ಅಜ್ಮಾನ್: ತುಂಬೆ ಮೆಡಿಸಿಟಿಗೆ ಭೇಟಿ ನೀಡಿದ ಇರಾನ್‌ನ ಶಾಹಿದ್‌ ಬೆಹೆಶ್ತಿ ವೈದ್ಯಕೀಯ ವಿಜ್ಞಾನ ವಿವಿಯ ಉನ್ನತ ನಿಯೋಗ

Update: 2023-05-26 17:27 GMT

ಅಜ್ಮಾನ್: ಇರಾನ್‌ನ ಶಾಹಿದ್ ಬೆಹೆಶ್ತಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ  ಅಧ್ಯಕ್ಷರಾದ ಡಾ. ಆಲಿರೆಝಾ ಝಾಲಿ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗವು ಮೇ 25, ಗುರುವಾರದಂದು ತುಂಬೆ ಮೆಡಿಸಿಟಿ (ಅಜ್ಮಾನ್) ಗೆ ಭೇಟಿ ನೀಡಿತು. ಎರಡೂ ಸಂಸ್ಥೆಗಳ ನಡುವೆ ಜ್ಞಾನ ಹಂಚಿಕೆಯ ನಿಟ್ಟಿನಲ್ಲಿ ದೀರ್ಘಕಾಲಿಕ ಒಡಂಬಡಿಕೆಗಳಿಗೆ ಪೂರ್ವಭಾವಿಯಾಗಿ ಈ ಭೇಟಿ ನಡೆದಿದೆ.

ನಿಯೋಗವನ್ನು ತುಂಬೆ ಗ್ರೂಪ್‌ನ ಸಂಸ್ಥಾಪಕ ಡಾ. ತುಂಬೆ ಮೊಯ್ದಿನ್, ತುಂಬೆ ಹೆಲ್ತ್‌ ಕೇರ್‌ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ ಹಾಗೂ ಇತರ ಅಧಿಕಾರಿಗಳು ಸ್ವಾಗತಿಸಿದರು.

ಅತಿಥಿಗಳನ್ನು ಗಲ್ಫ್ ಮೆಡಿಕಲ್‌ ಯುನಿವರ್ಸಿಟಿಯ ಶೈಕ್ಷಣಿಕ ಮತ್ತು ಸಂಶೋಧನಾ ಸೌಲಭ್ಯಗಳು, ತುಂಬೆ ರಿಹ್ಯಾಬಿಲಿಟೇಶನ್‌ ಹಾಸ್ಪಿಟಲ್, ತುಂಬೆ ಡೆಂಟಲ್‌ ಹಾಸ್ಪಿಟಲ್‌ ಮತ್ತು ತುಂಬೆ ಯುನಿವರ್ಸಿಟಿ  ಹಾಸ್ಪಿಟಲ್‌ ಇಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿನ ವಿವಿಧ ಸವಲತ್ತುಗಳ ಪರಿಚಯ ಮಾಡಿಕೊಡಲಾಗಯಿತು. ತುಂಬೆ ಗ್ರೂಪ್‌ನ ಚಟುವಟಿಕೆಗಳನ್ನು ವಿವರಿಸುವ ವೀಡಿಯೋವನ್ನೂ ಪ್ರದರ್ಶಿಸಲಾಯಿತು.

ತುಂಬೆ ಮೆಡಿಸಿಟಿಯಲ್ಲಿನ ಸೌಲಭ್ಯಗಳು, ಶೈಕ್ಷಣಿಕ ಪಠ್ಯಕ್ರಮದ ಗುಣಮಟ್ಟ ಮತ್ತು ನಾವೀನ್ಯತೆ ಮತ್ತು ಆವಿಷ್ಕಾರಕ್ಕೆ ನೀಡಲಾಗುತ್ತಿರುವ ಮಹತ್ವವನ್ನು ಡಾ. ಆಲಿರೇಝಾ ಝಾಲಿ ಶ್ಲಾಘಿಸಿದರು..

ಖಾಸಗಿ ವಯದಲ್ಲಿ ಮೊದಲ ಪ್ರಯತ್ನ ಎಂದು ತಿಳಿಯಲಾದ ಪೂರ್ಣ ಪ್ರಮಾಣದ ಶೈಕ್ಷಣಿಕ ಆರೋಗ್ಯ ವ್ಯವಸ್ಥೆಯನ್ನು ಸ್ಥಾಪಿಸಲು ಗಲ್ಫ್ ಮೆಡಿಕಲ್‌ ಯುನಿವರ್ಸಿಟಿ ನಡೆಸುತ್ತಿರುವ  ಯತ್ನಗಳನ್ನೂ ನಿಯೋಗದ ಪ್ರತಿನಿಧಿಗಳು ಪ್ರಶಂಸಿಸಿದರು.  

ನಿಯೋಗದ ಭೇಟಿಗೆ ಧನ್ಯವಾದ ತಿಳಿಸಿದ ಡಾ. ತುಂಬೆ ಮೊಯ್ದಿನ್, ಆರೋಗ್ಯ ಸೇವೆ ಕ್ಷೇತ್ರದಲ್ಲಿ ದೇಶದ ಸಾಧನೆಗಳಿಂದ ಪ್ರಯೋಜನ ಪಡೆಯಲು, ಇರಾನ್‌ನಲ್ಲಿರುವ ಆರೋಗ್ಯ ಸಂಸ್ಥೆಗಳೊಂದಿಗೆ ಸಂಬಂಧವನ್ನು ಬಲಪಡಿಸಲು ತುಂಬೆ ಗ್ರೂಪ್ ಆಶಿಸುತ್ತಿದೆ ಎಂದು ಹೇಳಿದರು.

ಶಾಹಿದ್‌ ಬೆಹೆಶ್ತಿ ವಿವಿ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಲು ಸಂತೋಷವಿದೆ, ಇದು ವೈದ್ಯಕೀಯ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದರು.

Similar News