ನೇಸರ ನೋಡು

01st Sep, 2018
ಸಾಮಾಜಿಕ ಅಸಮಾನತೆ, ಶೋಷಣೆ, ಅನ್ಯಾಯ ಮೊದಲಾದ ಕಾರಣಗಳಿಂದಾಗಿ ಎಡಪಂಥೀಯರತ್ತ ಒಲವು ಅಥವಾ ಸಹಾನುಭೂತಿ ಉಳ್ಳವರೆಲ್ಲರನ್ನು ಸಾರಾಸಗಟಾಗಿ ಹಿಂಸೆಗೆ ಕುಮ್ಮಕ್ಕು ನೀಡುವವರು, ‘ನಗರ ನಕ್ಸಲೀಯರು’ ಎಂದು ಆಧಾರರಹಿತವಾಗಿ ಆರೋಪಿಸುವುದು ತಪ್ಪಾಗುತ್ತದೆ. ಈ ಐವರು ಮಾನವಹಕ್ಕು ಕಾರ್ಯಕರ್ತರು ಪುಣೆಯ ಸಮೀಪ ಸಂಭವಿಸಿದ ಭೀಮಾ-ಕೋರೆಗಾಂವ್ ಗಲಭೆಯಲ್ಲಿ...
25th Aug, 2018
 ಕುಲದೀಪ್ ನಯ್ಯರ್ ಪತ್ರಕರ್ತರಷ್ಟೇ ಆಗಿರಲಿಲ್ಲ. ವ್ಯಾಖ್ಯಾನಕಾರ, ಗ್ರಂಥಕರ್ತ, ಶಾಂತಿ ಮತ್ತು ಮಾನವ ಹಕ್ಕುಗಳ ಕ್ರಿಯಾವಾದಿ ಹೋರಾಟಗಾರ, ರಾಜತಂತ್ರಜ್ಞ ಮತ್ತು ಸಂಸದೀಯ ಪಟು ಇವೆಲ್ಲವೂ ಆಗಿದ್ದರು. ಸ್ವಾತಂತ್ರೋತ್ತರ ಭಾರತೀಯ ಪತ್ರಿಕೋದ್ಯಮದಲ್ಲಿ ಪತ್ರಿಕಾ ಧರ್ಮ ಎತ್ತಿಹಿಡಿದ ಧ್ಯೇಯನಿಷ್ಠ ಪತ್ರಕರ್ತರಾಗಿ ಖ್ಯಾತಿವೆತ್ತರಾದಂತೆಯೇ ಶಾಂತಿ ಮತ್ತು ಮಾನವಹಕ್ಕುಗಳ...
18th Aug, 2018
ನೈಪಾಲ್ ಅವರ ಕೃತಿಗಳಲ್ಲಿ ಕಂಡುಬರುವ ರಾಜಕೀಯ ಧೋರಣೆಯೂ ಅವರು ವಿವಾದಾತ್ಮಕ ಲೇಖಕ ಎನ್ನಿಸಿಕೊಳ್ಳಲು ಇನ್ನೊಂದು ಕಾರಣ. ಅವರ ಕೃತಿಗಳಲ್ಲಿ ಕಂಡುಬರುವ ವಾಮ ಪಂಥೀಯ ಸಿದ್ಧಾಂತ ಕುರಿತ ಧೋರಣೆ ಅವರ ವಿವಾದಾತ್ಮಕತೆಯ ಇನ್ನೊಂದು ತಿರುವು. ಬಡವರು ಮತ್ತು ಅವಕಾಶವಂಚಿತರ ಕೈಗೆ ಅಧಿಕಾರದ ಹಸ್ತಾಂತರವಾಗಬೇಕು...
11th Aug, 2018
‘ಅನನ್ಯ’ಕ್ಕೆ ಈಗ ಇಪ್ಪತ್ಮೂರರ ಪ್ರಾಯ. ಪತ್ರಿಕೆಗೆ ಇಪ್ಪತ್ತು ತುಂಬಿದೆ. ಕಳೆದ ವರ್ಷ ಎರಡು ಸಾರ್ಥಕ ದಶಕಗಳ ಮೆಲುಕಿನ ಸಂಗೀತೋತ್ಸವವೂ ನಡೆಯಿತು. ಆಸಕ್ತಿ, ಕಾಳಜಿಗಳಿದ್ದಲ್ಲಿ ಯಾರ ಹಂಗೂ ಇಲ್ಲದೆ ವ್ಯಕ್ತಿಗತ ನೆಲೆಯಲ್ಲೇ ಕಲೆ ಸಂಸ್ಕೃತಿ ಪೋಷಣೆಯ ಕೆಲಸಗಳನ್ನು ಮಾಡಬಹುದು ಎನ್ನುವುದಕ್ಕೆ ಡಾ. ಆರ್....
