ನಿರ್ಜಲೀಕರಣವನ್ನು ಸೂಚಿಸುವ ಈ ಲಕ್ಷಣಗಳು ನಿಮಗೆ ಗೊತ್ತಿರಲಿ | Vartha Bharati- ವಾರ್ತಾ ಭಾರತಿ

---

ನಿರ್ಜಲೀಕರಣವನ್ನು ಸೂಚಿಸುವ ಈ ಲಕ್ಷಣಗಳು ನಿಮಗೆ ಗೊತ್ತಿರಲಿ

ಮಾನವನ ಶರೀರದ ಶೇ.60ರಷ್ಟು ಭಾಗವು ನೀರನ್ನೊಳಗೊಂಡಿರುತ್ತದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಶರೀರ ಮತ್ತು ಮನಸ್ಸು ಆರೋಗ್ಯಯುತವಾಗಿರಲು ಸಾಕಷ್ಟು ನೀರನ್ನು ಕುಡಿಯುತ್ತಿರಬೇಕು, ಶರೀರದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಶರೀರದಲ್ಲಿ ಕೇವಲ ಶೇ.1.5ರಷ್ಟು ನೀರು ಕಡಿಮೆಯಾದರೂ ನೀವು ನಿರ್ಜಲೀಕರಣಕ್ಕೆ ತುತ್ತಾಗುತ್ತೀರಿ. ನಿರ್ಜಲೀಕರಣವುಂಟಾದಾಗ ಹೆಚ್ಚು ಬಾಯಾರಿಕೆ ಆಗುವುದಷ್ಟೇ ಅಲ್ಲ, ಸಾಕಷ್ಟು ದ್ರವಗಳನ್ನು ಸೇವಿಸುವಂತೆ ಶರೀರವು ನಿಮಗೆ ಇತರ ಹಲವಾರು ಸಂಕೇತಗಳನ್ನೂ ನೀಡುತ್ತಲೇ ಇರುತ್ತದೆ. ಇಂತಹ ಕೆಲವು ಸಂಕೇತಗಳು ಅಥವಾ ಲಕ್ಷಣಗಳ ಕುರಿತು ಮಾಹಿತಿಗಳಿಲ್ಲಿವೆ....

►ಸಕ್ಕರೆ ತಿನ್ನಬೇಕೆಂಬ ತುಡಿತ

ಎಂದಾದರೂ ಬಹಳಷ್ಟು ಸಕ್ಕರೆ ತಿನ್ನಬೇಕೆಂಬ ತುಡಿತವುಂಟಾದಾಗ ಹೀಗೇಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಶರೀರದಲ್ಲಿ ನಿರ್ಜಲೀಕರಣ ಕಾರಣವಾಗಿರಬಹುದು. ನಿರ್ಜಲೀಕರಣವು ಹಸಿವೆಯನ್ನು,ವಿಶೇಷವಾಗಿ ಸಕ್ಕರೆಯನ್ನು ತಿನ್ನುತ್ತಲೇ ಇರಬೇಕೆಂಬ ತುಡಿತವನ್ನುಂಟು ಮಾಡುತ್ತದೆ. ನಿರ್ಜಲೀಕರಣಗೊಂಡಾಗ ಶರೀರವು ದಾಸ್ತಾನಿರುವ ಗ್ಲುಕೋಸ್‌ನ್ನು ತ್ವರಿತ ಗತಿಯಲ್ಲಿ ಬಳಸಿಕೊಳ್ಳುತ್ತದೆ ಮತ್ತು ಹಸಿವೆ ಹಾಗೂ ಶಕ್ತಿಗುಂದಿದ ಅನುಭವವಾಗುತ್ತದೆ. ಸಕ್ಕರೆ ತಿನ್ನಬೇಕೆಂಬ ತುಡಿತವುಂಟಾದಾಗ ತಕ್ಷಣ ಒಂದು ಗ್ಲಾಸ್ ನೀರನ್ನು ಕುಡಿಯಬೇಕು ಮತ್ತು ಕೆಲವು ನಿಮಿಷಗಳ ಬಳಿಕ ಅಂತಹ ತುಡಿತ ಮಾಯವಾಗುತ್ತದೆ.

►ಒಣ ಮತ್ತು ಪೊರೆಗಳಿಂದ ಕೂಡಿದ ಚರ್ಮ

ಶರೀರದಲ್ಲಿ ನೀರಿನ ಕೊರತೆಯು ಚರ್ಮದ ತೇವಾಂಶದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ನೀರಿನಂಶ ಕಡಿಮೆಯಾಗಿರುವ ಚರ್ಮವು ಬಿಗಿಯಾಗಿರುವ ಅನುಭವವನ್ನು ನೀಡುತ್ತದೆ ಮತ್ತು ತುಂಬ ಪೇಲವ ಹಾಗೂ ನಿರ್ಜೀವವಾಗಿರುತ್ತದೆ. ಚರ್ಮದ ಆರೋಗ್ಯವು ಉತ್ತಮವಾಗಿರಬೇಕೆಂದರೆ ಯಥೇಚ್ಛ ನೀರನ್ನು ಕುಡಿಯಬೇಕು ಮತ್ತು ತಣ್ಣೀರಿನ ಸ್ನಾನವನ್ನು ಮಾಡಬೇಕು. ಬಿಸಿನೀರಿನ ಶವರ್‌ನ ಕೆಳಗೆ ಸ್ನಾನಮಾಡುವುದರಿಂದ ಚರ್ಮವು ತನ್ನೆಲ್ಲ ತೇವಾಂಶವನ್ನು ಕಳೆದುಕೊಳ್ಳುತ್ತದೆ.

