ಒರೆಗಲ್ಲು

21st Apr, 2016
ದ.ಕ. ಜಿಲ್ಲೆಯ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ವೇಳೆ ಭಾರೀ ಗಾತ್ರದ ಧ್ವಜವನ್ನು ನೇತು ಹಾಕಲಾಗುತ್ತಿತ್ತು. ಮಹಾಲಿಂಗೇಶ್ವರನನ್ನು ಅರ್ಥಪೂರ್ಣವಾಗಿ ಪ್ರತಿನಿಧಿಸುತ್ತಿದ್ದ ಈ ಧ್ವಜ ಬಹುಶಃ ಜನಪದ ಮೂಲದಿಂದ ಎತ್ತಿಕೊಂಡಿರುವಂತಿತ್ತು. ಇಲ್ಲಿ ಧ್ವಜದ ಕಲ್ಪನೆಯಲ್ಲಿ ಕೆಲಸ ಮಾಡಿರುವ ವೈಸೋದಿಕ ದೃಷ್ಟಿ ನಮ್ಮನ್ನು...
14th Apr, 2016
ಇಗರ್‌ಸೋಲ್ ಎಂಬ ವಿಚಾರವಾದಿ ಹೇಳಿದ: ‘ದೇವರು ಸತ್ತ. ಮನುಷ್ಯ ಬದುಕಿದ’. ಇಲ್ಲ, ದೇವರು ಸತ್ತಿಲ್ಲ ಏಕೆಂದರೆ ಆತ ಹುಟ್ಟಿಯೇ ಇಲ್ಲ. ಅವನು ಅಭವ. ಆದರೂ ಭವವನ್ನು ನಿಯಂತ್ರಿಸುವವನೆಂದು ಮನುಕುಲದ ಅರ್ಧ ಭಾಗವಂತೂ ನಂಬಿಕೂತಿದೆ. ಪ್ರಖ್ಯಾತ ಲೇಖಕ, ವಿಚಾರವಾದಿ ಪ್ರೊ.ಎ.ಎನ್.ಮೂರ್ತಿರಾವ್ ತಮ್ಮ ‘ದೇವರು’ ಕೃತಿಯಲ್ಲಿ...
07th Apr, 2016
ನಮ್ಮ ಮನಸ್ಸಿನಲ್ಲಿ ಏನು ಹೊಳೆಯುತ್ತದೆಯೋ ಅದನ್ನು ಹೊರಗೆ ಹಾಕುವುದೇ ಭಾಷೆಯ ಮೂಲಕ. ಕೆಲವು ಭಾಷಾ ವಿಜ್ಞಾನಿಗಳು ಭಾಷೆಯನ್ನು ಸಂಕೇತ ಎಂದೂ, ಭಾಷೆಯಿಂದ ಸೂಚಿತವಾದ ಸಂಗತಿಯನ್ನು ಭಾಷಿತ ಎಂದೂ ವಿವರಿಸಿದ್ದಾರೆ. ಮನಸ್ಸಿನಲ್ಲಿ ಮೂಡಿದ, ಭಾಸವಾದ, ಮಿಂಚಿದ ಭಾವನೆಯನ್ನು ಪ್ರಕಟಿಸುವ ಉಪಕರಣವೇ ಭಾಷೆ ಎನ್ನಬಹುದು. ನೀವು...
24th Mar, 2016
ಶಿಕ್ಷಕರ ಕರ್ತವ್ಯದ ಭಾಗವೇ ಆಗಿರುವ ಪಬ್ಲಿಕ್ ಪರೀಕ್ಷಾ ಉತ್ತರಪತ್ರಿಕೆಗಳ ವೌಲ್ಯಮಾಪನ ಒಂದು ಮಹತ್ವದ ಜವಾಬ್ದಾರಿಯಾಗಿದೆ. ವೌಲ್ಯಮಾಪನಕ್ಕೆ ಸಂಬಂಸಿ ಆಕರ್ಷಕ ಸಂಭಾವನೆ, ದಿನಭತ್ತೆ, ಪ್ರಯಾಣವೆಚ್ಚ ಸಂದಾಯವಾಗುತ್ತದೆ. 2000ದ ವರೆಗೆ ವೌಲ್ಯಮಾಪನ ಕಡ್ಡಾಯವಾಗಿರಲಿಲ್ಲ. ನೇಮಕಾಜ್ಞೆ ಬಂದ ಕೂಡಲೇ ಏನಾದರೂ ಅನನುಕೂಲವಿದ್ದರೆ ತಿಳಿಸಿದರಾಯಿತು. ನಾನು 1978ರಲ್ಲಿ...