04th Aug, 2018
ತಮ್ಮ ನೇರ-ನಿರ್ಭೀತ ನುಡಿಗಳಿಂದ,ಲೇಖನಗಳಿಂದ ಇವತ್ತಿನ ಭಾರತಕ್ಕೆ ಕನ್ನಡಿ ಹಿಡಿಯುತ್ತಿರುವ ಗೋಪಾಲಕೃಷ್ಣ ಗಾಂಧಿಯವರು ಇಂದಿನ ಭಾರತದ ಆತ್ಮಸಾಕ್ಷಿ, ಜಾಗೃತ ಪ್ರಜ್ಞೆ-ಪ್ರಜ್ಞಾ ಪಾಲಕ. ಶಾಂತಿ, ಕೋಮು ಸೌಹಾರ್ದ, ಸಾಮರಸ್ಯಗಳಿಗಾಗಿ ಮುಡುಪಿನ ಸೇವೆ ಸಲ್ಲಿಸುವವರಿಗೆ ನೀಡಲು ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಸ್ಮರಣಾರ್ಥ ಸ್ಥಾಪಿಸಲಾಗಿರುವ...
28th Jul, 2018
ಮಲೆನಾಡ ಸೆರಗಿನ ಹೊದಿಗೆರೆಯ ಎಚ್.ಎಸ್.ವೆಂಕಟೇಶ ಮೂರ್ತಿಯವರು ಕವಿಯಾಗಿ, ನಾಟಕಕಾರರಾಗಿ ಸುಪ್ರಸಿದ್ಧರು. ಸಿನೆಮಾ ಲೋಕಕ್ಕೆ ಅವರು ಅಷ್ಟೇನೂ ಅಪರಿಚಿತರಲ್ಲ. ಗೀತೆಗಳು, ಥೀಮ್ ಸಾಂಗ್, ಟೈಟಲ್ ಸಾಂಗ್‌ಗಳಿಂದ ಪರಿಚಿತರು. ಈಗ ನಿರ್ದೇಶಕರು. ಹೊದಿಗೆರೆಯಿಂದ ಕನ್ನಡ ಕಾವ್ಯ ಲೋಕಕ್ಕೆ ಅವರ ಯಾನ ಒಂದು ಮಹತ್ವಪೂರ್ಣ ಘಟ್ಟವಾದರೆ,...
21st Jul, 2018
ಆ ದಿನಗಳ ಕವಿಕತೆಗಾರರ ಸಾಲಿನಲ್ಲಿ ಜಾಗ ಗಿಟ್ಟಿಸಿಕೊಂಡ. ವ್ಯಾಸ ರಾವ್ ಬರವಣಿಗೆ ಶುರುಮಾಡಿದ ಕಾಲಘಟ್ಟದಲ್ಲಿ ನವ್ಯದ ಪ್ರಭಾವ ಲೇಖಕನ ಸ್ವಂತದೃಷ್ಟಿಯನ್ನು ಮಂಜಾಗಿಸುವಷ್ಟು ದಟ್ಟವಾಗಿತ್ತು. ಈ ಪ್ರಭಾವದಿಂದ ಬೆಳೆಯತೊಡಗಿದ ಎಷ್ಟೋ ಮಂದಿ ಮುಂದೆ ನವ್ಯದ ದಿಗಂತದಿಂದ ಉದುರಿದ ಉಲ್ಕೆಗಳಾದರು. ಆದರೆ ವ್ಯಾಸ ರಾವ್...
