×
Ad

ಯುಎಇ: ತುಂಬೆ ರಿಹ್ಯಾಬಿಲಿಟೇಶನ್ ಆಸ್ಪತ್ರೆಯಲ್ಲಿ ನೂತನ ಸೇವೆಗಳಿಗೆ ಚಾಲನೆ

Update: 2025-10-26 17:37 IST

ಯುಎಇ : ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಆಸ್ಪತ್ರೆ, ದೇಶದ ಅತ್ಯಾಧುನಿಕ ಹೈಪರ್ ಬಾರಿಕ್ ಆಕ್ಸಿಜನ್ ಥೆರಪಿ (HBOT) ಮತ್ತು ಟ್ರಾನ್ಸ್ ಕ್ರೇನಿಯಲ್ ಮ್ಯಾಗ್ನೆಟಿಕ್ ಸ್ಟಿಮ್ಯುಲೇಷನ್ (TMS) ಚಿಕಿತ್ಸೆಗಳನ್ನು ಪ್ರಾರಂಭಿಸಿದೆ. ಯುಎಇಯಲ್ಲಿ ಪುನಶ್ಚೈತನ್ಯ ಮತ್ತು ನರರೋಗ ಚಿಕಿತ್ಸಾ ಆರೈಕೆಯಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ.

ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಆಸ್ಪತ್ರೆ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ (GMU) ಕಾಲೇಜ್ ಆಫ್ ಹೆಲ್ತ್ ಸೈನ್ಸ್‌ ಮತ್ತು ತುಂಬೆ ಹೆಲ್ತ್‌ ಕೇರ್‌ ಡಿವಿಜನ್‌ ನ ಭಾಗವಾಗಿದೆ. ಅಜ್ಮಾನ್ ನ ತುಂಬೆ ಮೆಡಿಸಿಟಿಯಲ್ಲಿ ನಡೆದ 5ನೇ ಅಂತಾರಾಷ್ಟ್ರೀಯ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು Innovation in Rehabilitation Practice and Medicine ಕುರಿತ ಸಮ್ಮೇಳನದಲ್ಲಿ ಈ ನೂತನ ಚಿಕಿತ್ಸಾ ಸೇವೆಗಳಿಗೆ ಚಾಲನೆ ನೀಡಲಾಯಿತು.


ಸಮ್ಮೇಳನದಲ್ಲಿ ಅಜ್ಮಾನ್ ರೂಲರ್ಸ್ ಕೋರ್ಟ್ ಮುಖ್ಯಸ್ಥರಾದ ಶೇಖ್ ಡಾ. ಮಜೀದ್ ಬಿನ್ ಸಯೀದ್ ಅಲ್ ನುಐಮಿ ಮತ್ತು ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷರಾದ ಡಾ. ತುಂಬೆ ಮೊಯ್ದಿನ್ ಭಾಗವಹಿಸಿದ್ದರು. ಶೇಖ್ ಡಾ. ಮಜೀದ್ ಅಲ್ ನುಐಮಿ ಮಾತನಾಡಿ, ತುಂಬೆ ರಿಹ್ಯಾಬಿಲಿಟೇಶನ್ ಆಸ್ಪತ್ರೆ ದೇಶದ ಅತ್ಯುತ್ತಮ ಆಸ್ಪತ್ರೆ ಎಂದು ಬಣ್ಣಿಸಿದರು.

ಈ ಕಾರ್ಯಕ್ರಮ ಆರೋಗ್ಯ ರಕ್ಷಣೆ ಮತ್ತು ಪುನರ್‌ಚೈತನ್ಯದಲ್ಲಿ ನಾವೀನ್ಯತೆ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕಾಗಿ ತುಂಬೆ ಗ್ರೂಪ್ ನ ನಿರಂತರ ಗಮನವನ್ನು ಪ್ರತಿಬಿಂಬಿಸುತ್ತದೆ.

ತುಂಬೆ ಪುನರ್ವಸತಿ ಆಸ್ಪತ್ರೆ ಮೂರು ಸುಧಾರಿತ ಸೇವೆಗಳನ್ನು ಪರಿಚಯಿಸಿದೆ. ಇದೆಲ್ಲವೂ ಈ ಪ್ರದೇಶದಲ್ಲಿ ಮೊದಲನೆಯದಾಗಿದೆ.

ಹೈಪರ್‌ಬಾರಿಕ್ ಆಕ್ಸಿಜನ್ ಥೆರಪಿ (ಎಚ್‌ಬಿಒಟಿ): ಇದು ಅತ್ಯಾಧುನಿಕ ಚೇಂಬರ್ ಆಗಿದ್ದು, ಗುಣಪಡಿಸುವಿಕೆಯನ್ನು ವೇಗಗೊಳಿಸಲು, ನರರೋಗಗಳಿಂದ ಚೇತರಿಸಿಕೊಳ್ಳಲು ಹಾಗೂ ಪಾರ್ಶ್ವವಾಯು ಮತ್ತು ಆಘಾತದ ನಂತರದ ಪುನಶ್ಚೈತನ್ಯಗೊಳಿಸುವಿಕೆಯ ಫಲಿತಾಂಶಗಳನ್ನು ಉತ್ತಮಗೊಳಿಸಲು ವಿನ್ಯಾಸಗೊಳಿಸಲಾಗಿದೆ.


ಟ್ರಾನ್ಸ್‌ಕ್ರೇನಿಯಲ್ ಮ್ಯಾಗ್ನೆಟಿಕ್ ಸ್ಟಿಮ್ಯುಲೇಷನ್ (ಟಿಎಂಎಸ್): ಶರೀರದಲ್ಲಿ ಯಾವುದೇ ಸಾಧನವನ್ನು ಬಳಸದೆ ಔಷಧಿ ರಹಿತ ಚಿಕಿತ್ಸೆಯಾಗಿರುವ ಇದು ಮಿದುಳಿನ ಕಾರ್ಯವನ್ನು ಸಕ್ರಿಯಗೊಳಿಸುವ ಮತ್ತು ನ್ಯೂರೋ ಪ್ಲಾಸ್ಟಿಸಿಟಿಯನ್ನು (ನರಗಳ ಸಂಪರ್ಕವನ್ನು ಮರುಸಂಘಟಿಸುವ ಮಿದುಳಿನ ಸಾಮರ್ಥ್ಯ) ಉತ್ತೇಜಿಸುವ ಮೂಲಕ ಖಿನ್ನತೆ ಮತ್ತು ನರವೈಜ್ಞಾನಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಮ್ಯಾಗ್ನೆಟಿಕ್ ಫೀಲ್ಡ್ ಸ್ಟಿಮ್ಯುಲೇಷನ್ (ಕಾಂತೀಯ ಕ್ಷೇತ್ರ ಉದ್ದೀಪನೆ) ಅನ್ನು ಬಳಸುತ್ತದೆ.

ವ್ಹೀಲ್‌ಚೇರ್ ಟ್ರಾನ್ಸ್‌ಫರ್ ಸಪೋರ್ಟ್ ವೆಹಿಕಲ್: ಇದು ದೈಹಿಕ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಸುರಕ್ಷಿತ ಮತ್ತು ಘನತೆಯ ಸಾರಿಗೆ ಸೇವೆಯನ್ನು ಖಚಿತಪಡಿಸುವ ಚಲನಶೀಲತೆಯ ಆವಿಷ್ಕಾರವಾಗಿದ್ದು, ರೋಗಿಗಳಿಗೆ ಹೆಚ್ಚಿನ ಸೌಲಭ್ಯ ಮತ್ತು ಅನುಕೂಲವನ್ನು ಒದಗಿಸುತ್ತದೆ.

ಈ ನೂತನ ಸೇರ್ಪಡೆಗಳು ಸುಧಾರಿತ ಫಿಜಿಯೊಥೆರಪಿ, ನರ-ಪುನಶ್ಚೈತನ್ಯ ಮತ್ತು ರೋಗಿ ಕೇಂದ್ರಿತ ಅವಿಷ್ಕಾರ ಕ್ಕಾಗಿ ಪ್ರಮುಖ ಪ್ರಾದೇಶಿಕ ಕೇಂದ್ರವಾಗಿ ತುಂಬೆ ಮೆಡಿಸಿಟಿಯ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಲಿವೆ.


ಕಾರ್ಯಕ್ರಮವು ಹಿರಿಯ ತಜ್ಞರು ಮತ್ತು ಪುನಶ್ಚೈತನ್ಯ ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ ನೀಡಿದವರನ್ನು ಗೌರವಿಸಿ ಪ್ರಶಸ್ತಿ ಪ್ರದಾನ ಸಮಾರಂಭವನ್ನೂ ಒಳಗೊಂಡಿತ್ತು. ಪುರಸ್ಕೃತರಲ್ಲಿ ಒಬ್ಬರಾದ ಕರ್ನಾಟಕ ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್‌ನ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅವರು ತನ್ನ ನಾಯಕತ್ವ ಮತ್ತು ಯುಎಇಯಲ್ಲಿ ಪುನಶ್ಚೈತನ್ಯ ಆರೈಕೆ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ‘ಸ್ಟಾರ್ ಆಫ್ ದಿ ಇಯರ್ ಅವಾರ್ಡ್ ಇನ್ ರಿಹ್ಯಾಬಿಲಿಟೇಷನ್’ಗೆ ಭಾಜನರಾದರು.

ದಿನವಿಡೀ ನಡೆದ ಸಮ್ಮೇಳನದಲ್ಲಿ ರೋಬೊಟಿಕ್ ಸಾಧನಗಳ ನೆರವಿನೊಂದಿಗೆ ನಡಿಗೆ ತರಬೇತಿ, ಪಾರ್ಶ್ವವಾಯು ಪುನಶ್ಚೈತನ್ಯಕ್ಕಾಗಿ ಆಕ್ಯುಪಂಕ್ಚರ್, ನ್ಯೂರೋ ಮಾಡ್ಯುಲೇಷನ್(ನರ-ಪ್ರಚೋದಕ ನಿಯಂತ್ರಣ) ಇತ್ಯಾದಿ ವಿಷಯಗಳಲ್ಲಿ ವೈಜ್ಞಾನಿಕ ಗೋಷ್ಠಿಗಳು ಮತ್ತು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿತ್ತು.


ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ನೂತನ ಸೇವೆಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಕುರಿತು ಹೆಚ್ಚಿನ ವಿವರಗಳಿಗಾಗಿ https:/ /thumbayrehab.com ಮತ್ತು https:/ /gmu.ac.ae. ಗೆ ಭೇಟಿ ನೀಡಬಹುದು.















Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News