ಈಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ...

ಇನ್ನು ಎತ್ತಿನ ಹೊಳೆ ಯೋಜನೆ ಸಾಕಾರಗೊಂಡರೆ ಇಲ್ಲಿನ ಪರಿಸ್ಥಿತಿ ಏನು ....?

 ಮಂಗಳೂರು ನಗರ ಪಾಲಿಕೆಯ ವತಿಯಿಂದ ‘‘ವಾರಕ್ಕೆ ನಾಲ್ಕು ದಿನ ಮಾತ್ರ ನೀರು’’ ಎಂಬ ಪತ್ರಿಕಾ ಪ್ರಕಟನೆಯನ್ನು ನೋಡಿ ಈ ಪ್ರತಿಕ್ರಿಯೆ ಬರೆಯುತ್ತಿದ್ದೇನೆ. ಕರಾವಳಿಯ ಜನರು ತಮ್ಮ ದಾಹ ತೀರಿಸಲು ನೇತ್ರಾವತಿ ನದಿಯ ನೀರನ್ನೇ ಅವಲಂಬಿಸಿದ್ದಾರೆ. ಎಪ್ರಿಲ್ ತಿಂಗಳ ಪ್ರಾರಂಭದಲ್ಲಿಯೇ ನೇತ್ರಾವತಿ ನದಿ ತಪ್ಪಲಿನ ಜನರಿಗೆ ಕುಡಿಯಲು ನೀರಿಲ್ಲ ಎಂದ ಮೇಲೆ ಎತ್ತಿನ ಹೊಳೆ ಯೋಜನೆಯಡಿಯಲ್ಲಿ ನೇತ್ರಾವತಿ ನದಿಯನ್ನು ಕೋಲಾರ, ಚಿಕ್ಕಬಳ್ಳಾಪುರದ ಕಡೆಗೆ ತಿರುಗಿಸುತ್ತಿರುವುದು ನ್ಯಾಯವೇ?
ಎತ್ತಿನ ಹೊಳೆ ಯೋಜನೆಯು ಸರಕಾರದ ಹಣವನ್ನು ಕೊಳ್ಳೆ ಹೊಡೆಯುವ ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿರುವ ಯೋಜನೆಯಾಗಿದೆ. ಈ ಯೋಜನೆಯಿಂದ ಕೋಲಾರಕ್ಕಂತೂ ನೀರು ತಲುಪುವುದಿಲ್ಲ. ಕರಾವಳಿಯ ಜನರು ಕುಡಿಯುವ ನೀರಿಗಾಗಿ ಪರದಾಡಲಿದ್ದಾರೆ. ಇಲ್ಲಿನ ಮತ್ಸ ಸಂಪತ್ತು ಸಂಪೂರ್ಣ ನಾಶವಾಗಿ ಮೀನುಗಾರರು ಬಹಳ ತೊಂದರೆಯನ್ನು ಅನುಭವಿಸಲಿದ್ದಾರೆ. ಕರಾವಳಿಯ ರೈತರು ನೀರಿಲ್ಲದೆ ತತ್ತರಿಸಲಿದ್ದಾರೆ.
