ಬಿಜೆಪಿ ಅಧ್ಯಕ್ಷ ನಡ್ಡಾ ಪತ್ನಿಯ ಫಾರ್ಚೂನರ್ ಕಾರು ಕಳವು
Photo source: business-standard.com)
ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಪತ್ನಿಗೆ ಸೇರಿದ್ದ ಟೊಯೊಟಾ ಫಾರ್ಚುನರ್ ಕಾರು ನೈಋತ್ಯ ದಿಲ್ಲಿಯ ಗೋವಿಂದಪುರಿ ಪ್ರದೇಶದಿಂದ ಕಳುವಾಗಿದೆ. ಕಾರನ್ನು ಮಾರ್ಚ್ 19ರಂದು ಅಪರಾಹ್ನ 3 ಹಾಗೂ 4ರ ನಡುವೆ ಕಳವು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕಾರಿನ ಚಾಲಕ ಜೊಗೀಂದರ್, ವಾಹನವನ್ನು ಸರ್ವಿಸಿಂಗ್ ಸಂಸ್ಥೆಯಿಂದ ತರುವಾಗ ದಾರಿ ಮಧ್ಯೆ ಗೋವಿಂದಪುರಿಯ ತನ್ನ ಮನೆಯಲ್ಲಿ ಊಟ ಮಾಡಲೆಂದು ಹತ್ತಿರದಲ್ಲಿ ಪಾರ್ಕ್ ಮಾಡಿದ್ದರೆನ್ನಲಾಗಿದೆ. ಈ ಸಂದರ್ಭ ಕಾರು ಕಳವಾಗಿದೆ.
ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರಿಗೆ ಕಾರು ಗುರುಗ್ರಾಮದತ್ತ ಸಾಗುವುದು ಕಂಡು ಬಂದಿದೆ. ಆದರೆ ಇನ್ನೂ ಪತ್ತೆಯಾಗಿಲ್ಲ. ಈ ಕಾರಿಗೆ ಹಿಮಾಚಲ ಪ್ರದೇಶ ನೋಂದಣಿ ಸಂಖ್ಯೆಯಿತ್ತು.
Next Story