×
Ad

ಸೌದಿ ಅರೇಬಿಯಾ | ಮೂವರು ಮಕ್ಕಳನ್ನು ಹತ್ಯೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಹೈದರಾಬಾದ್ ಮೂಲದ ಮಹಿಳೆ

Update: 2025-08-28 19:30 IST
Photo | NDTV

ಅಲ್ ಖೋಬರ್ : ಸೌದಿ ಅರೇಬಿಯಾದ ಅಲ್ ಖೋಬರ್ ನಗರದಲ್ಲಿ ಹೈದರಾಬಾದ್ ಮೂಲದ ಮಹಿಳೆಯೋರ್ವರು ತನ್ನ ಮೂವರು ಮಕ್ಕಳನ್ನು ಹತ್ಯೆ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ.

ಹೈದರಾಬಾದ್‌ನ ಮುಹಮ್ಮದಿ ಲೈನ್ಸ್ (ಎಂಡಿ ಲೈನ್ಸ್) ನಿವಾಸಿಯಾಗಿರುವ ಸೈದಾ ಹುಮೈರಾ ಅಮ್ರೀನ್ ಎಂಬ ಮಹಿಳೆ ತನ್ನ ಮೂವರು ಮಕ್ಕಳನ್ನು ಬಾತ್ ಟಬ್‌ನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲಸಕ್ಕೆ ತೆರಳಿದ್ದ ಮುಹಮ್ಮದ್ ಶಹನವಾಝ್ ಮನೆಗೆ ವಾಪಾಸ್ಸಾದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಎಂಟು ತಿಂಗಳ ಹಿಂದೆ ಶಹನವಾಝ್ ತನ್ನ ಕುಟುಂಬವನ್ನು ವಿಸಿಟಿಂಗ್‌ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಕರೆದೊಯ್ದಿದ್ದರು.

ಕೊಲೆಯ ನಂತರ ಸೈದಾ ಹುಮೈರಾ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಜಾರಿಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ಪ್ರಸ್ತುತ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

“ವಿಸಿಟಿಂಗ್‌ ವೀಸಾದಲ್ಲಿ ಸೌದಿ ಅರೇಬಿಯಾಗೆ ತೆರಳಿದ್ದ ಅಮ್ರೀನ್, ಕೆಲವು ತಿಂಗಳುಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಒಂಟಿತನದಿಂದ ಬಳಲುತ್ತಿದ್ದಳು” ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಘಟನೆಗೆ ಕೌಟುಂಬಿಕ ಕಲಹಗಳು ಕಾರಣವಾಗಿರಬಹುದು ಎಂದು ವರದಿಯಾಗಿವೆ.

ಈ ಕುರಿತು ಸೌದಿ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News