14th Jul, 2018
ನಮ್ಮ ಈಗಿನ ದಲಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇತ್ತೀಚೆಗೆ ಪತ್ನಿ ಸಮೇತರಾಗಿ ಪುರಿ ದೇವಾಲಯಕ್ಕೆ ಹೋದಾಗ ಅವರನ್ನು ಗದರಿಸಿ ಅವಮಾನಿಸಲಾಯಿತು. ಗದರಿಸಿ ಅವಮಾನಿಸಲಾಯಿತು ಎಂದು ಮುಗುಮ್ಮಾಗಿ ಹೇಳಲಾಗಿದೆ. ಗದರಿಸಿ ಅವಮಾನಿಸುವುದು ಎಂದರೇನು? ರಾಷ್ಟ್ರದ ಪ್ರಥಮ ಪ್ರಜೆಯನ್ನು ಹಾಗೇಕೆ ನಡೆಸಿಕೊಳ್ಳಲಾಯಿತು ಎಂಬುದು...
07th Jul, 2018
ಕಬೀರ ಕಾಲದೇಶಗಳನ್ನು ಮೀರಿದ ಸಂತ ಕವಿ. ಪ್ರಾಕ್ತನ ಗ್ರಂಥ ಭಂಡಾರಗಳಲ್ಲಿ ಅವನ ಕಾವ್ಯಕೃತಿಗಳು ಹಸ್ತಪ್ರತಿಗಳಲ್ಲಿ ಇಂದಿಗೂ ಲಭ್ಯ. ಕಬೀರನ ದ್ವಿಪದಿಗಳು ಮತ್ತು ಹಾಡುಗಳು ಹೊಸ ಕಾವ್ಯದ ಹರಿಕಾರನಂತೆ ಯುವ ತಲೆಮಾರಿನ ಲೇಖಕರನ್ನು, ಸಾಹಿತ್ಯಾಸಕ್ತರನ್ನು ಆಕರ್ಷಿಸಿದೆ, ಪ್ರಭಾವಿಸಿದೆ. ಇಂದಿಗೂ ಆಕರ್ಷಿಸುತ್ತಿದೆ. ಕಬೀರ, ರಸಿಕರು...
30th Jun, 2018
ಪದ್ಮಭೂಷಣ ಮೊದಲಾದ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದ ಎಂ.ಎಲ್. ವಸಂತಕುಮಾರಿಯವರು ಸಮೃದ್ಧ ಸಂಗೀತದ ಅರವತ್ತೆರಡು ವಸಂತಗಳ ಸಾರ್ಥಕ ಬದುಕನ್ನು ಬಾಳಿ 1990ರ ಅಕ್ಟೋಬರ್ 31ರಂದು ನಿಧನರಾದರು. ಇದ್ದಿದ್ದರೆ ಅವರಿಗೀಗ ತೊಂಬತ್ತರ ಉದಯರಾಗದ ಪ್ರಾಯ. ಇದೀಗ ಎಂ.ಎಲ್.ವಿ. ಯವರ ತೊಂಬತ್ತನೇ ಜನ್ನದಿನೋತ್ಸವವನ್ನು ಆಚರಿಸಲು ಅವರ ಅಭಿಮಾನಿಗಳು...
23rd Jun, 2018
ನಾಗತಿಹಳ್ಳಿಯವರಿಗೆ ಸಾಹಿತ್ಯವಾಗಲಿ, ಸಿನೆಮಾ ಆಗಲಿ ಎಂದಿಗೂ ಕೇವಲ ಹವ್ಯಾಸವಾಗಿರಲಿಲ್ಲ. ಎರಡೂ ಮಾರ್ಗಗಳಲ್ಲಿ ಅವರ ಸಂವೇದನೆ ಸಂಪೂರ್ಣವಾಗಿ ಆಧುನಿಕ ಚಿಂತನೆ ಮತ್ತು ಪರಂಪರೆಯ ಅಧ್ಯಯನಶೀಲತೆಗೆ ಬದ್ಧವಾದದ್ದು. ಆಸಕ್ತಿ, ಅಧ್ಯಯನ ಮತ್ತು ಸೃಜನಶೀಲ ಪ್ರತಿಭೆ ಮುಪ್ಪುರಿಗೊಂಡು ಬೆಳೆದ ಲೇಖಕ ನಾಗತಿಹಳ್ಳಿ. ಚಿತ್ರಕಥೆ, ಸಂಭಾಷಣೆ, ಗೀತೆಗಳ...
