ಅನುಗಾಲ

07th Nov, 2018
ಪ್ರಾಯಃ ಲಾರ್ಡ್ ವಿಲಿಯಂ ಬೆಂಟಿಕ್, ರಾಜಾರಾಮ ಮೋಹನ ರಾಯ್ ಅವರಿಲ್ಲದಿದ್ದರೆ, ಇಂದು ಹಿಂದೂ ಮಹಿಳೆಯರು ಸಹಗಮನಕ್ಕೆ ಆಹುತಿಯಾಗ ಬೇಕಿತ್ತು. ಹಾಗೊಂದು ವೇಳೆ ಸುಟ್ಟುಹೋಗದಿದ್ದರೆ ತಲೆ ಬೋಳಿಸಿ ಹಗಲು ಪೂರ್ತಿ ಮಠದ ಹೊರ ಆವರಣದಲ್ಲಿ ಹೂವಿನ ಮಾಲೆಗಳನ್ನು ಕಟ್ಟುತ್ತ, ಉಡುಪಿಯಲ್ಲೋ ಮಥುರೆಯಲ್ಲೋ ಕೃಷ್ಣನ...
31st Oct, 2018
ಶಶಿ ತರೂರ್ ಉಲ್ಲೇಖಿಸಿದ ರೂಪಕವನ್ನು ಯೋಚಿಸಿ ಅದರ ನೈಜತೆಯನ್ನು, ಗಾಂಭೀರ್ಯವನ್ನು, ಅರ್ಥವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡುವಷ್ಟು ಬುದ್ಧಿ ಬಹಳಷ್ಟು ಜನರಿಗಿಲ್ಲ. ಇಂದು ಸಾಮಾಜಕ್ಕೆ ಸಮಾಜವೇ ರಾಜಕೀಯವಾಗಿ ಮಾತ್ರ ಯೋಚಿಸುತ್ತದೆ ಮತ್ತು ಪ್ರತಿಕ್ರಿಯಿಸುತ್ತದೆ. ಅದರಲ್ಲಿ ವೈಯಕ್ತಿಕ ಲಾಭ ಗಳಿವೆಯೆಂದೇನೂ ಇಲ್ಲ; ಸಾಮೂಹಿಕ ಹಿತವಿದೆಯೆಂದೂ...
24th Oct, 2018
ಯಾರನ್ನಾದರೂ ಹೆಸರಿಸಿ; ಅವರು ನಮ್ಮವರು ಎಂದು ಘೋಷಿಸುವ ಒಂದು ಜಾತಿ, ವರ್ಗ ನಮ್ಮಲ್ಲಿ ಸದಾ ಇದ್ದೇ ಇದೆ. ಹೀಗೆ ಹೇಳುವಾಗ ಈ ಮಂದಿಗೆ ತಾನು ಒಂದು ದೇಶದ ಪ್ರಜೆಯೆನ್ನಿಸದೆ ಒಂದು ನಿಗದಿತ ಜಾತಿ, ಮತ, ಧರ್ಮದವನು ಎಂಬ ಸೀಮಿತ ಮತ್ತು ಸಂಕುಚಿತ...
17th Oct, 2018
ಕಾರ್ನಾಡರು ಈ ನಾಟಕವನ್ನು ವಚನಯುಗ-ಮತ್ತು ಟಿಪ್ಪೂವಿನ ಕಾಲದ ನಡುವೆ, ಅಂದರೆ ಕರ್ನಾಟಕದ ಚಾರಿತ್ರಿಕ ಟ್ರಯಾಲಜಿಯ ಭಾಗವೆಂಬಂತೆ ಕಂಡಿದ್ದಾರೆ. ಈ ಸೂತ್ರದಡಿ ಅವರ ಈ ಹಿಂದಿನ ಎರಡೂ ನಾಟಕಗಳ (ತಲೆದಂಡ ಮತ್ತು ಟಿಪ್ಪುಸುಲ್ತಾನ್ ಕಂಡ ಕನಸು) ಆಶಯಗಳನ್ನು ಗಮನಿಸಿದರೆ ಅದರ ಭಾಗವಾಗಿ ಅಥವಾ...