ಎತ್ತಿನ ಹೊಳೆ ಯೋಜನೆಯ ಯೋಜನಾ ವರದಿಯೇ ಹಲವು ಸಂಶಯಗಳಿಂದ ಕೂಡಿದೆ. ಆದುದರಿಂದ ನಾವು ಈ ಯೋಜನೆಯ ವಿರುದ್ಧ ಹೋರಾಟ ಸಂಘಟಿಸಿದೆವು. ಅವಿಭಜಿತ ದ.ಕ ಜಿಲ್ಲೆಯ ಅನೇಕ ಶಾಸಕರು, ಇಲ್ಲಿನ ಲೋಕ ಸಭಾ ಸದಸ್ಯರೂ ನಮ್ಮನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸಿದರು. ದ.ಕ. ಜಿಲ್ಲಾ ಪಂಚಾಯತ್ ಮತ್ತು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಈ ಅವೈಜ್ಞಾನಿಕ ಯೋಜನೆಯ ವಿರುದ್ಧ ನಿರ್ಣಯವನ್ನೂ ತೆಗೆದುಕೊಳ್ಳಲಾಯಿತು. ಆದರೆ ಆಗಿನ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ನಮ್ಮನ್ನು ಬೆಂಬಲಿಸದ ಕಾರಣ ನಮ್ಮ ಹೋರಾಟಕ್ಕೆ ಹಿನ್ನಡೆಯಾಗಿ ಅವರು ಇಲ್ಲಿನ ಜನರಿಗೆ ಅನ್ಯಾಯ ಮಾಡಿದರು.
ಉಸ್ತುವಾರಿ ಸಚಿವರ ನೇತೃತ್ವದಲ್ಲಿಯೇ ದ.ಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಎತ್ತಿನ ಹೊಳೆ ಯೋಜನೆಯ ಅಧಿಕಾರಿಗಳ ಮತ್ತು ಎತ್ತಿನ ಹೊಳೆ ಯೋಜನೆ ವಿರುದ್ಧದ ಹೋರಾಟಗಾರರ ಒಂದು ಸಭೆ ನಡೆದಿತ್ತು. ಆ ಸಭೆಯಲ್ಲಿ ಇಲ್ಲಿನ ಜಲ ತಜ್ಞ ಪ್ರೊಫೆಸರ್ ಮಯ್ಯೊರವರು ಈ ಯೋಜನೆಯ ಕುರಿತು ಇರುವ ಸಂಶಯಗಳ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ಆದರೆ ಪ್ರೋಫೆಸರ್ ಮಯ್ಯೋರವರ ಪ್ರಶ್ನೆಗಳಿಗೆ ಎತ್ತಿನ ಹೊಳೆ ಯೋಜನೆಯ ಅಧಿಕಾರಿಗಳಿಂದ ಯಾವುದೇ ಸಮರ್ಪಕವಾದ ಉತ್ತರ ಸಿಕ್ಕಿರಲಿಲ್ಲ. ಆಗ ಮುಖ್ಯಮಂತ್ರಿ ಸಿದ್ಧರಾಮಯ್ಯರ ಜೊತೆ ಇಲ್ಲಿನ ಜನ ಪ್ರತಿನಿಧಿಗಳ ಮತ್ತು ಹೋರಾಟಗಾರರ ಸಭೆ ನಡೆಸುವುದು ಎಂದು ತೀರ್ಮಾನಿಸಲಾಯಿತು. ಅದರಂತೆ ಮುಖ್ಯಮಂತ್ರಿಯವರ ಜೊತೆ ಸಭೆಯನ್ನೂ ನಡೆಸಲಾಯಿತು. ಅಲ್ಲಿ ಆಗಿನ ಇಲ್ಲಿನ ಉಸ್ತುವಾರಿ ಸಚಿವರು ಮತ್ತು ಇಲ್ಲಿನ ಒಬ್ಬ ವಿಧಾನ ಪರಿಷತ್ ಸದಸ್ಯ ಹೋರಾಟಗಾರರನ್ನು ಅವಮಾನಿಸಿದರೇ ಹೊರತು ಯಾವುದೇ ರೀತಿಯ ಬೆಂಬಲ ನೀಡಲಿಲ್ಲ. ಹೋರಾಟ ಸಮಿತಿಯ ಅಧ್ಯಕ್ಷನಾಗಿದ್ದ ನನ್ನನ್ನು ಏಕವಚನದಲ್ಲಿ ನಿಂದಿಸಿದರು. ಕರಾವಳಿಯ ಉಪ್ಪು ತಿಂದ ಇವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲಿಕ್ಕಾಗಿ ಈ ಅವೈಜ್ಞಾನಿಕ ಯೋಜನೆಯ ಪರವಾದರು. ಇಲ್ಲಿನ ಜನರ ಮತ ಪಡೆದು ಸಚಿವರಾದ ಇವರು ಈ ಜಿಲ್ಲೆಯ ಜನರನ್ನೇ ವಂಚಿಸಿದರು. ಆದರೂ ನಾವು ಕೈ ಕಟ್ಟಿ ಕೂರಲಿಲ್ಲ, ನ್ಯಾಷನಲ್ ಗ್ರೀನ್ ಟ್ರಿಮ್ಯುನಲ್(NGT)ನಲ್ಲಿ ಕೇಸು ದಾಖಲಿಸಿ ನ್ಯಾಯದ ನಿರೀಕ್ಷೆಯಲ್ಲಿದ್ದೇನೆ.