16th Jun, 2018
ಅಭಿವೃದ್ಧಿ, ವಿಕಾಸ ಎನ್ನುವ ಮಾತುಗಳನ್ನು ಮುಂದುಮಾಡಿ ಸರಕಾರ ಜನರ ಖಾಸಗಿತನದೊಳಕ್ಕೆ ಮೂಗು ತೂರಿಸುತ್ತಿರುವುದು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದು ಹಲವು ರೀತಿಗಳಲ್ಲಿ ನಮ್ಮ ಅನುಭವಕ್ಕೆ ಬರುತ್ತಿರುವ ಸಂಗತಿಗಳಾಗಿವೆ. ಅಭಿವೃದ್ಧಿ ಎಂದರೆ ಸ್ವಾತಂತ್ರ್ಯ. ಪ್ರಜೆಗಳ ಚಟುವಟಿಕೆಗಳ ಮೇಲೆ ಬೇಹುಗಾರಿಕೆ ನಡೆಸುವುದು, ನಿಯಂತ್ರಿಸುವುದು ಸ್ವಾತಂತ್ರ್ಯದ...
09th Jun, 2018
ಡಾ. ಶೆಟ್ಟರ್ ಅವರ ಪ್ರತಿಭೆ ಮತ್ತು ವಿದ್ವತ್ತಿನ ಮುಖ್ಯ ಅಂಶವೆಂದರೆ, ಪರಸ್ಪರ ಮಿಳಿತವಾಗಿರುವ ಇತಿಹಾಸ, ಸಾಹಿತ್ಯ, ಕಲೆ ಇವುಗಳ ಅಂತರ್‌ಸಂಬಂಧವನ್ನು ಗುರುತಿಸುವುದರಲ್ಲಿ, ವಿಶ್ಲೇಷಿಸುವುದರಲ್ಲಿ ಅವರು ತೋರಿದ ಆಸಕ್ತಿ. ಇದರಿಂದಾಗಿಯೇ ಅವರು ಹಳೆಗನ್ನಡ ಕಾವ್ಯಕೃತಿಗಳು, ಸ್ಮಾರಕಗಳಾದ ವೀರಗಲ್ಲುಗಳು, ಸತಿಕಲ್ಲುಗಳು, ನಿಷಿಧಿಗಳು ಮೊದಲಾದವುಗಳನ್ನು ಅರಸುತ್ತಾ...
02nd Jun, 2018
ಬೆಸಗರಹಳ್ಳಿಯವರ ಕತೆಗಳ ಕೇಂದ್ರ ಬಿಂದು ನಮ್ಮ ಗ್ರಾಮ ಸಮಾಜ. ನಿಸರ್ಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಒಕ್ಕಲು ಮಕ್ಕಳ ನಿತ್ಯಬದುಕಿನ ಸುಖ ದುಃಖಗಳು, ತರಲೆ ತಾಪತ್ರಯಗಳು, ಶೋಷಿತರ ನೋವಿನ ಆಕ್ರಂದನಗಳು-ಅಸೂಯೆಗಳು, ಇವುಗಳ ಮಧ್ಯೆ ನುಸುಳುವ ಪ್ರೀತಿ ಅಂತಃಕರಣಗಳು ಮೆರವಣಿಗೆಯೋಪಾದಿ ಅವತರಿಸಿ ಗ್ರಾಮಜೀವನದ ದರ್ಶನವನ್ನು...
26th May, 2018
ಸಾಹಿತ್ಯ ಕ್ಷೇತ್ರದಲ್ಲಿ ನಾಟಕಕಾರರಾಗಿ ಜ್ಞಾನ ಪೀಠ ಪ್ರಶಸ್ತಿಗೆ ಪುರಸ್ಕೃತರಾದವರಲ್ಲಿ ಮೊದಲಿಗರು ಕಾರ್ನಾಡರು.ಅವರು ವಿದೇಶಗಳಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಕನ್ನಡ ನಾಟಕಕಾರರೂ ಹೌದು. ಕಾರ್ನಾಡರ ನಾಟಕಗಳು ಇಂಗ್ಲಿಷ್ ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ. ಜ್ಞಾನಪೀಠ ಪ್ರಶಸ್ತಿಗೆ ಮುಂಚೆಯೇ ನಾಟಕಕಾರರಾಗಿ, ನಟರಾಗಿ ರಾಷ್ಟ್ರೀಯು/ಅಂತರ್‌ರಾಷ್ಟ್ರೀಯ...
