ಭಗವದ್ಗೀತೆ ರಾಷ್ಟ್ರಗ್ರಂಥವಲ್ಲ; ಕೇವಲ ವೈದಿಕ ಧರ್ಮಗ್ರಂಥ!

ಗೀತೆಯ ಗುಣಗಾನ ಮಾಡುವ ಹಲವು ಮಂದಿಯಲ್ಲಿ ಹಲವು ಗೊಂದಲಗಳಿವೆ. ಹಿಂದುತ್ವ ರಾಜಕೀಯವನ್ನು ಜಾರಿಗೆ ತರುತ್ತಿರುವ ಆರೆಸ್ಸೆಸ್-ಬಿಜೆಪಿ ಪ್ರಜ್ಞಾಪೂರ್ವಕವಾಗಿಯೇ ಗೀತೆಯನ್ನು ವೈಭವೀಕರಿಸುತ್ತಿದೆ. ಜಾತಿ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವುದು ಹಾಗೂ ಲಿಂಗ ಶ್ರೇಣೀಕೃತ ವ್ಯವಸ್ಥೆಯ ಮರುಸ್ಥಾಪನೆ ಅವರ ರಾಜಕೀಯ ಕಾರ್ಯಸೂಚಿ. ಗೀತೆ ಖಂಡಿತವಾಗಿಯೂ ರಾಷ್ಟ್ರೀಯ ಕೃತಿಯಲ್ಲ. ವೈದಿಕ ಪವಿತ್ರ ಧರ್ಮಗ್ರಂಥ. ಭಾರತದ ಸಂವಿಧಾನವೇ ನಮ್ಮ ರಾಷ್ಟ್ರೀಯ ಗ್ರಂಥ. ಈ ಹಿನ್ನೆಲೆಯಲ್ಲಿ ಹಿಂದುತ್ವದ ಬ್ರಾಹ್ಮಣ್ಯದ ಪರಿಕಲ್ಪನೆಯಿಂದ ದೂರ ಸರಿದ ಲಕ್ಷಾಂತರ ಮಂದಿಯ ನಂಬಿಕೆಗೆ ವಿರುದ್ಧವಾದ ತೀರ್ಪನ್ನು ನ್ಯಾಯಾಲಯ ಮರುಪರಿಶೀಲನೆ ಮಾಡುವ ಅಗತ್ಯವಿದೆ.

ಹರ್ಯಾಣ ಸರಕಾರ 100 ಕೋಟಿ ರೂಪಾಯಿ ವೆಚ್ಚದಲ್ಲಿ ಗೀತಾ ಹಬ್ಬವನ್ನು ಕುರುಕ್ಷೇತ್ರದಲ್ಲಿ ಆಯೋಜಿಸಿದೆ. ಭಗವದ್ಗೀತೆಯ ಬೋಧನೆಯನ್ನು ಪ್ರಚುರಪಡಿಸುವುದು ಇದರ ಉದ್ದೇಶ. ಶ್ರೀಕೃಷ್ಣ ಪರಮಾತ್ಮ ಪವಿತ್ರ ಧರ್ಮೋಪದೇಶ ಮಾಡಿದ ಸ್ಥಳ ಇದು ಎನ್ನುವುದು ನಂಬಿಕೆ. ಇದು ಹಿಂದುತ್ವದ ಸಾರ. ಈ ಹಬ್ಬದಲ್ಲಿ ಹರ್ಯಾಣದ ಪ್ರತಿ ಜಿಲ್ಲೆಗಳನ್ನು ಒಳಪಡಿಸುವುದು ಹಾಗೂ ಪವಿತ್ರ ಕೃತಿ ಕೇಂದ್ರಿತವಾದ ವಿಚಾರಸಂಕಿರಣಗಳು ಹಾಗೂ ಸಾಂಸ್ಕೃತಿಕ ಹಬ್ಬಗಳನ್ನು ಪದೇ ಪದೇ ಏರ್ಪಡಿಸುವುದು ಇದರ ತಿರುಳು. ಪವಿತ್ರ ಧರ್ಮಗ್ರಂಥವಾಗಿ, ಇದು ಕಳೆದ ಹಲವು ಸಮಯದಿಂದ ಸದಾ ಸುದ್ದಿಯಲ್ಲಿದೆ. ವಿಶ್ವಹಿಂದೂ ಪರಿಷತ್, ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಯೋಗಪೀಠ, ರಾಮಕೃಷ್ಣ ಮಿಷನ್ ಹಾಗೂ ಇಸ್ಕಾನ್‌ನಂಥ ಸಂಘಟನೆಗಳು ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಿವೆ.

ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇದಕ್ಕೆ ಸರಕಾರದ ನೆರವು ಸಿಕ್ಕಿದೆ. ಮೋದಿ ತಮ್ಮ ಅಸಂಖ್ಯಾತ ವಿದೇಶಿ ಪ್ರವಾಸಗಳಲ್ಲಿ ವಿದೇಶಿ ಗಣ್ಯರಿಗೆ ಗೀತೆಯನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಅವರ ವಿದೇಶಾಂಗ ಸಚಿವರು, ಭಗವದ್ಗೀತೆಯನ್ನು ರಾಷ್ಟ್ರೀಯ ಕೃತಿಯಾಗಿ ಘೋಷಿಸಬೇಕು ಎಂದೂ ಹೇಳಿಕೆ ನೀಡಿದ್ದಾರೆ. ಮಧ್ಯಪ್ರದೇಶದಂಥ ಬಿಜೆಪಿ ಆಡಳಿತದ ಹಲವು ರಾಜ್ಯಗಳು ಗೀತಾಸಾರವನ್ನು ಶಾಲೆಗಳಲ್ಲಿ ಬೋಧಿಸಲು ಆರಂಭಿಸಿವೆ ಎನ್ನುವುದನ್ನು ನೆನಪಿಸಿಕೊಳ್ಳಬಹುದು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ, ರಾಜ್ಯ ಸರಕಾರ ಭಗವದ್ಗೀತೆಯನ್ನು ಶಾಲೆಗಳಲ್ಲಿ ಬೋಧಿಸಲು ಮುಂದಾಗಿತ್ತು. ಈ ಪವಿತ್ರ ಕೃತಿಯನ್ನು ಧಾರ್ಮಿಕ ಕೃತಿಯಾಗಿ ಅಲ್ಲ; ಎಲ್ಲ ಜಾತಿ, ಧರ್ಮದ ಎಲ್ಲೆಯನ್ನು ಮೀರಿದ ಭಾರತೀಯ ತತ್ವಜ್ಞಾನ ಕೃತಿ ಎಂಬುದಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಉದಾಹರಣೆಗೆ ಮಧ್ಯಪ್ರದೇಶ ಹೈಕೋರ್ಟ್, 2012ರ ಜನವರಿಯಲ್ಲಿ ನೀಡಿದ ತೀರ್ಪಿನಲ್ಲಿ, ಭಗವದ್ಗೀತೆಯು ಭಾರತೀಯ ತತ್ವಜ್ಞಾನದ ಕೃತಿಯಾಗಬೇಕು. ಅದು ಭಾರತದ ಧಾರ್ಮಿಕ ಕೃತಿಯಲ್ಲ ಎಂದು ಸ್ಪಷ್ಟಪಡಿಸಿದೆ. ಈ ತೀರ್ಪು ಪ್ರಮುಖವಾಗಿ ಪ್ರಬಲ ರಾಜಕೀಯ ಸಿದ್ಧಾಂತದ ಪ್ರಭಾವಕ್ಕೆ ಒಳಗಾದಂತಿದೆಯೇ ವಿನಃ ಹಿಂದುತ್ವವನ್ನು ಅರ್ಥಮಾಡಿಕೊಂಡು ಅಥವಾ ಭಾರತೀಯ ಸಂವಿಧಾನದ ತತ್ವಗಳಿಗೆ ಅನುಗುಣವಾಗಿ ಅಲ್ಲ. ಅಷ್ಟೇ ಅಲ್ಲದೆ ನ್ಯಾಯಾಲಯಗಳ ರೂಢಿಗಳಿಗೂ ಈ ತೀರ್ಪು