×
Ad

ಕಲ್ಲಡ್ಕ ಅಬ್ರಾಡ್ ಫೋರಂ ವತಿಯಿಂದ ಅನಿವಾಸಿಗಳ ಸಮ್ಮಿಲನ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

Update: 2024-09-20 19:47 IST

ಸೌದಿ ಅರೇಬಿಯಾ: ಕಲ್ಲಡ್ಕ ಅಬ್ರಾಡ್ ಫೋರಂ ಸೌದಿ ಅರೇಬಿಯಾ ಸಮಿತಿಯು ಆಯೋಜಿಸುವ ಜಿಸಿಸಿ ರಾಷ್ಟ್ರಗಳಲ್ಲಿ ನೆಲೆಸಿ ರುವ ಕಲ್ಲಡ್ಕದ ಅನಿವಾಸಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಜುಬೈಲ್‌ನಲ್ಲಿರುವ ಬ್ರೈಟ್ ಸಪೋರ್ಟ್ ಕಚೇರಿ ಹಾಗೂ ದುಬೈನಲ್ಲಿರುವ ಹೋಟೆಲ್ ಕ್ಯಾಲಿಕಟ್ ಪ್ಯಾರಾಗಾನ್‌ನಲ್ಲಿ ನಡೆಯಿತು.

ಯುಎಇ, ಖತರ್, ಕುವೈತ್, ಒಮಾನ್, ಬಹರೈನ್, ಸೌದಿ ಅರೇಬಿಯಾದ ವಿವಿಧ ಕಡೆಗಳಲ್ಲಿ ನೆಲೆಸಿರುವ ಕಲ್ಲಡ್ಕದ ಅನಿವಾಸಿ ಸಹೋದರರನ್ನು ಒಗ್ಗೂಡಿಸಿ ನಡೆಸುವ ಈ ಕಾರ್ಯಕ್ರಮವು ನವೆಂಬರ್ 22ರಂದು ನಡೆಯಲಿದೆ ಎಂದು ಬ್ರೈಟ್ ಸಪೋರ್ಟ್ ಮಾಲಕ ರಫೀಕ್ ಘೋಷಿಸಿದರು.

ಕಲ್ಲಡ್ಕ ಅಬ್ರಾಡ್ ಫೋರಂ ಸೌದಿ ಅರೇಬಿಯಾದ ಪ್ರಧಾನ ಕಾರ್ಯದರ್ಶಿ ಜಾಬಿರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಸಮಿತಿಯ ಕಾರ್ಯದರ್ಶಿಗಳಾದ ಸಕ್ವಾಫ್, ಸಿದ್ದೀಕ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಕ್ಬರ್, ಇರ್ಷಾದ್, ಮಸ್ಹೂದ್, ಸೌದಿ ಅಲ್ -ಅಕ್ದೂದ್ ಕಂಪೆನಿಯ ಮಾಲಕರಾದ ಫಿರೋಝ್ ಮತ್ತು ಇಸ್ಮಾಯಿಲ್, ಕಲ್ಲಡ್ಕ ಅಬ್ರಾಡ್ ಫೋರಂ ಯುಎಇ ಘಟಕದ ಅಧ್ಯಕ್ಷ ನವಾಝ್ ಹಜಾಜ್, ರಫೀಕ್ ಸಾಹಿಬ್ ನೆಕ್ಕರಾಜೆ, ಜಬ್ಬಾರ್ ಕೆ.ಕೆ., ಫಾರೂಕ್, ಫಯಾಝ್, ಮುಹಮ್ಮದಾಲಿ, ತಮೀಮ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News