ಎತ್ತಿನ ಹೊಳೆ ಯೋಜನೆಗೆ ಸುಮಾರು 273 MW ವಿದ್ಯುತ್ ಬೇಕಾಗುವುದಂತೆ, ಇದರ ವ್ಯವಸ್ಥೆಗೆ ಇದೀಗಾಗಲೇ ಪಶ್ಚಿಮ ಘಟ್ಟದ ಬಹಳಷ್ಟು ಮರ ಗಿಡಗಳನ್ನು ಕಡಿಯಲಾಗಿದೆ. ಇದು ನಿಯಮ ಬಾಹಿರವಾಗಿದೆ. ನ್ಯಾಷನಲ್ ಗ್ರೀನ್ ಟ್ರಿಮ್ಯುನಲ್‌ನಲ್ಲಿ ಈ ಬಗ್ಗೆ ಚರ್ಚೆಯಾಗಿ ಅವರು ಇಲ್ಲಿನ ಅಧಿಕಾರಿಗಳನ್ನು ಗದರಿಸಿದ್ದಾರೆ. ಹೋಗಿ ಆ ಮರಗಿಡಗಳನ್ನು ನೆಟ್ಟು ಬನ್ನಿ ಎಂದು ತಾಕೀತು ಮಾಡಿದ್ದಾರೆ. ಪ್ರಕೃತಿಯೊಂದಿಗೆ ಸವಾಲು ಹಾಕುವಂತಿರುವ ಈ ಯೋಜನೆಯಿಂದಲೇ ಕಳೆದ ಬಾರಿ ಮಡಿಕೇರಿ ಮತ್ತು ಇತರ ಕಡೆಗಳಲ್ಲಿ ಜಲ ಪ್ರಳಯ ಸಂಭವಿಸಿತು ಎಂದು ಅನೇಕ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಈ ಬಾರಿಯ ಮಳೆಗಾಲದ ಸಂದರ್ಭವೂ ಅಪಾಯ ತಪ್ಪಿದ್ದಲ್ಲ ಎಂದು ಅಂದಾಜಿಸಲಾಗಿದೆ.ಆದುದರಿಂದ ಎತ್ತಿನ ಹೊಳೆ ಯೋಜನೆಯನ್ನು ಕೈ ಬಿಟ್ಟು ಕೋಲಾರದ ಜನತೆಗೆ ಶಾಶ್ವತ ನೀರಿನ ಪರಿಹಾರ ಒದಗಿಸಬೇಕಾಗಿದೆ. ಪಶ್ಚಿಮ ಘಟ್ಟ ನಾಶವಾದರೆ ನಮ್ಮ ಕರಾವಳಿಯ ಜನಜೀವನ ದುಸ್ತರವಾಗಲಿದೆ.