ಅನುಗುಣವಾಗಿಲ್ಲ. ನ್ಯಾಯಾಲಯಗಳಲ್ಲಿ ಹಿಂದೂಗಳ ಸಾಕ್ಷಿಗೆ ಮುನ್ನ ಭಗವದ್ಗೀತೆಯ ಹೆಸರಿನಲ್ಲಿ ಪ್ರಮಾಣ ಬೋಧಿಸಲಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಗೀತೆ ಒಟ್ಟು 700 ಶ್ಲೋಕಗಳ ಧಾರ್ಮಿಕ ಕೃತಿ. ಮಹಾಭಾರತ ಪುರಾಣದ ಒಂದು ಭಾಗ. ಇದು ಮಹಾಭಾರತದ ಭಾಗವಾಗಿರುವುದರಿಂದ ‘ಸ್ಮತಿ ಬರಹ’ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಹಿಂದೂಗಳಲ್ಲಿ ಕೆಲ ಪಂಗಡಗಳು ಇದಕ್ಕೆ ಉಪನಿಷತ್ತಿನ ಸ್ಥಾನವನ್ನು ನೀಡಿ, ಈ ಮೂಲಕ ಇದನ್ನು ಶ್ರುತಿ ಕೃತಿಯಾಗಿ ಪರಿಗಣಿಸಿವೆ. ಉಪನಿಷತ್‌ನ ಸಾರಾಂಶವನ್ನು ಇದು ಒಳಗೊಂಡಿದೆ ಎಂದೂ ಹೇಳಲಾಗುತ್ತಿದೆ. ಇದನ್ನು ಉಪನಿಷತ್ತುಗಳ ಉಪನಿಷತ್ ಎಂದೂ ಬಣ್ಣಿಸಲಾಗಿದೆ. ಈ ಪವಿತ್ರ ಕೃತಿಯಲ್ಲಿ ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಕ್ಷಾತ್ರಧರ್ಮದ ರಾಜನ ಕರ್ತವ್ಯಗಳನ್ನು ಬೋಧಿಸಿದ್ದಾನೆ. ಅರ್ಜುನ ಯುದ್ಧದ ಸಂದರ್ಭದಲ್ಲಿ ತನ್ನ ಸ್ವಂತ ಕುಟುಂಬಸ್ಥರನ್ನು ಕೊಲ್ಲುವ ದ್ವಂದ್ವಕ್ಕೆ ಸಿಲುಕಿದ ಸಂದರ್ಭದಲ್ಲಿ, ಶ್ರೀಕೃಷ್ಣ, ‘‘ಕ್ಷತ್ರಿಯನಾದವನಿಗೆ ಯುದ್ಧ ಮಾಡುವುದೇ ಪವಿತ್ರ ಕರ್ತವ್ಯ’’ ಎಂದು ಬೋಧನೆ ಮಾಡುತ್ತಾನೆ. ಬಹುತೇಕ ಎಲ್ಲ ಪವಿತ್ರ ಕೃತಿಗಳನ್ನು ದೇವರೇ ಸ್ವತಃ ಹೇಳಿರುವುದು ಎಂದು ಪರಿಗಣಿಸುವಂತೆ ಭಗವದ್ಗೀತೆಯನ್ನು ಕೂಡಾ ಪರಮಾತ್ಮನಾದ ಶ್ರೀಕೃಷ್ಣ ಬೋಧಿಸಿದ್ದಾನೆ. ಇದರಲ್ಲಿ ದೇವರು ತನ್ನನ್ನೇ ಸ್ವಯಂ ಭಗವಾನ್ ಎಂದು ಬಣ್ಣಿಸಿಕೊಂಡಿದ್ದಾನೆ. ಈ ಕೃತಿಯನ್ನು ಹಿಂದೂ ತತ್ವಜ್ಞಾನದ ತಿರುಳು ಎಂದು ಪರಿಗಣಿಸಲಾಗಿದೆ.

