ದುಬೈ: ಸಮಸ್ತ ಶತಾಬ್ದಿ ಅಂತರಾಷ್ಟ್ರೀಯ ಪ್ರಚಾರ ಉದ್ಘಾಟನೆ
Update: 2025-11-06 12:56 IST
ದುಬೈ. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ಶತಮಾನೋತ್ಸವದ ಅಂತರರಾಷ್ಟ್ರೀಯ ಪ್ರಚಾರ ಉದ್ಘಾಟನೆಯು ದುಬೈನಲ್ಲಿ ನಡೆಯಿತು.
ಸಮಸ್ತದ ಹಲವು ನಾಯಕರ ಸಹಿತ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಜಾಗತಿಕ ಸಭೆ, ಮಾಧ್ಯಮ ಸೆಮಿನಾರ್ ಮುಂತಾದ ಕಾರ್ಯಕ್ರಮಗಳು ನಡೆದವು.
ಗಲ್ಫ್ ಸುಪ್ರಭಾತ ಡಿಜಿಟಲ್ ವಿಸ್ತರಣೆ, ಸುಪ್ರಭಾತ ಕನ್ನಡ ಆನ್‌ಲೈನ್ ಆವೃತ್ತಿ, SIC ಜಾಗತಿಕ ಸಮಿತಿ, ತಹಿಯ್ಯ ನಿಧಿಗೆ ಯುಎಇ ಸುನ್ನಿ ಕೌನ್ಸಿಲ್ ನ ಕೊಡುಗೆಯನ್ನು ಘೋಷಿಸಲಾಯಿತು.
ಸಮಸ್ತ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರೀ ತಂಙಳ್ ಉದ್ಘಾಟಿಸಿದ ಸಮ್ಮೇಳನದಲ್ಲಿ ಪಾಣಕ್ಕಾಡ್ ಸ್ವಾದಿಕಲೀ ಶಿಹಾಬ್ ತಂಙಳ್ ಅಧ್ಯಕ್ಷತೆ ವಹಿಸಿದರು.
ಕರ್ನಾಟಕದಿಂದ ಕೇಂದ್ರ ಮುಶಾವರ ಸದಸ್ಯರುಗಳಾದ ಬಂಬ್ರಾಣ ಉಸ್ತಾದ್, ತೋಡಾರ್ ಉಸ್ತಾದ್, ಕೊಡಗು ಅಬ್ದುಲ್ಲಾ ಫೈಝಿ ಉಸ್ತಾದ್ ಸಹಿತ ವಿವಿಧ ಗಣ್ಯರು ಭಾಗವಸಿದರು.