10th Oct, 2018
ತ್ರಿವಳಿ ತಲಾಖ್ ತೀರ್ಪು ತಂದುಕೊಟ್ಟ ನೆಮ್ಮದಿಯನ್ನು ಈ ತೀರ್ಪು ಬಹುಮತೀಯರಲ್ಲಿ ತಂದಿಲ್ಲ. ಅನ್ಯಮತೀಯ ಮಹಿಳೆಯರ ಸಮಾನತೆಯನ್ನು ಗೌರವಿಸಿದ ಸಮಾಜವು ಈ ಬೆಳಕು ಬೆಂಕಿಯಾಗಿ ತಮ್ಮ ಅಂಡನ್ನೇ ಸುಡುತ್ತದೆಂಬ ಪರಿಸ್ಥಿತಿ ಬಂದಾಗ ನೀರನ್ನು ಹುಡುಕಿಕೊಂಡು ಅಂಡಲೆಯುವುದನ್ನು ಕಂಡರೆ ನಗುಬರುತ್ತದೆ. ಈ ದೇಶದ ಬಹುಪಾಲು ಸಮಸ್ಯೆಗಳು ಹುಟ್ಟಿಕೊಂಡಿರುವುದೇ...
03rd Oct, 2018
ಯಾರಾದರೊಬ್ಬ ಸಾರ್ವಜನಿಕವಾಗಿ ತನ್ನ ಪ್ರಾರ್ಥನೆಯನ್ನೋ ಇನ್ನಿತರ ಧಾರ್ಮಿಕ ಆಚರಣೆಯನ್ನೋ ಮಾಡಿದರೆ ಅದನ್ನು ಸಾರ್ವಜನಿಕ ಹಿತ-ಶಾಂತಿಗೆ ವಿರೋಧವಾಗುತ್ತದೆಂಬ ನೆಪ ಹೇಳಿ ನಿಷೇಧಿಸುವುದಾದರೂ ಹೇಗೆ? ಇನ್ನೂ ಮುಂದೆ ಯೋಚಿಸಿದರೆ ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿಯಿರುವ ಅಯೋಧ್ಯಾ ವಿವಾದದಲ್ಲಿ ಮಂದಿರದ ಅಗತ್ಯವಾದರೂ ಏನಿದೆಯೆಂದು ಸರ್ವೋಚ್ಚ...
26th Sep, 2018
ಬದುಕು ಬಹುತೇಕ ಬೆತ್ತಲಾಗಿದ್ದರೂ ಪದಗಳು ಹೊಸ ಅರ್ಥ ಪಡೆಯುತ್ತಿವೆ; ಹೊಸ ವಿಚಾರಗಳು, ವ್ಯಾಖ್ಯಾನಗಳು ಸೃಷ್ಟಿಯಾಗುತ್ತಿವೆ; ಶೀರ್ಷಾಸನದಲ್ಲೇ ನಡೆಯುವ ಕಾಲವೂ ಬಂದೀತು. ಆದ್ದರಿಂದ ಇದೇ ಸರಿ ಎಂದು ಹೇಳುವುದೂ ಮೂರ್ಖತನವಾದೀತು. ನನ್ನ ಸ್ನೇಹಿತರೊಬ್ಬರು ತಮ್ಮ ಪತ್ನಿಯೊಂದಿಗೆ ಭಾರತದ ಒಂದು ಮಹಾನಗರದಲ್ಲಿದ್ದಾರೆ. ಅವರ ಹಿರಿಯರು ಹಳ್ಳಿಯಲ್ಲಿದ್ದಾರೆ;...
19th Sep, 2018
ನಮ್ಮ ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿತನವನ್ನು ಎಂದೋ ಕಳೆದುಕೊಂಡಿವೆ. ಅವೀಗ ರಾಜಕೀಯ ಪಕ್ಷಗಳ ಯುವವಿಭಾಗದಂತೆಯೋ ಹಿಂಸಾಶಾಖೆಗಳಾಗಿಯೋ ಕೆಲಸಮಾಡುತ್ತಿವೆ. ಭಾಷಣಕ್ಕೂ ಬಂದ್‌ಗಳಿಗೂ ವಿದ್ಯಾರ್ಥಿಗಳನ್ನು ಬಳಸುವುದು ಎಲ್ಲ ಕಡೆ ನಡೆಯುತ್ತಿದೆ. ರಾಜಕೀಯ ನಾಯಕರು ಇನ್ನೊಬ್ಬರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವುದರಲ್ಲಿ ಪರಿಣತರು. ಆದರೆ ಈಚೀಚೆಗೆ...