ಗೀತೆಯು ಹಿಂದೂ ಧರ್ಮಸಿದ್ಧಾಂತದ ತಿರುಳಾದ ವರ್ಣಾಶ್ರಮದ ಮೂಲವನ್ನು ವಿವರಿಸುತ್ತದೆ. ವೇದಗಳ ಪುರುಷ ಸೂಕ್ತದಲ್ಲಿ, ಬ್ರಹ್ಮದೇವ ಹೇಗೆ ವಿರಾಟಪುರುಷನ ದೇಹದಿಂದ ನಾಲ್ಕು ವರ್ಣಗಳನ್ನು ಸೃಷ್ಟಿಸಿದ ಎನ್ನುವ ವಿವರಣೆ ಇದೆ. ಇದೇ ಬಗೆಯಲ್ಲಿ ಗೀತೆೆಯಲ್ಲಿ ಶ್ರೀಕೃಷ್ಣನು, ವರ್ಣಗಳ ಪವಿತ್ರ ಮೂಲವನ್ನು ವಿವರಿಸಿದ್ದಾನೆ. ಭಗವಾನ್ ಹೇಳುವಂತೆ, ನಾಲ್ಕು ಹಂತದ ವ್ಯವಸ್ಥೆಯನ್ನು ಕರ್ಮಗುಣಗಳ ಆಧಾರದಲ್ಲಿ ವಿಭಜಿಸಲಾಗಿದೆ.

ಪ್ರವಾದಿಗಳಿಂದ ಉದಯವಾದ ಬೌದ್ಧ, ಜೈನ, ಕ್ರೈಸ್ತ ಅಥವಾ ಇಸ್ಲಾಂನಂತೆ ಹಿಂದೂ ಧರ್ಮ ಉಗಮವಾದದ್ದಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ದೀರ್ಘವಾದ ಕಾಲಘಟ್ಟದಲ್ಲಿ ಕಾಲಕ್ರಮೇಣ ನಿಧಾನವಾಗಿ ಇದು ರೂಪುಗೊಂಡದ್ದು. ಆದರೆ ಇಂದು ಹಿಂದುತ್ವ ಎನ್ನುವುದು ಒಂದು ಧರ್ಮ. ಗೀತೆ ಇದರ ಪವಿತ್ರ ಗ್ರಂಥ. ಇದು ಭಾರತೀಯ ತತ್ವಜ್ಞಾನವೇ ವಿನಃ ಧಾರ್ಮಿಕವಾದದ್ದಲ್ಲ ಎನ್ನುವ ನಿಲುವು ಸತ್ಯಕ್ಕೆ ದೂರ. ವಾಸ್ತವವಾಗಿ ಧಾರ್ಮಿಕ ಎನಿಸಿದ ಹಲವು ಧಾರ್ಮಿಕ ಗ್ರಂಥಗಳಲ್ಲೂ ತತ್ವಜ್ಞಾನದ ಅಂಶಗಳು ಇವೆ. ಆರ್ಯನ್ನರಿಂದ ಹಿಡಿದು ಇಂದಿನ ಹಿಂದೂ ಆಚರಣೆಯವರೆಗೂ, ಸುದೀರ್ಘ ದಾರಿಯನ್ನು ಇದು ಕ್ರಮಿಸಿದೆ. ಕೋಮುವಾದಿ ಶಕ್ತಿಗಳು ಇದನ್ನು ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಹೇರುವ ಸಲುವಾಗಿ ಇದನ್ನು ಶಾಲೆಗಳಲ್ಲಿ ಬೋಧಿಸಲು ಮುಂದಾಗಿರುವುದು ಮಾತ್ರವಲ್ಲದೆ, ಈ ಕೃತಿಯ ಮೂಲಕ, ಹಿಂದುತ್ವದ ಬ್ರಾಹ್ಮಣ್ಯ ಅವತರಣಿಕೆಯ ಸಾರ ಎನಿಸಿದ ಚಾತುರ್ವರ್ಣ್ಯದ ಪರಿಕಲ್ಪನೆಯನ್ನು ಸಮಾಜದ ಮೇಲೆ ಹೇರುವ ಹುನ್ನಾರವೂ ಇದಾಗಿದೆ. ಭಗವದ್ಗೀತೆಯು ನಾಲ್ಕು ವರ್ಣಗಳನ್ನು ದೇವರ ಸ್ವಂತ ಸೃಷ್ಟಿ ಎಂದು ಪ್ರತಿಪಾದಿಸುತ್ತದೆ. ಈ ಕೃತಿಯಲ್ಲಿ ತತ್ವಜ್ಞಾನಕ್ಕೆ ಸಂಬಂಧಿಸಿದ ಹಲವು ಸೂತ್ರಗಳಿದ್ದರೂ, ಹಿಂದುತ್ವ ರಾಜಕೀಯ ಇಂದು ಜಾರಿಗೆ ತರಲು ಉದ್ದೇಶಿಸಿರುವ ವರ್ಣ- ಜಾತಿಯ ಪರಿಕಲ್ಪನೆಯನ್ನು ಸುಧಾರಿತ ಪ್ಯಾಕೇಜಿಂಗ್ ಮೂಲಕ ಜಾರಿಗೊಳಿಸುವ ಉದ್ದೇಶಕ್ಕೆ ಪ್ರಬಲ ಸಮರ್ಥನೆಯೂ ಇದೆ.