19th May, 2018
ಗಿರಡ್ಡಿಯವರ ವಿಮರ್ಶೆಯ ಹಾಸುಬೀಸು ದೊಡ್ಡದು. ಅದು ಜಾನಪದದಿಂದ, ಶಿಷ್ಟ ಅತಿಶಿಷ್ಟದವರೆಗೆ ತನ್ನ ಕಬಂಧ ಬಾಹುಗಳನ್ನು ಚಾಚಿದೆ. ‘ನವ್ಯ ವಿಮರ್ಶೆ’, ‘ಜಾನಪದ ಕಾವ್ಯ’, ‘ಕಾದಂಬರಿ ವಸ್ತು ಮತ್ತು ತಂತ್ರ’, ‘ಸಾಹಿತ್ಯ ಮತ್ತು ಪರಂಪರೆ’, ‘ನಾಟಕ ಸಾಹಿತ್ಯ ಮತ್ತು ರಂಗಭೂಮಿ’-ಇವೆಲ್ಲ ಕನ್ನಡ ವಿಮರ್ಶೆಯಲ್ಲಿ ಗಿರಡ್ಡಿಯವರಿಗೆ...
12th May, 2018
ಭಾರತದ ಅನುಪಮ ಸೌಂದರ್ಯದ ಸ್ಮಾರಕವೊಂದು, ರಾಷ್ಟ್ರೀಯ ಸಂಪದವೊಂದು ಈ ರೀತಿ ಸರಕಾರಗಳ ನಿರ್ಲಕ್ಷದಿಂದಾಗಿ ಕ್ಷಯಿಸಿಹೋಗುತ್ತಿರುವುದು ನಿಜಕ್ಕೂ ಒಂದು ಶೋಚನೀಯ ಸಂಗತಿ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಲ್ಲ ಪೂರ್ವಾಗ್ರಹಗಳನ್ನು ತೊರೆದು ತಾಜ್ ಮಹಲ್‌ನ್ನು ಉಳಿಸಲು ತ್ವರಿತವಾಗಿ ಕಾರ್ಯೋನ್ಮುಖವಾಗಬೇಕು. ಇಲ್ಲವಾದಲ್ಲಿ ಭವಿಷ್ಯದ ಜನಾಂಗಕ್ಕೆ...
05th May, 2018
ಕೇಂದ್ರ ಸರಕಾರದ ಪುರಾತತ್ವ ಇಲಾಖೆ ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವದ ಸ್ಮಾರಕಗಳನ್ನು, ಪ್ರಾಚ್ಯವಸ್ತು ತಾಣಗಳನ್ನು ಕಾಪಾಡುವುದರಲ್ಲಿ ವಿಫಲವಾಗಿರುವುದರಿದಲೇ ದತ್ತುಕೊಡುವ ಆಲೋಚನೆ ಕೇಂದ್ರದ ಮಹಾತಲೆಗಳಿಗೆ ಹೊಳೆದಿದೆ. ಅದಕ್ಷತೆ, ಹಣದ ಕೊರತೆ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಕೇಂದ್ರ ಪುರಾತತ್ವ ಇಲಾಖೆ ತನ್ನ ಕರ್ತವ್ಯ...
28th Apr, 2018
ಸಿಜಿಕೆಯವರ ವೈಚಾರಿಕ ನಿಲುವುಗಳಷ್ಟೇ ಮೊನಚಾದುದು ಅವರ ಪ್ರತಿಭೆಯ ಪ್ರಖರತೆಯೂ. ಅವರು ರಂಗಭೂಮಿಯ ಒಳಹೊರಗುಗಳನ್ನೆಲ್ಲ ಬಲ್ಲವರಾಗಿದ್ದರು. ಸಾಹಿತ್ಯ, ರಂಗಕೃತಿ, ಅಭಿನಯ ಕಲೆ, ಬೆಳಕು, ಪ್ರಸಾಧನ, ಪರಿಕರ, ಸಂಗೀತ, ಪ್ರೇಕ್ಷಕರು-ಹೀಗೆ ರಂಗಭೂಮಿಯ ಒಳಗುಹೊರಗುಗಳಲ್ಲೆಲ್ಲ ಸುಳಿದಾಡಿ ಅವುಗಳ ನಾಡಿಮಿಡಿತ ಕಂಡುಕೊಂಡಿದ್ದ ಸಿಜಿಕೆ ರಂಗಭೂಮಿಯ ನವಮಾಂತ್ರಿಕನಂತಿದ್ದರು. ಮಾಂತ್ರಿಕನೆಂದರೆ...