17th Mar, 2016
ಯುರೋಪಿನಲ್ಲಿ ಮಧ್ಯಯುಗದಲ್ಲಿ ಒಬ್ಬ ವಿದ್ಯಾರ್ಥಿ ಒಂದು ವರ್ಷದ ಅವಯಲ್ಲಿ ಶೈಕ್ಷಣಿಕವಾಗಿ ಎಷ್ಟು ಬೆಳೆದಿದ್ದಾನೆ ಎಂದು ತಿಳಿಯಲು ತಲೆಯ ಸುತ್ತಳತೆಯನ್ನು ಅಳೆಯುತ್ತಿದ್ದರೆಂದು ಕೇಳಿದ್ದೆ. ಪ್ರಾಚೀನ ಕಾಲದಲ್ಲಿ ಗುರುಕುಲದಲ್ಲಿ ಹದಿನಾಲ್ಕು ವರ್ಷ ‘ಕಲಿತು’ ಹೊರಬೀಳುತ್ತಿದ್ದ ವಿದ್ಯಾರ್ಥಿಯ ಪಾಡು ಭಿನ್ನವೇನಾಗಿರಲಿಲ್ಲ. ‘ಗುರು ವೌನವಾಗಿ ವ್ಯಾಖ್ಯಾನ ಮಾಡುತ್ತಾನೆ;...
10th Mar, 2016
ತಮ್ಮ ಪತ್ರಿಕೆಯ 3.3.16ರ ಸಂಪಾದಕೀಯ ‘ಸೇನೆಗೆ ಬಡವರೇ ಯಾಕೆ ಸೇರಬೇಕು’ ಅರ್ಥಪೂರ್ಣವೂ ಸಂವೇದನಾಶೀಲವೂ ಆಗಿತ್ತು. ಅದಕ್ಕಾಗಿ ತಮಗೆ ಅಭಿನಂದನೆಗಳು. ನನಗೆ ಮುಖಸ್ತುತಿ ಮಾಡುವ ರೂಢಿಯಿಲ್ಲ; ಅದರ ಅಗತ್ಯವೂ ನನಗಿಲ್ಲ. ನನ್ನದೇನಿದ್ದರೂ ನೇರ ಸತ್ಯ ನಿಷ್ಠುರವಾದಿ ಪ್ರತಿಕ್ರಿಯೆ. ರಾಷ್ಟ್ರೀಯ ಪತ್ರಿಕೆಗಳಲ್ಲಿ ನಾನು ದಶಕಗಳಿಂದ...
03rd Mar, 2016
1979ರಲ್ಲಿ ನವ್ಯಕವಿ ಪ್ರೊ.ಎಂ.ಗೋಪಾಲಕೃಷ್ಣ ಅಡಿಗರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳದಲ್ಲಿ ಅ.ಭಾ. ಸಾಹಿತ್ಯ ಸಮ್ಮೇಳನ ಜರಗಿತು. ಅದೇ ದಿನ ಬೆಂಗಳೂರಿನಲ್ಲಿ ಪರ್ಯಾಯವಾಗಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. ಒಂದು ಜನಾಂಗದ ಕಣ್ಣು ತೆರೆಸಿದ ಕವಿಯೆಂದು ಹೆಸರಾಗಿದ್ದ ಅಡಿಗರು ಧರ್ಮಸ್ಥಳದ ಸಮ್ಮೇಳನದಲ್ಲಿ ಅಧ್ಯಕ್ಷರಾದುದರ ವಿರುದ್ಧ ಪ್ರತಿಭಟನೆ,...
11th Feb, 2016
1980, ಉಡುಪಿ ಕ್ರಿಶ್ಚಿಯನ್ ಪ್ರೌಢಶಾಲೆಯ ವಿದ್ಯಾರ್ಥಿಯೊಬ್ಬ ಎಸೆಸೆಲ್ಸಿಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡು ರಾಜ್ಯಕ್ಕೆ ಎರಡನೆ ರ್ಯಾಂಕ್ ಪಡೆದ. ಸಂಸ್ಕೃತವನ್ನು ಪ್ರಥಮಭಾಷೆಯಾಗಿ ತೆಗೆದುಕೊಂಡ ಬೇರೊಬ್ಬ ವಿದ್ಯಾರ್ಥಿ ಒಂದಂಕ ಹೆಚ್ಚು ಬಂದು ಪ್ರಥಮ ರ್ಯಾಂಕ್ ಗಿಟ್ಟಿಸಿದ. ಕರಾವಳಿಯ ದೈನಿಕದ ಪ್ರತಿನಿಧಿಯೊಬ್ಬರು ಅವನೊಂದಿಗೆ ಸಂದರ್ಶನ...