12th Sep, 2018
ಸಾಹಿತಿಯೊಬ್ಬ ಯಾವ ಪಕ್ಷಕ್ಕೆ ಮತ ಹಾಕುತ್ತಾನೆ, ಯಾವ ರಾಜಕೀಯ ದೃಷ್ಟಿಕೋನವನ್ನು ಹೊಂದಿದ್ದಾನೆ ಎಂಬುದು ಅವನ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬಿಟ್ಟದ್ದು. ಆತ ಎಡವೋ ಬಲವೋ ಮಧ್ಯಮವೋ ಯಾವುದಾದರೂ ಒಂದು ಪಂಥವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಅದು ಇತರರಿಗೆ ಆತನನ್ನು ದ್ವೇಷಿಸಲು ಕಾರಣವಾಗಬಾರದು; ನೆಪವೂ...
05th Sep, 2018
ಈಚೆಗೆ ದೇಶದ ವಿವಿಧೆಡೆಯ, ಎಡಪಂಥದ ಒಂದಷ್ಟು ಹಿರಿಯ, ವಿದ್ಯಾವಂತ, ವೃತ್ತಿಪರರನ್ನು (ಉದ್ದೇಶಪೂರ್ವಕವಾಗಿಯೇ ನಾನು ‘ಬುದ್ಧಿಜೀವಿಗಳು’ ಎಂಬ ಪದವನ್ನು ಬಳಸುತ್ತಿಲ್ಲ; ಏಕೆಂದರೆ ತಕ್ಷಣ ಅವರ ವಿರುದ್ಧ ಒಂದು ದೊಡ್ಡ ಪಡೆಯೇ ಹರಿಹಾಯುತ್ತದೆ!) ಮಾವೋವಾದಿ ಭಯೋತ್ಪಾದನೆಯ ಸೂತ್ರಧಾರಿಗಳೆಂಬ ಆರೋಪದಡಿ ಪುಣೆಯ ಪೊಲೀಸರು ಬಂಧಿಸಿದರು. ಈ...
29th Aug, 2018
ಪ್ರೀತ್ಯಾದರಗಳಿದ್ದೂ ಆಕ್ಷೇಪಿಸಬಹುದಾದ, ಟೀಕಿಸಬಹುದಾದ ಪಕ್ಷವೆಂದರೆ ಕಮ್ಯುನಿಸ್ಟ್ ಮಾತ್ರ ಅಂದುಕೊಂಡಿದ್ದೇನೆ. ಸದ್ಯದ ಸ್ಥಿತಿಯ ವಿಶ್ವದಲ್ಲಿ ಕಮ್ಯುನಿಸಂ ಎಲ್ಲಿದೆಯೆಂದು ಕೇಳಿದರೆ ಚೀನಾ ಹಾಗೂ ಲ್ಯಾಟಿನ್ ಅಮೆರಿಕದ ಕೆಲವು ದೇಶಗಳನ್ನು ಹೆಸರಿಸಬಹುದು. ಆದರೆ ಅಲ್ಲಿರುವುದು ಕಮ್ಯುನಿಸಮ್ಮೇ ಅಥವಾ ಆ ಚಿಂತನೆಯ ಹೆಸರಿನಲ್ಲಿ ಒಬ್ಬ ಅಥವಾ ಕೆಲವೇ...