21st Apr, 2018
 ಶಿಕ್ಷಣ ಹಕ್ಕು ಶಾಸನವನ್ನು ಜಾರಿಗೆ ತರುವ ಜವಾಬ್ದಾರಿ ಕಾರ್ಯಾಂಗದ್ದು. ಈ ವಿಷಯದಲ್ಲಿ ಕಾರ್ಯಾಂಗವನ್ನು ಉತ್ತರದಾಯಿಯಾಗಿ ಮಾಡಬೇಕಾದ ಹೊಣೆ ಶಾಸಕಾಂಗದ್ದು.ಸಚಿವರು ನೀಡಿರುವ ಉತ್ತರವನ್ನು ಗಮನಿಸಿದಾಗ ಈ ಎರಡೂ ಅಂಗಗಳು ಸರಿಯಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇದು ನಮ್ಮ ಮಕ್ಕಳ ಭವಿಷ್ಯಕ್ಕೆ...
14th Apr, 2018
ಪತ್ರಿಕಾ ವ್ಯವಸಾಯದ ಬಗ್ಗೆ ತಮಗಿರುವ ಅಸಹಿಷ್ಣುತೆಯನ್ನು ಸ್ಮೃತಿ ಇರಾನಿಯವರು ಒಂದಕ್ಕಿಂತ ಹೆಚ್ಚು ಬಾರಿ ಬಹಿರಂಗಗೊಳಿಸಿದ್ದಾರೆ. ಇಂಥವರಿಂದ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಯನ್ನು ನಿರೀಕ್ಷಿಸಲಾಗದು. ಎಂದೇ ಅವರು ವಾರ್ತೆ ಮತ್ತು ಪ್ರಸಾರ ಖಾತೆ ಸಚಿವರಾಗಿರಲು ಅನರ್ಹರು. ಸುಳ್ಳು ಸುದ್ದಿ ಆಜ್ಞೆ ವಾಪಸಿಗೂ ಮೊದಲು ಮೋದಿಯವರು...
07th Apr, 2018
ಸಿದ್ದರಾಮಯ್ಯನವರು ಮಂಡಿಸಿರುವ ಪ್ರಸ್ತಾಪಗಳು ಬಿಜೆಪಿಯನ್ನು ‘ಬಿಸಿತುಪ್ಪನುಂಗಲೂ ಆಗದು, ಉಗುಳಲೂ ಆಗದು’ ಎನ್ನುವಂಥ ಸ್ಥಿತಿಗೆ ನೂಕಿವೆ. ಕನ್ನಡ ಬಾವುಟ, ಕನ್ನಡ ಭಾಷೆ, ಕನ್ನಡ ಸಂಸ್ಕೃತಿಗಳ ಅಸ್ಮಿತೆ, ಕಲ್ಯಾಣ ಕ್ರಾಂತಿಯ ಆಶಯಗಳು, ಹಣಕಾಸು ಆಯೋಗದ ಮಾನದಂಡಗಳು ಇವುಗಳ ಬಗ್ಗೆ ಬಿಜೆಪಿ ರಾಜ್ಯ ಶಾಖೆಯ ಆಕ್ಷೇಪಣೆ...
24th Mar, 2018
‘ಜ್ಞಾಪಕ ಚಿತ್ರಶಾಲೆ’  -ವಿದ್ವಾಂಸರು ವರ್ಣಿಸಿರುವಂತೆ, ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದ ಅವಧಿಯ ಕನ್ನಡನಾಡಿನ ಸಾಂಸ್ಕೃತಿಕ ಚರಿತ್ರೆಯೇ ನವರಸಮಯವಾಗಿ ಮೈವೆತ್ತಿ ಬಂದಂತಿರುವ ಒಂದು ಅನನ್ಯ ಕೃತಿ. ಕನ್ನಡ ಸಾಹಿತ್ಯದ ಮಾರ್ಗಪ್ರವರ್ತಕರಲ್ಲೊಬ್ಬರಾದ ಡಿ.ವಿ.ಜಿ.ಯವರು ಈ ಕೃತಿಯ ಲೇಖಕರು. ಸುಮಾರು ಎರಡು ಸಾವಿರ ಪುಟಗಳಷ್ಟಿರುವ ಈ ರಸಮಯ ಸಾಹಿತ್ಯ ಹಿಂದೆ...
