×
Ad

ದಮಾಮ್ ಉದ್ಯಾವರ ಪ್ರೀಮಿಯರ್ ಲೀಗ್ ಸೀಸನ್-2: ಕ್ರಿಕೆಟ್ ಟೂರ್ನಮೆಂಟ್ ಜೆರ್ಸಿ, ಚಾಂಪಿಯನ್ಸ್ ಟ್ರೋಫಿ ಲೋಕಾರ್ಪಣೆ

Update: 2024-11-10 17:28 IST

ದಮಾಮ್: ಮಂಜೇಶ್ವರದ ಉದ್ಧಾರಕ್ಕಾರ್ ಪ್ರವಾಸಿ ಒಕ್ಕೂಟವು ಆಯೋಜಿಸಿರುವ ಉದ್ಯಾವರ ಪ್ರೀಮಿಯರ್ ಲೀಗ್ ಸೀಸನ್-2 ( UPL-2024) ಕ್ರಿಕೆಟ್ ಟೂರ್ನಮೆಂಟ್ ನ ಜೆರ್ಸಿ ಹಾಗು ಚಾಂಪಿಯನ್ಸ್ ಟ್ರೋಫಿ ಲೋಕಾರ್ಪಣೆಯು ಜುಬೈಲ್ ಕ್ಲಾಸಿಕ್ ಸಭಾಂಗಣದಲ್ಲಿ ನಡೆಯಿತು.

ಜುಬೈಲ್ ನ ಅಲ್ ಫಲಾಹ್ ಮೈದಾನದಲ್ಲಿ ನ. 15 ರಂದು ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಟೂರ್ನಮೆಂಟ್ ನಡೆಯಲಿದೆ.

ಟ್ರೇಡಕ್ಸ್ - ಇಸ್ಮಾಯಿಲ್ ಎಂ ಪಿ, ಜೆಬಿ ಲೆಜೆಂಡರಿಸ್ -  ಅಝೀಜ್ ಜೆಬಿ, ಕ್ರಿಸ್ಟಲ್ - ತಹ್ಸೀಮ್ ಸಯ್ಯದ್, ಸ್ಪೋರ್ಟಿಂಗ್ ಎಫ್ಸಾಲ್ - ಸಯ್ಯದ್ ಸಿನಾನ್, ಐಬಿ ರಿಯಾದ್ ರೋಕರ್ಸ್ - ಇಕ್ಬಾಲ್ ಮೊಹಮ್ಮದ್, ತಂಡ ಮತ್ತು ಪ್ರಾಯೋಜಕರ ಸಮ್ಮುಖದಿಂದ ಲೋಕಾರ್ಪಣೆ ಕಾರ್ಯಕ್ರಮ ನಡೆಸಲಾಯಿತು.

ದಮಾಮ್ ಕಫ್ತಾನ ಫಯಾಝ್ ಎಚ್ಎಂಎಸ್ ಕಾರ್ಯಕ್ರಮ ಉದ್ಘಾಟಿಸಿದರು. ಚಾಂಪಿಯನ್ಸ್ ಟ್ರೋಫಿಯನ್ನು‌ ಅನ್ಸಾಫ್ ಯುನಿಫೈಡ್, ಫೈಝಲ್ ಜೆಬಿ ಸಮರ್ಪಿಸಿದರು. ತಂಡಗಳ ಮತ್ತು ಟೂರ್ನಮೆಂಟ್ ಪ್ರಾಯೋಜಕರಾದ ಸಯ್ಯದ್ ಸಿನಾನ್, ಇಸ್ಮಾಯಿಲ್ ಎಂ ಪಿ, ತಸೀಮ್ ತಂಙಳ್, ನಝೀರ್ ಶಾಫಿ ಪಾಲ್ಗೊಂಡರು.

ಝಮೀರ್, ಸಿನಾನ್, ಇಜಾಝ್, ಸಫ್‌ವಾನ್ ಕಾರ್ಯಕ್ರಮದ ಮುತುವರ್ಜಿ ವಹಿಸಿದರು.ರಾಝಿಕ್ ಝಮಿಲ್ ಉದ್ಯಾವರ ಮತ್ತು ಆಸೀಫ್ ಕೆಕೆ ವಂದಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News