×
Ad

ಒಮಾನ್ ಕರಾವಳಿಯಲ್ಲಿ ಮುಳುಗಿದ ತೈಲ ಟ್ಯಾಂಕರ್: 13 ಭಾರತೀಯರು ನಾಪತ್ತೆ

Update: 2024-07-17 07:39 IST

PC:x.com/Jansatta

ಮಸ್ಕತ್: ಸೋಮವಾರ ಒಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮುಳುಗಿದ ಪ್ರಕರಣದಲ್ಲಿ 13 ಮಂದಿ ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ದೇಶದ ಸಾಗರ ಭದ್ರತಾ ಕೇಂದ್ರ ಪ್ರಕಟಿಸಿದೆ.‌

"ಪ್ರೆಸ್ಟೀಜ್ ಫಾಲ್ಕನ್" ಹೆಸರಿನ ಹಡಗಿನಲ್ಲಿ 13 ಮಂದಿ ಭಾರತೀಯರು ಮತ್ತು ಮೂವರು ಶ್ರೀಲಂಕನ್ನರು ಇದ್ದರು ಎಂದು ಒಮಾನಿ ಕೇಂದ್ರ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.

ಹಡಗು ಮಗುಚಿದ ಸ್ಥಿತಿಯಲ್ಲೇ ಇನ್ನೂ ಮುಳುಗಿಕೊಂಡಿದೆ ಎಂದು ಸಾಗರ ಭದ್ರತಾ ಕೇಂದ್ರ ಹೇಳಿದ್ದಾಗಿ ರಾಯ್ಟರ್ಸ್ ವರದಿ ಮಾಡಿದೆ. ಹಡಗಿನಿಂದ ಇನ್ನೂ ತೈಲ ಉತ್ಪನ್ನಗಳು ಸೋರಿಕೆಯಾಗುತ್ತಿವೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ.

ಶಿಪ್ಪಿಂಗ್ ವೆಬ್ ಸೈಟ್ ಮೆರಿಟ್ರಾಫಿಕ್.ಕಾಮ್ ಪ್ರಕಾರ, ದುಬೈನ ಹಮ್ರಿಯಾದಿಂದ ಹೊರಟ ಈ ಹಡಗು ಯೆಮನ್ ನ ಅಡೇನ್ ಬಂದರು ನಗರಕ್ಕೆ ಪ್ರಯಾಣಿಸುತ್ತಿತ್ತು. ನಾಲ್ಕು ದಿನ ಹಿಂದೆ ಇದರ ನಿಖರ ಸ್ಥಳದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪ್ರೆಸ್ಟೀಜ್ ಫಾಲ್ಕನ್ ಹಡಗು 117 ಮೀಟರ್ ಉದ್ದದ್ದಾಗಿದ್ದು, 2007ರಲ್ಲಿ ಈ ತೈಲ ಟ್ಯಾಂಕರ್ ನಿರ್ಮಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News