17th Mar, 2018
ಹಾಕಿಂಗ್ ಅವರ ಬದುಕು ಮನವಕುಲಕ್ಕೆ ಬ್ರಹ್ಮಾಂಡದ ರಹಸ್ಯಗಳನ್ನು ತೆರೆದು ತೋರಿಸಿದಷ್ಟೇ ಅಲ್ಲದೆ ಮಾನವ ಪ್ರಯತ್ನಗಳ ಇನ್ನೊಂದು ತುದಿಯಲ್ಲಿ ಭರವಸೆಯ ಬೆಳಕಿದೆ ಎಂಬುದನ್ನು ಸ್ವಂತ ನಿದರ್ಶನದಿಂದ ತೋರಿಸಿಕೊಟ್ಟಿತು. ಕನಸುಗಳನ್ನು ನನಸಾಗಿಸುವ ಮಾರ್ಗದಲ್ಲಿ ಮಾನವನ ದೈಹಿಕ ನ್ಯೂನತೆಗಳು ಅಡ್ಡಿಯಾಗಲಾರವು ಎಂಬದನ್ನು ಅವರು ತೋರಿಸಿಕೊಟ್ಟರು. ಸ್ಟೀಫನ್...
10th Mar, 2018
 ಕಂಬಾರರು ಅಕಾಡಮಿಗಳ ಒಳಹೊರಗುಗಳನ್ನು ಬಲ್ಲವರು. ಮಿಗಿಲಾಗಿ ಎರಡು ಅವಧಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಅದನ್ನು ಕೇವಲ ಪದವಿಗಳನ್ನು ಕೊಡುವ ವಿಶ್ವವಿದ್ಯಾನಿಲಯವನ್ನಾಗಿಸದೆ ಕನ್ನಡ ಸಂಶೋಧನಾ ಕೇಂದ್ರವಾಗಿ ಬೆಳೆಸಿದ ಕೀರ್ತಿಯ ಕಂಬಾರರಿಗೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಡಳಿತದಲ್ಲಿ ಶ್ರೇಷ್ಠತೆಯನ್ನು ಗುರುತಿಸುವ, ಅಸಮತೆ-ಅನ್ಯಾಯಗಳನ್ನು ನೀಗಿಸುವ...
03rd Mar, 2018
ಕನ್ನಡ ಸ್ತ್ರೀವಾದಿ ಸಾಹಿತ್ಯ ಮಾರ್ಗದ ಪ್ರವರ್ತಕ ಹೆಜ್ಜೆಗಳಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅವರದು ಅಳಿಸಲಾಗದ ಹೆಗ್ಗುರುತು. ಬಿದಿರು ದಬ್ಬೆಗೆ ಇರುವ ಜೀವಶಕ್ತಿ, ಆಸರೆಯಾಗಿ ನಿಲ್ಲುವ ಅದರ ಸಾಮರ್ಥ್ಯ ಪ್ರಕೃತಿಯ ಸೋಜಿಗಗಳಲ್ಲೊಂದು. ಎಂದೇ ವಿಜಯಾ ಅವರ ಹೆಸರಿಗೆ ಅಂಟಿಕೊಂಡಿರುವ ‘ದಬ್ಬೆ’ ಅವರ ಸ್ತ್ರೀವಾದಿ...
24th Feb, 2018
ಸಿನೆಮಾ ರಂಗಕ್ಕೂ ರಾಜಕೀಯಕ್ಕೂ ಏನಾದರೂ ರಕ್ತ ಸಂಬಂಧ ಉಂಟೆ ಎನ್ನುವುದು ಸಂಶೋಧನೆಗೆ ಒಳ್ಳೆಯ ವಸ್ತುವಾಗಬಲ್ಲದು. ಸಂಶೋಧನಾಸಕ್ತರು ನೆರೆಯ ತಮಿಳುನಾಡಿಗೆ ಹೋದರೆ ಸಾಕು, ವಿಪುಲ ಸಾಮಗ್ರಿ ಸಿಗುತ್ತದೆ. ಇದರಲ್ಲಿ ಕನ್ನಡ, ತೆಲುಗು, ಹಿಂದಿ, ಬಂಗಾಳಿ ಚಲಚ್ಚಿತ್ರ ಕಲಾವಿದರೂ ಹಿಂದೆ ಬಿದ್ದಿಲ್ಲ. ಆದರೆ ರಾಜಕಾರಣದೊಂದಿಗೆ...