23rd Aug, 2018
ಎಲ್ಲರಿಗೂ ಸಲ್ಲುವವರು ಅಂದರೆ ವ್ಯಕ್ತಿಗತ ಸಿದ್ಧಾಂತವಿಲ್ಲದಿರುವವರು ಎಂದು ಆಳದ ಅರ್ಥ. ಬುದ್ಧನಿಗೂ ಶತ್ರುಗಳಿದ್ದರು; ಗಾಂಧಿಗೂ ಇದ್ದರು. ಅವರೂ ಅಜಾತಶತ್ರುಗಳಲ್ಲ. ನಾವೆಷ್ಟೇ ಸರಿಯಿದ್ದರೂ ನಮಗೆ ಶತ್ರುಗಳಿರುತ್ತಾರೆ ಮತ್ತು ನಮ್ಮನ್ನು ಮೆಚ್ಚದವರು, ನಮ್ಮನ್ನು ಕಂಡು ಮತ್ಸರ ಪಡುವವರು ಇದ್ದೇ ಇರುತ್ತಾರೆ ಎಂಬ ಅರಿವು ನಮ್ಮಲ್ಲಿದ್ದರೆ...
15th Aug, 2018
ಸಾಹಿತಿಗಳು, ಕಲಾವಿದರು, ಸಮಾಜಸೇವಕರು, ನಿವೃತ್ತ ಅಧಿಕಾರಿಗಳು, ನ್ಯಾಯಾಧೀಶರು, ರಾಜಕಾರಣಿಗಳು, ಕ್ರೀಡಾಪಟುಗಳು- ಹೀಗೆ ಆತ್ಮಕಥನಗಳು ಪ್ರಾಯಃ ಸಮಾಜದ ಎಲ್ಲ ಕ್ಷೇತ್ರಗಳಲ್ಲಿರುವವರಿಂದ ರಚನೆಗೊಂಡಿವೆ. ಆತ್ಮಕಥನಗಳ ಲೇಖಕರ ಕುರಿತು ತಿಳಿಯಬೇಕಾದ್ದಕ್ಕಿಂತಲೂ ಹೆಚ್ಚಾಗಿ ಅವರು ಸಮಾಜದ ಬಗ್ಗೆ, ಇತರರ ಬಗ್ಗೆ ಎಂತಹ ಭಾವನೆಗಳನ್ನು, ವಿಚಾರಗಳನ್ನು ಇಟ್ಟುಕೊಂಡಿದ್ದಾರೆಂಬ ಕದನ...
08th Aug, 2018
2009ರಲ್ಲಿ ಅಂತ ನೆನಪು. ಸುಮತೀಂದ್ರ ನಾಡಿಗರು ಮಡಿಕೇರಿಗೆ ಬಂದಿದ್ದರು. (ಬೇರೆ ಸಂದರ್ಭದಲ್ಲೂ ಅವರು ಮಡಿಕೇರಿಗೆ, ಕೊಡಗಿಗೆ ಬಂದಿರಬಹುದು; ನನಗೆ ಪ್ರಸ್ತುತವೆನ್ನಿಸಿದ ಈ ಭೇಟಿಯಷ್ಟೇ ನನಗೀಗ ನೆನಪಾದದ್ದು.) ಕೆಲವು ಸಮಯಕ್ಕೆ ಹಿಂದೆ ಅವರ ‘ದಾಂಪತ್ಯ ಗೀತ’ ಮತ್ತು ‘ಪಂಚಭೂತ’ ಒಟ್ಟಾಗಿ ಸಪ್ನದಿಂದ ಪ್ರಕಟವಾಗಿದ್ದವು....
01st Aug, 2018
ಬಹುಜನ ಹಿತಾಯ ಬಹುಜನ ಸುಖಾಯ ಸರಿ; ಆದರೆ ಈ ಬಹುಜನ ಒಳ್ಳೆಯವರಾದರೆ ಮಾತ್ರ ಇಂತಹ ಮಾತುಗಳು ಅರ್ಥಪೂರ್ಣವಾದಾವು; ಇಲ್ಲವಾದರೆ ಅವು ನಮ್ಮ ಕಾನೂನುಗಳನ್ನು ಕೈಗೆತ್ತಿಕೊಳ್ಳುವವರ ಕೈಯಲ್ಲಿ ಅತ್ಯಾಚಾರ ಕ್ಕೊಳಗಾಗಿ ನಲುಗುವ ಮುಗ್ಧರಂತೆ ಅರ್ಥ ಕಳಕೊಳ್ಳುತ್ತವೆ. ಅಲ್ಲಿಯವರೆಗೆ ದೇವರೇ ಈ ದೇಶವನ್ನು ಕಾಪಾಡಬೇಕು. ಎಲ್ಲರೂ...