►ಸಿಡುಕುತನ

ನಿಮ್ಮಲ್ಲಿ ಸಿಡುಕುತನ ಉಂಟಾಗಿ ಪ್ರತಿಯೊಂದು ವಿಷಯದ ಬಗ್ಗೆಯೂ ರೇಗಾಡುತ್ತಿದ್ದೀರಾ? ಹಾಗಿದ್ದರೆ ನೀವು ನಿರ್ಜಲೀಕರಣದ ಸಮಸ್ಯೆಗೆ ಗುರಿಯಾಗಿದ್ದೀರಿ ಎಂದೇ ಅರ್ಥ. ಶರೀರದಲ್ಲಿ ನೀರಿನ ಕೊರತೆಯು ಹಲವಾರು ನರಶಾಸ್ತ್ರೀಯ ತೊಂದರೆಗಳಿಗೆ ಕಾರಣವಾಗುತ್ತದೆ ಮತ್ತು ಕೆರಳುವಿಕೆ ಇದರಲ್ಲಿ ಒಂದಾಗಿದೆ. ಒಳ್ಳೆಯ ಮೂಡ್‌ಗಾಗಿ ಸಾಕಷ್ಟು ನೀರನ್ನು ಕುಡಿಯುತ್ತಿರಿ ಮತ್ತು ಅದು ನಿಮ್ಮ ಚರ್ಮ ಹಾಗೂ ಒಟ್ಟಾರೆ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ನೋಡಿ.

►ಸ್ನಾಯುಗಳಲ್ಲಿ ಸೆಳೆತ

ಶರೀರದಲ್ಲಿ ರಕ್ತ ಪರಿಚಲನೆ ನಿಧಾನಗೊಳ್ಳಲು ನಿರ್ಜಲೀಕರಣವು ಒಂದು ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಸ್ನಾಯುಗಳಲ್ಲಿ ಬಿಗಿತ ಮತ್ತು ಸೆಳೆತ ಉಂಟಾಗುತ್ತವೆ. ಕಠಿಣ ವ್ಯಾಯಾಮ ಮಾಡುವವರು ಈ ಸ್ಥಿತಿಯಿಂದ ಪಾರಾಗಲು ಯಥೇಚ್ಛ ನೀರನ್ನು ಕುಡಿಯುತ್ತಿರಬೇಕು. ಶರೀರದಲ್ಲಿ ನೀರಿನ ಕೊರತೆಯು ಪೊಟ್ಯಾಷಿಯಂ ಮತ್ತು ಸೋಡಿಯಂ ಮಟ್ಟಗಳಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ವ್ಯಾಯಾಮ ಮಾಡುವವರು ಬೆವರುವಿಕೆ ಮೂಲಕ ಹೆಚ್ಚಿನ ನೀರನ್ನು ಕಳೆದುಕೊಳ್ಳುತ್ತಾರೆ. ನೀರು ಹಸಿವು ಮತ್ತು ಸಕ್ಕರೆ ಸೇವಿಸಬೇಕೆಂಬ ತುಡಿತ,ಇವೆರಡನ್ನೂ ದೂರವಿರಿಸುವುದರಿಂದ ದೇಹತೂಕವನ್ನು ತಗ್ಗಿಸಿಕೊಳ್ಳಲು ಬಯಸುವವರು ಸಾಕಷ್ಟು ನೀರನ್ನು ಸೇವಿಸುತ್ತಿರಬೇಕು.

►ಮಾನಸಿಕ ಗೊಂದಲ

ನಿಮಗೆ ಆಗಾಗ್ಗೆ ಮಾನಸಿಕ ಗೊಂದಲ ಕಾಡುತ್ತದೆಯೇ? ಅದು ಶರೀರದಲ್ಲಿ ನಿರ್ಜಲೀಕರಣದ ಸ್ಪಷ್ಟ ಸಂಕೇತವಾಗಿರಬಹುದು. ನಿರ್ಜಲೀಕರಣವು ಮನಸ್ಸಿಗೆ ಮಂಕು ಕವಿದಂತೆ ಮಾಡುತ್ತದೆ ಮತ್ತು ಗೊಂದಲಕ್ಕೆ ಗುರಿ ಮಾಡುತ್ತದೆ.

►ಮಲಬದ್ಧತೆ

ನಿರ್ಜಲೀಕರಣವುಂಟಾದಾಗ ಮಲವು ಗಟ್ಟಿಯಾಗುತ್ತದೆ. ಶರೀರಕ್ಕೆ ಸಾಕಷ್ಟು ನೀರು ದೊರೆಯದಿದ್ದಾಗ ಅದು ತನ್ನಲ್ಲಿ ಸಂಗ್ರಹವಾಗಿರುವ ದ್ರವಗಳನ್ನು ಬಳಸಲು ಆರಂಭಿಸುತ್ತದೆ ಮತ್ತು ಇದು ಮಲವು ಗಟ್ಟಿಯಾಗಲು ಕಾರಣವಾಗುತ್ತದೆ. ಇದರಿಂದಾಗಿ ಮಲಬದ್ಧತೆಯ ಸಮಸ್ಯೆಯುಂಟಾಗುತ್ತದೆ. ಯಥೇಚ್ಛ ನೀರನ್ನು ಸೇವಿಸುವುದರಿಂದ ಜೀರ್ಣ ಸಂಬಂಧಿ ತೊಂದರೆಗಳು ನಿವಾರಣೆಯಾಗುತ್ತವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top