×
Ad

ದಮ್ಮಾಮ್| ಹೆಲ್ಪಿ (heLPy) ಸಂಘಟನೆಯ ವಾರ್ಷಿಕ ಮಹಾಸಭೆ; ಪದಾಧಿಕಾರಿಗಳ ಆಯ್ಕೆ

Update: 2025-01-30 17:52 IST

ದಮ್ಮಾಮ್: ಹೆಲ್ಪಿ (heLPy) ಸೌದಿ ಅರೇಬಿಯಾ ಸಮಿತಿ, ತನ್ನ ಸಮಾಜ ಸೇವೆಯನ್ನು 13ನೇ ವರ್ಷಕ್ಕೆ ವಿಸ್ತರಿಸುವ ಸಂದರ್ಭದಲ್ಲಿ ಸಮಿತಿಯ ವಾರ್ಷಿಕ ಮಹಾಸಭೆಯು "ರೆಡ್ ಪೋಟ್" ಹೋಟೆಲ್ ದಮ್ಮಾಮ್ ಇದರ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಹೆಲ್ಪಿ "Feed The Needy" ಮೇಲ್ವಿಚಾರಕ ಮೊಹಮ್ಮದ್ ರಿಯಾಝ್‌ ಅವರು ಸ್ವಾಗತಿಸಿ, ಸಂಘಟನೆಯ ಕಿರುಪರಿಚಯ ನೀಡಿದರು. ಸ್ಥಾಪಕ ಅಧ್ಯಕ್ಷರಲ್ಲಿ ಓರ್ವರಾದ ಮೊಹಿದಿನ್ ಬಾವ ಅವರು ಖುರ್‌ಆನ್ ಪಾರಾಯಣ ಮಾಡಿದರು. ಹಾಲಿ ಅಧ್ಯಕ್ಷರಾದ ಮನ್ಸೂರ್ ಮಂಜೇಶ್ವರ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಮುಖ್ಯ ಕಾರ್ಯದರ್ಶಿ ಸುನೀರ್ ಅಹ್ಮದ್ ಹೆಲ್ಪಿ (heLPy) ಸಂಘಟನೆಯ 2023 - 24 ಸಾಲಿನ ವರದಿ ವಾಚಿಸಿದರು. ಕೋಶಾಧಿಕಾರಿ ಮೊಹಮ್ಮದ್ ನಿಝಾರ್ ಲೆಕ್ಕಪತ್ರ ಮಂಡಿಸಿ ಸಭೆಯ ಅನುಮೋದನೆ ಪಡೆದರು. ಸಲಹೆಗಾರ ಅಬ್ದುಲ್ ಸಲಾಂ ಶವಾಝ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಹಾಲಿ ಸಮಿತಿಯನ್ನು ಬರ್ಖಾಸ್ತುಗೊಳಿಸಿದರು.

ಈ ಸಂದರ್ಭದಲ್ಲಿ 2025-26 ನೇ ಸಾಲಿನ ನೂತನ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷ - ಮೊಹಮ್ಮದ್ ಆಸಿಫ್ ಜೆಪ್ಪು, ಉಪಾಧ್ಯಕ್ಷ - ಮೊಹಿದಿನ್ ಬಾವ.

ಪ್ರಧಾನ ಕಾರ್ಯದರ್ಶಿ - ಸುನೀರ್ ಅಹ್ಮದ್, ಜೊತೆ ಕಾರ್ಯದರ್ಶಿ - ಆಸಿಫ್ ಮೊಹಿಯುದ್ದೀನ್.

ಕೋಶಾಧಿಕಾರಿ - ಮೊಹಮ್ಮದ್ ನಿಝಾರ್, ಉಪ ಕೋಶಾಧಿಕಾರಿ - ಉಸ್ಮಾನ್ ಷರೀಫ್ ಮತ್ತು ಇಸ್ಮಾಯಿಲ್ ಕಡಂಬಾರ್.

"Feed The Needy" ಮೇಲ್ವಿಚಾರಕ - ಮೊಹಮ್ಮದ್ ರಿಯಾಝ್, ಉಪ ಮೇಲ್ವಿಚಾರಕ - ಮನ್ಸೂರ್ ಮಂಜೇಶ್ವರ.

ಲೆಕ್ಕ ಪರಿಶೋಧಕ - ಅಬ್ದುಲ್ ಖಾದರ್ ಶಹೀರ್.

ವಿದ್ಯಾಭ್ಯಾಸ ವಿಭಾಗದ ಮೇಲ್ವಿಚಾರಕ - ಸಮೀರ್ ಅಹ್ಮದ್.

ಸಂಘಟನಾ ಕಾರ್ಯದರ್ಶಿ - ಸುನೈನ್ ಅಹ್ಮದ್.

ಕಾರ್ಯಕ್ರಮಗಳ ಉಸ್ತುವಾರಿ - ಅಶ್ರಫ್ ಯೂಸುಫ್.


25 ಮಂದಿಯ ಕಾರ್ಯಕಾರಿ ಸದಸ್ಯರನ್ನು ನೇಮಿಸಲಾಯಿತು.

ಅಲ್ ಖೋಬರ್, ದಮ್ಮಾಮ್ ಹಾಗು ಜುಬೈಲ್ ವಲಯದ ಹಲವು ಪ್ರಮುಖರು ಭಾಗವಹಿಸಿದ್ದ ಸಭೆಯಲ್ಲಿ, ನೂತನ ಅಧ್ಯಕ್ಷರಾದ ಮೊಹಮ್ಮದ್ ಆಸಿಫ್ ಅವರು ಮಾತನಾಡುತ್ತಾ, ಹೆಲ್ಪಿ (heLPy) ಅರ್ಹರನ್ನು ಗುರುತಿಸಿ, ತನ್ನ ಸಹಾಯ ಹಸ್ತವನ್ನು ನೀಡುತ್ತಿದೆ, ಮುಂದಕ್ಕೂ ಇನ್ನಷ್ಟು ಫಲಾನುಭವಿಗಳನ್ನು ನಮ್ಮ ಸಂಘಟನೆಯ ಛತ್ರದಡಿಯಲ್ಲಿ ಒಗ್ಗೂಡಿಸಲು ಸರ್ವರ ಸಹಕಾರ ಕೋರಿದರು.

ಪ್ರಧಾನ ಕಾರ್ಯದರ್ಶಿ, ಸುನೀರ್ ಅಹ್ಮದ್ ವಂದಿಸಿದರು. ಮೊಹಮ್ಮದ್ ರಿಯಾಝ್ ಅವರ ದುಆದೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News