25th Jul, 2018
ನಾವು ವಿಶ್ಲೇಷಿಸುವ ಅನೇಕ ಸುದ್ದಿಗಳು ನಿಜವೆಂಬ ಖಾತ್ರಿ ನಮಗಿರುವುದಿಲ್ಲ. ಸಾಮಾಜಿಕ ಜಾಲತಾಣಗಳು ಬಂದ ಮೇಲಂತೂ ಎಷ್ಟೊಂದು ಸುಳ್ಳು ಸುದ್ದಿಗಳು ಬಿತ್ತರವಾಗುತ್ತಿವೆಯೆಂದರೆ ಅವೀಗ ಬಹುಮತದಲ್ಲಿರುವುದರಿಂದ ಅವನ್ನೇ ಸತ್ಯವೆಂದು ಸ್ವೀಕರಿಸುವ ಅನಿವಾರ್ಯತೆಯಲ್ಲಿ ಸಮಾಜವಿದೆ. ಮಾಧ್ಯಮಗಳನ್ನು ಟೀಕಿಸುವಾಗಲೂ ಹಂಸಕ್ಷೀರನ್ಯಾಯವನ್ನು ಬಳಸಬೇಕೆಂಬುದು ನ್ಯಾಯ. ಎಲ್ಲ ಸುದ್ದಿಗಳೂ ಕೆಟ್ಟದಾಗಿ ವರದಿಯಾಗಿರುವುದಿಲ್ಲ;...
18th Jul, 2018
ಧರ್ಮದ ನೆಲೆಯಲ್ಲಿ ಒಂದು ದೇಶವು ಶಾಂತಿ ಮತ್ತು ಅಭಿವೃದ್ಧಿಯನ್ನು ಸಾಧಿಸಲಾರದೆಂಬುದಕ್ಕೆ ಪಾಕಿಸ್ತಾನಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಕೆಲವು ಮಧ್ಯಪೂರ್ವ ದೇಶಗಳೂ ಇಂಥವೇ ಉದಾಹರಣೆಗಳಾಗಿವೆ. ಅವನ್ನು ನೋಡಿಯಾದರೂ ಭಾರತೀಯರು ತಮ್ಮಲ್ಲೇನಾದರೂ ಅಂತಹ ಮತೀಯವಾದದ ಭಾವನೆಗಳು, ವಿಚಾರಗಳು ಹುಟ್ಟಿಕೊಂಡರೆ ಅವನ್ನು ಬೇರುಸಹಿತ ಕಿತ್ತುಹಾಕಬೇಕು. ಶ  ಶಿತರೂರ್ ನಮ್ಮ...
11th Jul, 2018
ನಮ್ಮ ಜನರಿಗೆ ಅರ್ಧ ಸತ್ಯವೂ ಬೇಡ. ಸುಳ್ಳಿನ ಕೋಟೆಯೊಳಗೆ ವಿಹರಿಸಲು ಕಾತರರು. ತಮಗೆ ಅದು ಸುಳ್ಳೆಂದು ಗೊತ್ತಿದ್ದರೂ ಗೊತ್ತಾದರೂ ಅದನ್ನು ಸತ್ಯವೆಂದೇ ನಂಬಿ(ಸಿ), ಬಿಂಬಿಸಿ ಹಬ್ಬಿಹರಡಿಸುವ ಕಾರ್ಯಕ್ಕೆ ತೊಡಗುತ್ತಾರೆ. ಇದರಿಂದಾಗಿ ಬಹುತೇಕ ಸುಳ್ಳುಗಳೇ ಸತ್ಯದ ಮುಖವಾಡ ಹಾಕಿ ಮೆರವಣಿಗೆಯಲ್ಲಿ ಸಾಗುತ್ತವೆ.  ಸ್ಥಳೀಯ ಕನ್ನಡ...
