×
Ad

ಕೃಷ್ಣಾಪುರ ಇಸ್ಲಾಮಿಕ್ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ (KISWA) ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ

Update: 2025-10-27 13:47 IST

 ಮುಬೀನ್ ಕೃಷ್ಣಾಪುರ| ಫೈಝಲ್ | ಇಬ್ರಾಹಿಂ ಅಬ್ದುಲ್‌ ಖಾದರ್

ರಿಯಾದ್‌ : ಕೃಷ್ಣಾಪುರ ಇಸ್ಲಾಮಿಕ್ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ (KISWA) ಇದರ ವಾರ್ಷಿಕ ಕಿಸ್ವ ಮೀಟ್ ಮತ್ತು ಮಹಾಸಭೆಯು ಇತ್ತೀಚಿಗೆ ಸೌದಿ ಅರೇಬಿಯಾದ ಅಲ್ ಜುಬೈಲ್ ನ ‘ಫೈವ್ ಸ್ಟಾರ್ ರೆಸಾರ್ಟ್ ನಲ್ಲಿ ಜರುಗಿತು .

ಸಂಸ್ಥೆಯ ಅಧ್ಯಕ್ಷ ಕಬೀರ್ ಕೆ ಎಂ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಅನ್ವರ್ ಜಾಕ್ ರವರ ಕಿರಾಅತ್‌ನೊಂದಿಗೆ ಪ್ರಾರಂಭಗೊಂಡ ಸಭೆಯನ್ನು ಎಚ್‌ಎನ್‌ಜಿಸಿ ಇದರ ಸಿಇಒ ಹಾಜಿ ಇಸ್ಮಾಯಿಲ್ ಅವರು ಉದ್ಘಾಟಿಸಿದರು. ಸಂಸ್ಥೆಯ ಸದಸ್ಯ ಬಿ ಎ ಅಬೂಸಾಲಿ ಅವರು ಸ್ವಾಗತಿಸಿದರು.

ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಜಮಾತ್ ಅವರು 2024-2025 ನೇ ಸಾಲಿನ ಲೆಕ್ಕ ಪತ್ರವನ್ನು ಮಂಡಿಸಿದರು . 45 ಸದಸ್ಯರಿರುವ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿ , ಈ ಕೆಳಗಿನವರನ್ನು ಪಧಾದಿಕಾರಿಗಳನ್ನಾಗಿ ಆಯ್ಕೆ ಮಾಡಲಾಯ್ತು .

ಅಧ್ಯಕ್ಷರಾಗಿ  ಮುಬೀನ್ ಕೃಷ್ಣಾಪುರ ,ಉಪಾಧ್ಯಕ್ಷರಾಗಿ  ಫೈಝಲ್ ಎಫ್‌ ಎನ್  ಮತ್ತು  ಇಬ್ರಾಹಿಂ ರಾಕ ,ಪ್ರಧಾನ ಕಾರ್ಯದರ್ಶಿಯಾಗಿ  ಕೆ ಸಿ  ಮೊಹಮ್ಮದ್ ಅಲಿ, ಕಾರ್ಯದರ್ಶಿಗಳಾಗಿ  ಬಿ ಎ ಅಬೂಸಾಲಿ ಮತ್ತು ಆರಿಫ್ ಬದ್ರಿಯಾ ,ಕೋಶಾಧಿಕಾರಿಯಾಗಿ ಇಮ್ತಿಯಾಜ್ ಎಚ್‌ಎನ್‌ಜಿಸಿ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯ್ತು .

ಕೆ ಸಿ ಮೊಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಕಾದರ್ ಬಾಂಬೆ ಧನ್ಯವಾದ ಸಲ್ಲಿಸಿದರು.

 

 

 

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News