×
Ad

ದಮ್ಮಾಮ್‌: 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ; ಬಹುಭಾಷಾ ಕವಿಗೋಷ್ಠಿ

Update: 2024-02-10 16:56 IST

ದಮ್ಮಾಮ್‌: 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಪ್ರಯುಕ್ತ ದಮ್ಮಾಮ್‌ ನ ಸಫ್ವಾದಲ್ಲಿರುವ ಅಲ್ ಹಿನಾಬಿಲ್ ಸಭಾಂಗಣದಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು.

ಸಮಾರಂಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಝಕರಿಯಾ ಜೋಕಟ್ಟೆ, ಶೇಕ್ ಕರ್ಣಿರೆ, ಶಾಸಕ ಅಶೋಕ್ ರೈ, ಪ್ರಧಾನ ಕಾರ್ಯದರ್ಶಿ ರಫೀಕ್ ಸೂರಿಂಜೆ, ಕಜಾಂಚಿ ಅಯಾಝ್ ಕೈಕಂಬ, ಕೋ ಆರ್ಡಿನೇಟರ್ ಫಾರೂಕ್ ಮತ್ತಿತರರು ಉಪಸ್ಥಿತರಿದ್ದರು.

ಹುಸೈನ್ ಕಾಟಿಪಳ್ಳ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಯಾಕೂಬ್ ಖಾದರ್ ಗುಲ್ವಾಡಿ, ಬಶೀರ್ ಅಹ್ಮದ್ ಕಿನ್ಯಾ, ಪ್ರಭಾ ಸುವರ್ಣ ಮುಂಬೈ, ಶಮೀಮಾ ಕುತ್ತಾರ್, ರೈಹಾನ್ ವಿ.ಕೆ.ಸಚ್ಚರಿಪೇಟೆ, ಫೌಝಿಯಾ ಹರ್ಷಾದ್, ಅನಿವಾಸಿ ಕವಿ ಆರಿಫ್ ಜೋಕಟ್ಟೆ ಕವನ ವಾಚಿಸಿದರು.

ಬಳಿಕ ಮಂಗಳೂರಿನ ಹೆಸರಾಂತ ಗಾಯಕರಾದ ಸಮದ್ ಗಡಿಯಾರ, ಶಮೀರ್ ಮುಲ್ಕಿ, ಫಾಯಿಝ್ ಕಾಟಿಪಳ್ಳ ಹಾಡಿದರು.




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News