04th Jul, 2018
ಸಾಹಿತ್ಯ, ಅದರ ಚರಿತ್ರೆ ಮತ್ತು ರಸಗ್ರಹಣ ಇವುಗಳ ಕೊಡುಗೆಯ ಮಹತ್ವದ ದೃಷ್ಟಿಯಿಂದ ಯಾವುದೇ ಕಾಲದ ಸಾಹಿತ್ಯವೂ ಅಧ್ಯಯನಯೋಗ್ಯವೇ ಹೊರತು ಬದಲಾಗುವ ಭಾಷೆಯ ಬಳಕೆಯಲ್ಲಿ, ಸ್ವರೂಪದಲ್ಲಿ ಹಿಂದಣ ಹೆಜ್ಜೆಗೆ ಅಷ್ಟಾಗಿ ಪ್ರಾಶಸ್ತ್ಯವಿಲ್ಲ. ಈಚೆಗೆ ಹಳಗನ್ನಡ ಸಾಹಿತ್ಯ ಸಮ್ಮೇಳನವೊಂದು ನಡೆಯಿತು. ಅದು ಜೈನಕ್ಷೇತ್ರವೊಂದರಲ್ಲಿ ನಡೆಯಿತು...
27th Jun, 2018
ಆಧುನಿಕ ಕನ್ನಡದ ಬೆಂಕಿಯ ಧಗೆಯ ನಡುವೆ ಕರ್ಪೂರದಂತೆ ಬೆಳಗಿ ಕರಗಿಹೋದ ಜೀವ ಅವರು. ಧಾರ್ಮಿಕ ಮತಾಂಧತೆಯ ಇಂದಿನ ಭಾರತದಲ್ಲಿ ಅವರು ಮತ್ತೆ ಮತ್ತೆ ನೆನಪಾಗಬೇಕಾದವರು. ಪ್ರಾತಃಸ್ಮರಣೀಯರು. ಹೆಚ್ಚು ಪ್ರಚಾರ ಸಿಗದ ಅವರ ಈ ಕೃತಿಯ ಮೂಲಕ ಅವರು ಮುಂದೆ ಭಾರತವೆಂದು ಅಸ್ತಿತ್ವಕ್ಕೆ...
20th Jun, 2018
ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಪರಿಶ್ರಮವನ್ನು ಗೈದ ಮತ್ತು ಯಶಸ್ಸನ್ನು ಕಂಡವರು ವಿರಳ. ವಕೀಲ ವೃತ್ತಿಯೇ ಒಂದು ಬಂಗಾರದ ಪಂಜರ. ಅದನ್ನು ಮೀರುವುದು ಸುಲಭಸಾಧ್ಯವಲ್ಲ. ಆದರೂ ಅದನ್ನು ಮೀರಿ ಪ್ರವೃತ್ತಿಪರವಾಗಿ ಬೆಳೆದವರು ಬೆರಳೆಣಿಕೆಯವರು. ಬೆಳ್ಳೆ ರಾಮಚಂದ್ರರಾಯರು ಅಂತಹ ವೈಶಿಷ್ಟ್ಯಪೂರ್ಣ ಶ್ರೇಷ್ಠರು. 1953ರಲ್ಲಿ ಪ್ರಕಟಗೊಂಡ...
13th Jun, 2018
ಒಂದು ಶತಮಾನದ ಅನಂತರ ಈ ಕವಿತೆಗಳನ್ನು ಗಮನಿಸಿದರೆ ಅವು ಅಂದು ಎಷ್ಟು ಸತ್ಯವನ್ನು ಅನಾವರಣಗೊಳಿಸಿವೆಯೋ ಅದಕ್ಕಿಂತಲೂ ಹೆಚ್ಚನ್ನು ಇಂದು ಹೇಳುತ್ತಿವೆ. ಪ್ರಾಯಃ ಕಾಲ ಸರಿದಂತೆಲ್ಲ ಅವು ಇನ್ನೂ ಹೆಚ್ಚು ಅರ್ಥವನ್ನು ಬಿಚ್ಚಿಕೊಳ್ಳುವಂತಿವೆ; ಬಿಟ್ಟುಕೊಡು ವಂತಿವೆ. ಕನ್ನಡ ನವೋದಯದ ಶ್ರೇಷ್ಠರಾಗಿರುವ ಆದರೆ ಕನ್ನಡ...
