ದಿಲ್ಲಿಯ ಸುಮಾರು 100 ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆ ಇಮೇಲ್ ರಷ್ಯನ್ ಡೊಮೇನ್ ಹೊಂದಿತ್ತು: ವರದಿ
ಹೊಸದಿಲ್ಲಿ: ದಿಲ್ಲಿಯ ಸುಮಾರು 100 ಶಾಲೆಗಳಿಗೆ ಇಂದು ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದು ಮಕ್ಕಳನ್ನೆಲ್ಲಾ ಮನೆಗೆ ಕಳುಹಿಸಿ ಶಾಲೆಗಳಲ್ಲಿ ಕೂಲಂಕಷ ತಪಾಸಣೆ ನಡೆಸಿದರೂ ಎಲ್ಲಿಯೂ ಯಾವುದೇ ಶಂಕಾಸ್ಪದ ವಸ್ತುಗಳು ಪತ್ತೆಯಾಗಿರುವುದರಿಂದ ಇದೊಂದು ಸುಳ್ಳು ಬಾಂಬ್ ಬೆದರಿಕೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಆದರೆ ಈ ಬಾಂಬ್ ಬೆದರಿಕೆ ಇಮೇಲ್ಗಳ ಮೂಲವನ್ನು ದಿಲ್ಲಿ ಪೊಲೀಸರು ಪತ್ತೆಹಚ್ಚಿದ್ದಾರೆ ಎಂದು ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಹೇಳಿದ್ದಾರೆ.
ಎಲ್ಲಾ ನಕಲಿ ಬಾಂಬ್ ಬೆದರಿಕೆ ಇಮೇಲ್ಗಳನ್ನು ಒಂದೇ ಐಪಿ ವಿಳಾಸ ಮೂಲಕ ಕಳುಹಿಸಲಾಗಿದ್ದು ಅದು ರಷ್ಯನ್ ಡೊಮೇನ್ ಹೊಂದಿತ್ತು ಎಂದು ವರದಿಗಳು ಹೇಳಿವೆ. ಆದರೆ ಎಲ್ಲಿಂದ ಇಮೇಲ್ ಬಂದಿವೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
Next Story