×
Ad

ದುಬೈ: ಅ.20ರಂದು ಮಸ್‌ದರ್ ವತಿಯಿಂದ ತಾಜುಲ್ ಉಲಮಾ ಸಂಸ್ಮರಣಾ ಸಂಗಮ

Update: 2024-10-18 09:49 IST

ದುಬೈ: ತಾಜುಲ್ ಉಲಮಾ ಉಳ್ಳಾಲ ತಂಙಳ್ ರವರ ಸಂಸ್ಮರಣಾ ಸಂಗಮ ಅ. 20ರ ಸಂಜೆ ದೇರಾದುಬೈ ಲ್ಯಾಂಡ್‌ಮಾರ್ಕ್ ಹೋಟೆಲ್‌ನಲ್ಲಿ ಖುರ್ರತುಸ್ಸಾದಾತ್ ವೇದಿಕೆಯಲ್ಲಿ ನಡೆಯಲಿದೆ.

ಉತ್ತರ ಕರ್ನಾಟಕದಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಮಸ್‌ದರ್ ಎಜ್ಯು ಆಂಡ್ ಚಾರಿಟಿ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ತಾಜುಲ್ ಉಲಮಾ ಸಂಸ್ಮರಣೆ, ಮುಹ್ಯದ್ದೀನ್ ಮಾಲೆ ಮಜ್ಲಿಸ್ ನಡೆಯಲಿದ್ದು ಉಲಮಾ ಉಮರಾ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಕನ್ವೀನರ್ ಆಸಿಫ್ ಇಂದ್ರಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News