06th Jun, 2018
ಅಪರೂಪದ ಹಳೆಯ ಅನುವಾದ ಕೃತಿಗಳು ಕನ್ನಡದಲ್ಲಿ ಹೇರಳವಾಗಿವೆ. ಅವು ಇಂದು ಲಭ್ಯವೂ ಇಲ್ಲ. ಸಮಕಾಲೀನರ ಕೃತಿಗಳನ್ನು ಮತ್ತೆ ಮತ್ತೆ ಪ್ರಕಟಿಸುವುದಕ್ಕೆ ಬದಲಾಗಿ ಈ ಹಳೆೆಯಹೊನ್ನುಗಳನ್ನು ಓದುಗರ ಮುಂದಿಟ್ಟರೆ ಓದುವ ಪರಂಪರೆ ನಶಿಸುತ್ತದೆಂದು ಹುಯ್ಲೆಬ್ಬಿಸುವ ಅಗತ್ಯ ಪಂಡಿತರಿಗೆ ಬರಲಿಕ್ಕಿಲ್ಲ. ಇಂಥದ್ದೊಂದು ಕೃತಿ 1952ರಲ್ಲಿ...
30th May, 2018
ಬಾಲ ಸುಬ್ರಹ್ಮಣ್ಯ ಕಂಜರ್ಪಣೆ ಮೋದಿ ಸರಕಾರ ನಾಲ್ಕು ವರ್ಷ ಪೂರೈಸಿದೆ. ಯಾವುದೇ ಸರಕಾರವು ನಾಲ್ಕು ವರುಷಗಳನ್ನು ಪೂರೈಸುವುದು ಇಂದಿನ ರಾಜಕೀಯ ಸಂದರ್ಭದಲ್ಲಿ ಸಣ್ಣ ವಿಚಾರವೇನಲ್ಲ. ಕೆಲವೇ ದಿನಗಳಲ್ಲೂ ಕೇಂದ್ರ ಇಲ್ಲವೇ ರಾಜ್ಯ ಸರಕಾರಗಳು ಪತನಗೊಳ್ಳುವುದನ್ನು ಕಳೆದ ಕೆಲವು ಸಂದರ್ಭಗಳಲ್ಲಿ ದೇಶ ಕಂಡಿದೆ. ಆದ್ದರಿಂದ...
23rd May, 2018
ಬೇಂದ್ರೆಯವರ ಸಾಹಿತ್ಯ ವಿಮರ್ಶೆಯ ಲೇಖನಗಳಲ್ಲಿ ಅವರ ಲೇಖನ ಗುಚ್ಛ ‘ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕ ರತ್ನಗಳು’ ಮುಖ್ಯವಾದ ಕೃತಿ. ಕರ್ನಾಟಕ ವಿಶ್ವವಿದ್ಯಾನಿಲಯದ ವಿಸ್ತರಣಾ ವಿಭಾಗವು 1966ರ ಡಿಸೆಂಬರ್‌ನಲ್ಲಿ ಈ ಶೀರ್ಷಿಕೆಯಡಿ ಬೇಂದ್ರೆಯವರ ನಾಲ್ಕು ಉಪನ್ಯಾಸಗಳನ್ನು ಏರ್ಪಡಿಸಿತ್ತು. ಈ ನಾಲ್ಕು ಉಪನ್ಯಾಸಗಳ ಲಿಖಿತ...
16th May, 2018
ಕರ್ನಾಟಕದ ಆರೂವರೆ ಕೋಟಿ ಜನರು ತಮಗೆ ಆಶೀರ್ವದಿಸಿದ್ದಾರೆಂದು ಮತ್ತು ಕಾಂಗ್ರೆಸನ್ನು ತಿರಸ್ಕರಿಸಿದ್ದಾರೆಂದು ಮತ್ತು ತಾವು ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಿದ್ದೇವೆಂದು ಯಡಿಯೂರಪ್ಪನವರು ಎಷ್ಟೇ ಹೇಳಿಕೊಂಡರೂ ಮತ್ತು ಭಾಜಪದ ಭಕ್ತರು ಗೆದ್ದ ದೊಡ್ಡಸ್ತಿಕೆಯಿಂದ ಎಷ್ಟೇ ಕುಣಿದಾಡಿದರೂ ವಾಸ್ತವ ಬೇರೆಯೇ ಆಗಿದೆ. ಕೊನೆಗೂ ಕರ್ನಾಟಕ ವಿಧಾನಸಭಾ ಚುನಾವಣೆ...
