದಾರರನ್ನು 15 ನಿಮಿಷಗಳಲ್ಲಿ ತಲುಪಿಸುವ 'ನೂನ್‌ ಇನ್‌ 15 ಮಿನಿಟ್ಸ್‌' ಗಾಗಿ ಕೆಲಸ ಮಾಡುವ ಡೆಲಿವರಿ ಚಾಲಕರೊಂದಿಗೂ ಅವರು ಸಂವಹನ ನಡೆಸಿದರು.

ಈ ಬಾರಿ ರಮದಾನ್ ಮಾಸದ ವೇಳೆ ಪ್ರಮುಖವಾಗಿ ಇಫ್ತಾರ್‌ ಸಮಯವಾಗುವಾಗ ಫುಡ್‌ ಡೆಲಿವರಿ ಆಪ್‌ಗಳಿಗೆ ಬೇಡಿಕೆ ಅಧಿಕವಾಗಿತ್ತು.

Similar News