17th Feb, 2018
ಥಿಯೋಡೊರಾಸ್ ಟೆರ್ರೊಪೊಲಸ್ ಇಪ್ಪತ್ತನೆ ಶತಮಾನದ ಗ್ರೀಕ್ ಕಂಡ ಒಬ್ಬ ಮೇಧಾವಿ ರಂಗ ನಿರ್ದೇಶಕ. ಥಿಯೇಟರ್ ಒಲಿಂಪಿಕ್ಸ್ ಥಿಯೋಡೊರಾಸ್‌ನ ಕಲ್ಪನೆಯ ಕೂಸು. 1993ರಲ್ಲಿ ಗ್ರೀಸ್‌ನ ಡೆಲ್ಫಿಯಲ್ಲಿ ‘ಥಿಯೇಟರ್ ಒಲಿಂಪಿಕ್ಸ್’ ಅಸ್ತಿತ್ವಕ್ಕೆ ಬಂತು. ಪ್ರತೀವರ್ಷ ಜಗತ್ತಿನ ರಂಗಭೂಮಿಯ ಮಹಾನ್ ನಿರ್ದೇಶಕರ ಸಾಧನೆಗಳನ್ನು ಬಿಂಬಿಸುವ ನಾಟಕೋತ್ಸವಗಳನ್ನು...
10th Feb, 2018
ಜಿ.ಎಸ್.ಆಮೂರರು ವರ್ಣಿಸಿರುವಂತೆ, ಸುಬ್ಬಣ್ಣನಿಗೆ ಶ್ರೀರಂಗರಲ್ಲಿ ಆಂಜನೇಯ ಭಕ್ತಿ. ಶ್ರೀರಂಗರ ಕಷ್ಟಸುಖಗಳ ಕಾಳಜಿಮಾಡುವುದರಿಂದ ಹಿಡಿದು ಅವರ ಹಲವಾರು ನಾಟಕಗಳ ನಿರ್ದೇಶನ, ಅವರ ದಾಖಲೆಗಳ ಸಂಗ್ರಹ ಮೊದಲಾಗಿ ಹಲವು ರೀತಿರಿವಾಜುಗಳಲ್ಲಿ ಈ ‘ಭಕ್ತಿ’ ಪ್ರಕಟಗೊಂಡಿರುವುದುಂಟು. ಶ್ರೀರಂಗರ ಬಗ್ಗೆ ಒಂದು ವಸ್ತು ಸಂಗ್ರಹಾಲಯ ತುಂಬುವಷ್ಟು ಸಾಮಗ್ರಿಯನ್ನು...
03rd Feb, 2018
‘ಮೊದಲು ಮಾನವನಾಗು’ ಕವಿತೆ ಕನ್ನಡಿಗರಿಗೆ ಹೃದ್ಗತವಾಗಿರುವುದು ಕವಿ ಕಾವ್ಯಾನಂದರಿಗೆ ಇವೆಲ್ಲಕ್ಕೂ ಮಿಗಿಲಾಗಿ ಸಂದಿರುವ ಪ್ರೀತಿ, ಗೌರವ. ‘ಮೊದಲು ಮಾನವನಾಗು’ ಎನ್ನುವುದು ಪುರಾಣಿಕರ ಜೀವನ ಮತ್ತು ಸಾಹಿತ್ಯಗಳ ಪಲ್ಲವಿ ಎನ್ನುವ ಹಾ. ಮಾ. ನಾಯಕರ ಮಾತು ಅತಿಶಯೋಕ್ತಿಯಲ್ಲ.ಮನುಷ್ಯ ಮನುಷ್ಯನಾಗುವುದಕ್ಕಿಂತ ದೊಡ್ಡವನಾಗಬೇಕಿಲ್ಲ ಎಂಬುದೇ ಸಿದ್ಧಯ್ಯ...
Back to Top