04th Feb, 2016
1986ರ ವೇಳೆಗೆ ರಘುಪತಿ ರಾಜ್ಯ ಶಿಕ್ಷಣ ಸಚಿವರಾಗಿದ್ದಾಗ ನಡೆದ ಪ್ರಕರಣ. ಸತ್ಯಸಾಯಿ ಲೋಕಸೇವಾ ಸಂಸ್ಥೆಯಡಿ ಏಳನೆ ತರಗತಿಯ ನಂತರ ವಿದ್ಯಾರ್ಥಿನಿಯರಿಗೆ ಕಲಿಯಲು ಅವಕಾಶವನ್ನು ಆಡಳಿತ ನೀಡಲಿಲ್ಲ. ದಿನಂಪ್ರತಿ ಪತ್ರಿಕೆಗಳಲ್ಲಿ ವಿವಿಧ ದೂರುಗಳು ಮತ್ತು ಅವುಗಳಿಗೆ ಆಡಳಿತದ ಸ್ವರಕ್ಷಣಾತ್ಮಕ ಹೇಳಿಕೆಗಳು ಪ್ರಕಟವಾಗುತ್ತಿದ್ದುವು. ಆಗಲೇ...
28th Jan, 2016
ಇಪ್ಪತ್ತು ವರ್ಷಗಳಷ್ಟು ಹಿಂದಿನ ಮಾತು. ಉಡುಪಿಯಲ್ಲಿ ಅಚ್ಚುಕೂಟ ನಡೆಸುತ್ತಿದ್ದ ಹಿರಿಯರೊಬ್ಬರನ್ನು ಭೇಟಿಯಾಗಿ ನನ್ನ ವಿಮರ್ಶಾ ಬರಹಗಳ ಸಂಕಲನದ ಮುದ್ರಣಕ್ಕೆ ತಗುಲಬಹುದಾದ ಅಂದಾಜು ವೆಚ್ಚದ ಬಗ್ಗೆ ವಿಚಾರಿಸಿದೆ. ಅವರು ಸೂಚಿಸಿದ ಹಾಗೆ ಮುದ್ರಣ ಮಾಡುವುದಾದರೆ ಸಾಲ ಮಾಡಲೇಬೇಕಿತ್ತು. ಆನಂತರ ಪ್ರತಿಗಳ ಮಾರಾಟದ ಸಮಸ್ಯೆಯ...
21st Jan, 2016
ಡಾ. ಆರ್ಕೆೆ, ಮಣಿಪಾಲ ಕೊನೆಗೂ ಜಿ.ರಾಜಶೇಖರ್ ತನ್ನ ಸಮಕಾಲೀನ ಸಾಂಸ್ಕೃತಿಕ ಮಹತ್ವದ ಮತ್ತು ಸಾಹಿತ್ಯಕ ಲೇಖನಗಳ ಸಂಕಲನವನ್ನು ಹೊರತಂದಿರುವುದು ಸಂತಸದ ವಿಷಯ. ಅಭಿನವದ ಯು.ಆರ್.ಅನಂತಮೂರ್ತಿ ಗೌರವಮಾಲಿಕೆಯಲ್ಲಿ 13ನೆಯದಾದ 'ಬಹುವಚನ ಭಾರತ' ಪ್ರಜ್ಞಾವಂತರ ಕೈಗೆ ದೊರಕುವಂತಾಗಿದೆ. ಪ್ರಚಾರವಿಮುಖ, ನಿಸ್ಪಹಾತಿನಿಸ್ಪಹ ರಾಜಶೇಖರ್, ಅನಂತಮೂರ್ತಿ ಮಾಲಿಕೆಯಡಿ ಈ...
