ಹೊಸದಿಲ್ಲಿ, ಸೆ.26: ಸೋಮವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಫೋಟೋವೊಂದನ್ನು ಎಲ್ಲರೆದುರು ಪ್ರದರ್ಶಿಸಿತ್ತು. ಅದು ಕಾಶ್ಮೀರದಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಉಗ್ರರು ಮದುವೆ ಮನೆಯಿಂದ ಎಳೆದೊಯ್ದು ಗುಂಡಿಕ್ಕಿ ಕೊಂದ ಯುವ ಸೇನಾಧಿಕಾರಿ ಉಮರ್ ಫಯಾಝ್ ಅವರದ್ದಾಗಿತ್ತು.

ಟಾಪ್ 12 ಸುದ್ದಿಗಳು

ಕರಾವಳಿ

ವಾರದ ವಿಶೇಷ

ಆತ ಹೇಳಿದ ‘‘ಗುರುಗಳೇ ನನಗೆ ಮಗುವಾಗಿದೆ. ಮಗುವನ್ನು ಬೆಳೆಸುವ ಕ್ರಮ ಹೇಳಿಕೊಡಿ’’ ಸಂತ ನಕ್ಕು ಹೇಳಿದ ‘‘ಮಗುವನ್ನು ನೀನು ಬೆಳೆಸುವುದಲ್ಲ, ಮಗುವೇ ನಿನ್ನನ್ನು ಬೆಳೆಸುತ್ತದೆ...ಹೋಗು..’’  
ಅಂದು ಮಗನ ಮದುವೆ. ಹಸೆಮನೆ ಏರಿದ ಮದುಮಗಳು ಅತ್ತೆಯನ್ನು ಕಾಣದೆ ನಾಚಿಕೆ ಬಿಟ್ಟು ಮೆಲ್ಲಗೆ ಭಾವೀ ಪತಿಯ ಬಳಿ ಕೇಳಿದಳು ‘‘ಅತ್ತೆ ಎಲ್ಲಿ?’’ ‘‘ಅವಳು ವಿಧವೆ. ಶುಭಕಾರ್ಯದಲ್ಲಿ ಭಾಗವಹಿಸುವಂತಿಲ್ಲ...’’ ಮಗ ಹೇಳಿದ.
ಸಾಯುವ ಸಮಯದಲ್ಲಿ ತೀವ್ರ ಬಾಯಾರಿಕೆಯಾಗುತ್ತದೆ ಎಂದು ಯಾರೋ ಅವನಿಗೆ ಹೇಳಿದ್ದರು. ಆದರೆ ಆತ ನೀರಲ್ಲಿ ಮುಳುಗಿ ಸತ್ತ. ಅವನು ಸತ್ತಾಗ ನೀರು ನೀರು ಎಂದು ಕೇಳಿದ್ದನೇ ಎನ್ನುವ ಕುರಿತಂತೆ ಯಾರಿಗೂ ಮಾಹಿತಿಯಿಲ್ಲ.
ಸರಕಾರ ‘‘ಮೋಡ ಬಿತ್ತನೆಯಿಂದ ಕೃತಕ ಮಳೆ ಸೃಷ್ಟಿಸಿತು’’. ಅಂದು ಬೆಳಗ್ಗೆ ಸುರಿದ ಮಳೆ ಕೆಂಪಾಗಿತ್ತು.
ಹಣ್ಣುಗಳನ್ನು ತಿನ್ನುತ್ತಿದ್ದ ಶಿಷ್ಯ ಹೇಳಿದ ‘‘ಗುರುಗಳೇ, ಈ ಹಣ್ಣಿನೊಳಗೆ ಬೀಜಗಳಿಲ್ಲದೇ ಇರುತ್ತಿದ್ದರೆ ಸಲೀಸಾಗಿ ಹಣ್ಣನ್ನು ತಿನ್ನಬಹುದಿತ್ತಲ್ಲವೇ?’’

....

Back to Top