09th May, 2018
ಚುನಾವಣೆಗಳು ರಾಜಕಾರಣದ ಎಲ್ಲ ಮಾಲಿನ್ಯವನ್ನು ಬೀದಿಗೆ ಚೆಲ್ಲುತ್ತವೆ. ಒಳಗಿದ್ದ ಎಲ್ಲ ಬಗೆಯ ಕೀವನ್ನು, ವಿಷವನ್ನು ಹೊರಗೆಡಹಲು ಚುನಾವಣೆಯೆಂಬ ಮಹಾಸಮರವೇ ಸಂದರ್ಭ. ಈ ಕೊಳಕು ರಾಜಕಾರಣ ಧೂಳನ್ನೆಬ್ಬಿಸಿ ಎಂತಹ ಊರಿನ ಲಕ್ಷಣಗಳನ್ನೂ ಹಾಳುಗೆಡವುದರಲ್ಲಿ ನಿಸ್ಸೀಮ. ಮುಧೋಳದ ಚರಿತ್ರೆಯನ್ನೇ ಬಣ್ಣಗೆಡಿಸಿದ ಕೀರ್ತಿ ಈ ದೇಶದ...
02nd May, 2018
ಸಂಘ ಸಂಸಾರದ ಗಟ್ಟಿಯಾದ ಕೇಸರಿ ಬೇರುಗಳನ್ನು ಹೊಂದಿದ ಈ ಹೊಸತಳಿಯ ಅಶ್ವತ್ಥವೃಕ್ಷವು ಮುಖ್ಯಮಂತ್ರಿಯಾದದ್ದೇ ತಡ, ಸಕಲಕಲಾವಲ್ಲಭರಂತೆ ಬಲ್ಲವರಾಗಿದ್ದಾರೆ. ದಿನಕ್ಕೊಂದರಂತೆ ಅಣಿಮುತ್ತನ್ನು ಸುರಿಸುತ್ತಿದ್ದಾರೆ. ಎಲ್ಲವನ್ನೂ ನೆನಪು ಮಾಡಿ ಹೇಳಲಾಗದಿದ್ದರೂ ಕೆಲವೊಂದನ್ನು ಮರೆಯಲು ಸಾಧ್ಯವಿಲ್ಲ. ಅವು ಇಡೀ ದಿನ ಮತ್ತು ಮುಂದೆ ಕೆಲವು ದಿನಗಳ...
25th Apr, 2018
ಪರಸ್ಪರ ದೂಷಿಸಿಕೊಂಡು ಬೆತ್ತಲೆಯಾಗುವುದನ್ನು ಬಿಟ್ಟರೆ ಚುನಾವಣೆಯ ಹುರಿಯಾಳುಗಳಿಗೆ ಇನ್ನೇನೂ ಉಳಿದಿಲ್ಲ. ಚುನಾವಣಾಪೂರ್ವ ಲಕ್ಷಣಗಳನ್ನು ನೋಡಿದರೆ ದೇಶದ, ರಾಜ್ಯದ ಸಮಸ್ಯೆಗಳಿಗೆ ಗಂಭೀರವಾದ ಯಾವ ಪ್ರಯತ್ನವನ್ನೂ ಈ ರಾಜಕೀಯ ಪಕ್ಷಗಳು ಮಾಡಬಲ್ಲವೆಂಬ ನಂಬಿಕೆಯೇ ಉಳಿಯದಂತಾಗಿದೆ. ನಾವಷ್ಟೇ ದೇಶದ ಮತ್ತು ಪಕ್ಷಗಳ ಕುರಿತು ಚಿಂತಿಸುತ್ತಿದ್ದೇವೆಯೇ ಹೊರತು...
18th Apr, 2018
                                                             ಹಿಂಸೆ ಹಿಂದೆಯೂ...
Back to Top