14th Jan, 2016
ಉಡುಪಿಯ ಮಠಗಳಲ್ಲಿರುವ ಕೈಷಿಯತ್ತು ಪ್ರಕಾರ ಕೃಷ್ಣನ ವಿಗ್ರಹದ ಪ್ರತಿಷ್ಠಾಪನೆಯಾದುದು 1238ರಲ್ಲಿ. ‘ಶಿವಳ್ಳಿ’ ಎಂಬ ಹೆಸರು ಬಂದಿರುವುದು ಅನಂತೇಶ್ವರ ದೇವಸ್ಥಾನದಿಂದ. ಶಂಕರಾಚಾರ್ಯರ ಶಿಷ್ಯ ಹಸ್ತಾಮಲಕ ಆಚಾರ್ಯನು 15 ಅಂಗುಲದ ವೇಣುಗೋಪಾಲನ ವಿಗ್ರಹವನ್ನು ಸ್ಥಾಪಿಸಿರುವುದು ‘ಶಂಕರವಿಜಯ’ (ಪು.206)ದಲ್ಲಿ ಉಲ್ಲೇಖಗೊಂಡಿದೆ. ಕೃಷ್ಣಮಠಕ್ಕೆ ಪ್ರವೇಶ ಮಾಡುತ್ತಲೆ ಪೂರ್ವಮುಖವಾಗಿ...
07th Jan, 2016
ಒರೆಗಲ್ಲು ನಮ್ಮ ಸಮಾಜಕ್ಕೆ ಅಂಟಿದ ದೊಡ್ಡ ರೋಗವೇನೆಂದರೆ, ಏನೇ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳುವುದಿದ್ದರೂ ವಿದ್ಯಾರ್ಥಿಗಳಿಂದ ಪ್ರಾರಂಭಿಸಬೇಕು ಎಂದು ವಾದಿಸುವುದು. ಪರಿಸರ ರಕ್ಷಣೆ, ವನಮಹೋತ್ಸವ, ಗ್ರಾಹಕ ಚಳವಳಿ, ಶುಚಿತ್ವ ಇತ್ಯಾದಿ ಏನೇ ಯೋಜನೆಯಿದ್ದರೂ ವಿದ್ಯಾರ್ಥಿಗಳ ಮುಖಾಂತರ ಪ್ರಚಾರ ಮಾಡಬೇಕು ಎನ್ನುವುದು ವಿದ್ಯಾರ್ಥಿ ಜೀವನದ ಸವಾಲುಗಳನ್ನು...
01st Jan, 2016
1976ರಲ್ಲಿ ನಾನು ‘ತುಳುನಾಡಿನ ಸ್ಥಳನಾಮಾಧ್ಯಯನ’ ಎಂಬ ವಿಷಯದ ಕುರಿತು ಪಿಎಚ್.ಡಿ.ಗಾಗಿ ಹೆಸರು ನೋಂದಾಯಿಸಿದಾಗ ಗೆಳೆಯ ಪ್ರೊ. ಕೆ.ಎಸ್. ಕೆದ್ಲಾಯರು ಒಂದು ಸಲಹೆ ನೀಡಿದರು. ‘‘ಬಸ್ಸಿನಲ್ಲಿ ಹೋಗುವಾಗ ಒಂದು ಬದಿ, ವಾಪಸ್ಸಾಗುವಾಗ ಇನ್ನೊಂದು ಬದಿಯ ಊರಿನ ಹೆಸರುಗಳನ್ನು ಪಟ್ಟಿಮಾಡುತ್ತ ಹೋಗಿ; ಅವುಗಳ ಕುರಿತಾದ...
25th Dec, 2015
‘ನಾವು ಹುಟ್ಟುವ ಮೊದಲೇ ನಮ್ಮ ಹೆಸರು ನಮ್ಮವಾಗಿವೆ’: ‘ಒಂದು ಸ್ಥಳದ ಹೆಸರನ್ನು ಅರ್ಥಮಾಡಿಕೊಳ್ಳದಿದ್ದರೆ ಚರಿತ್ರೆಯೇ ನಿಮಗೆ ಅರ್ಥವಾಗುವುದಿಲ್ಲ’ ಮುಂತಾದ ಮಾತುಗಳು ಸ್ಥಳನಾಮದ ಮಹತ್ವವನ್ನು ಸಾಬೀತುಮಾಡುತ್ತವೆ. ಏಕೆಂದರೆ, ಸ್ಥಳನಾಮಗಳಲ್ಲಿ ಕಲ್ಪನೆಯಿಲ್ಲ; ಅಲಂಕಾರವಿಲ್ಲ; ರಂಜನೆ ಇಲ್ಲ. ಅವು ಒಂದು ನಿರ್ದಿಷ್ಟ ಸ್ಥಳದ ಗುರುತುಪಟ್ಟಿಕೆಯೆನ್ನಲಾಗುತ್ತದೆ. ಈಗಿನ ಭಾಷಿಕ...
Back to Top