 ಇದೀಗ ಸರಕಾರ ಇನ್ನೊಂದು ಅಸಂಬದ್ಧ ಯೋಜನೆಯನ್ನು ಕೈಗೆತ್ತಿಕೊಂಡಿದೆ. ನೀರಿನ ಸಮಸ್ಯೆಯನ್ನು ನೀಗಿಸಲು ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸುವ ಯೋಜನೆ. ಈ ಯೋಜನೆಯಲ್ಲಿ ಕೂಡಾ ಅನೇಕ ಕುಂದು ಕೊರತೆಗಳಿವೆ.ಮುಖ್ಯವಾಗಿ ಇದರಿಂದ ಉಂಟಾಗುವ ರಾಸಾಯನಿಕ ತ್ಯಾಜ್ಯಗಳನ್ನು ಎಲ್ಲಿಗೆ ಬಿಡುತ್ತಾರೆ ಎಂದು ಅಧಿಕಾರಿಗಳು ತಿಳಿಸಬೇಕು. ಈ ಯೋಜನೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮುಚ್ಚಿಡಲಾಗಿದೆ. ಈ ಯೋಜನೆಯಿಂದ ಇಲ್ಲಿನ ಪರಿಸರ ನಾಶವಾಗಲಿದೆ ಮಾತ್ರವಲ್ಲ ಇಲ್ಲಿನ ಮೀನುಗಾರರು ತುಂಬಾ ತೊಂದರೆಯನ್ನು ಅನುಭವಿಸಲಿದ್ದಾರೆ.
ಅದೇ ರೀತಿ ‘‘ಪಶ್ಚಿಮ ವಾಹಿನಿ’’ ಎಂಬ ಯೋಜನೆ ಕೂಡಾ ಕರಾವಳಿಗೆ ಮಾರಕವಾದ ಯೋಜನೆಯಾಗಿದೆ. ಯಾವುದೇ ವೈಜ್ಞಾನಿಕ ತಳಹದಿಯಿಲ್ಲದೆ ಅನೇಕ ಲೋಪದೋಷಗಳಿಂದ ಕೂಡಿದ ‘ಕಿಂಡಿ ಅಣೆಕಟ್ಟು’ಗಳನ್ನು ನಿರ್ಮಿಸುವುದರಿಂದ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುತ್ತದೆ. ಇದೆಲ್ಲವೂ ಕೂಡ ಜನರ ಕಣ್ಣಿಗೆ ಮಣ್ಣೆರಚಿ ಸರಕಾರದ ಹಣ ಕೊಳ್ಳೆ ಹೊಡೆಯುವ ಯೋಜನೆಗಳಾಗಿವೆ. ಇಂತಹ ಅಸಮರ್ಪಕ ಯೋಜನೆಗಳಿಂದಾಗಿಯೇ ಪ್ರಕೃತಿ ವಿಕೋಪ ಸಂಭವಿಸಿ ಜನ ಸಂಕಷ್ಟಕ್ಕೀಡಾಗುತ್ತಾರೆ. ಕಳೆದ ಮಳೆಗಾಲದ ಪ್ರಾರಂಭ ದಿನವೇ ಮಂಗಳೂರು ನಗರದಾದ್ಯಂತ ಕೃತಕ ನೆರೆ ಉಂಟಾಗಿ ಇಲ್ಲಿ ಜೀವ ಹಾನಿಗಳೂ ಸಂಭವಿಸಿತ್ತು. ಈ ಬಾರಿಯ ಸೆಕೆ 36 ಡಿಗ್ರಿಗೂ ಮೀರಿದೆ.
ಆದುದರಿಂದ ಯಾವುದೇ ಯೋಜನೆಗಳನ್ನು ರೂಪಿಸುವಾಗ ಅನುಭವಿ ತಜ್ಞರನ್ನು ಸೇರಿಸಿಕೊಂಡು ಭ್ರಷ್ಟಾಚಾರ ರಹಿತವಾಗಿ ರೂಪಿಸಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ನಾವೆಲ್ಲರೂ ಬಹಳ ಸಂಕಷ್ಟವನ್ನು ಎದುರಿಸಬೇಕಾದೀತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top