ಗೀತೆಯಲ್ಲಿ ಬಣ್ಣಿಸಿರುವ ಧರ್ಮವು ಸಹಜವಾಗಿಯೇ ವರ್ಣಾಶ್ರಮ ಧರ್ಮ. ಇದು ಸಮಾಜದ ಶ್ರೇಣೀಕೃತ ವರ್ಗೀಕರಣವನ್ನು ಪ್ರತಿಪಾದಿಸುತ್ತದೆ. ಇದು ಭಾರತದ ಸಂವಿಧಾನದ ಆಶಯವಾದ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಮೌಲ್ಯಗಳಿಗೆ ವಿರುದ್ಧವಾದದ್ದು. ಗೀತೆಯ ವರ್ಣಾಶ್ರಮ ಧರ್ಮವು ಸಮಾನತೆಯ ತತ್ವವನ್ನು ಉಲ್ಲಂಘಿಸುವಂಥದ್ದು. ಸಮಾನತೆಯ ನಿಯಮವನ್ನು ಉಲ್ಲಂಘಿಸುವುದನ್ನು ಇದು ಎತ್ತಿತೋರಿಸುತ್ತದೆ. ಖಂಡಿತವಾಗಿಯೂ ಗೀತೆಯು ಹಿಂದೂಗಳ ಪವಿತ್ರ ಗ್ರಂಥ. ನಮ್ಮದು ಜಾತ್ಯತೀತ ದೇಶ; ಇದರಲ್ಲಿ ಎಲ್ಲ ಧರ್ಮದ ಪ್ರಜೆಗಳೂ ಸಮಾನರು. ಆದ್ದರಿಂದ ಗೀತೆಯ ಹೆಸರಿನಲ್ಲಿ ಸರಕಾರಿ ಪ್ರಾಯೋಜಿತ ಹಬ್ಬವನ್ನು ಆಯೋಜಿಸುವ ಮೂಲಕ ಜಾತ್ಯತೀತ ತತ್ವವನ್ನು ಸರಕಾರ ಖಂಡಿತವಾಗಿಯೂ ಉಲ್ಲಂಘಿಸುತ್ತಿದೆ. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭಗವದ್ಗೀತೆಯ ಬಗ್ಗೆ ಕುತೂಹಲಕಾರಿ ನಿಲುವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಹಿಂದುತ್ವದ ಸಿದ್ಧಾಂತ (ಕ್ರಿಟಿಕಲ್ ಕ್ವೆಸ್ಟ್, 2010) ಎಂಬ ಕೃತಿಯಲ್ಲಿ, ಭಗವದ್ಗೀತೆ ಎನ್ನುವುದು ಮನುಸ್ಮತಿಯ ಸಾರರೂಪ ಎಂದು ಪ್ರತಿಪಾದಿಸಿದ್ದಾರೆ. ಮನುಸ್ಮತಿಯನ್ನು ಸುಟ್ಟುಹಾಕುವುದನ್ನು ಅವರು ಬೆಂಬಲಿಸಿದ್ದು, ಬಾಹ್ಮಣ್ಯದ ಹಿಂದುತ್ವ ಪ್ರತಿಪಾದಿಸುವ ಶ್ರೇಣೀಕೃತ ವ್ಯವಸ್ಥೆಯನ್ನು ಸುಟ್ಟುಹಾಕುವ ಸಂಕೇತ. ಕಳೆದ ಎರಡು ಶತಮಾನಗಳಿಂದ ಹಿಂದುತ್ವ ಎನ್ನುವುದು ಬ್ರಾಹ್ಮಣ್ಯದ ಹಿಂದುತ್ವವಾಗಿದೆ ಎಂದೂ ಅವರು ಬಣ್ಣಿಸಿದ್ದಾರೆ. ನಾಥಪಂಥ, ತಂತ್ರ, ಸಿದ್ಧ, ಶೈವ ಹಾಗೂ ಭಕ್ತಿಪಂಥದ ತತ್ವಗಳಿಗೆ ವಿರುದ್ಧವಾಗಿ ಗೀತೆಯು ಬಾಹ್ಮಣ್ಯದ ಹಿಂದುತ್ವವನ್ನು ಪ್ರತಿಪಾದಿಸುವ ಕೃತಿ. ಈ ಸಂಪ್ರದಾಯಗಳು ಬ್ರಾಹ್ಮಣ್ಯದ ಶ್ರೇಣೀಕೃತ ಮೌಲ್ಯಗಳಿಂದ ದೂರ ಸರಿದಿವೆ. ಆರೆಸ್ಸೆಸ್- ಹಿಂದುತ್ವವು ಬ್ರಾಹ್ಮಣ್ಯದ ಮೌಲ್ಯಗಳನ್ನು ತಮ್ಮ ರಾಜಕೀಯದ ಮೂಲವಾಗಿ ಮಾಡಿಕೊಂಡಿದೆ.

ಆದ್ದರಿಂದ ಗೀತೆಯ ಗುಣಗಾನ ಮಾಡುವ ಹಲವು ಮಂದಿಯಲ್ಲಿ ಹಲವು ಗೊಂದಲಗಳಿವೆ. ಹಿಂದುತ್ವ ರಾಜಕೀಯವನ್ನು ಜಾರಿಗೆ ತರುತ್ತಿರುವ ಆರೆಸ್ಸೆಸ್-ಬಿಜೆಪಿ ಪ್ರಜ್ಞಾಪೂರ್ವಕವಾಗಿಯೇ ಗೀತೆಯನ್ನು ವೈಭವೀಕರಿಸುತ್ತಿದೆ. ಜಾತಿ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವುದು ಹಾಗೂ ಲಿಂಗ ಶ್ರೇಣೀಕೃತ ವ್ಯವಸ್ಥೆಯ ಮರುಸ್ಥಾಪನೆ ಅವರ ರಾಜಕೀಯ ಕಾರ್ಯಸೂಚಿ. ಗೀತೆ ಖಂಡಿತವಾಗಿಯೂ ರಾಷ್ಟ್ರೀಯ ಕೃತಿಯದಲ್ಲ. ಪವಿತ್ರ ವೈದಿಕ ಧರ್ಮಗ್ರಂಥ. ಭಾರತದ ಸಂವಿಧಾನವೇ ನಮ್ಮ ರಾಷ್ಟ್ರೀಯ ಗ್ರಂಥ. ಈ ಹಿನ್ನೆಲೆಯಲ್ಲಿ ಹಿಂದುತ್ವದ ಬ್ರಾಹ್ಮಣ್ಯದ ಪರಿಕಲ್ಪನೆಯಿಂದ ದೂರ ಸರಿದ ಲಕ್ಷಾಂತರ ಮಂದಿಯ ನಂಬಿಕೆಗೆ ವಿರುದ್ಧವಾದ ತೀರ್ಪನ್ನು ನ್ಯಾಯಾಲಯ ಮರುಪರಿಶೀಲನೆ ಮಾಡುವ ಅಗತ್ಯವಿದೆ.

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top