ರೊಹಿಂಗ್ಯನ್ನರಿದ್ದ ದೋಣಿ ಮುಳುಗಿ ನಾಲ್ವರು ಮೃತ್ಯು
ಢಾಕಾ, ಅ. 31: ಮ್ಯಾನ್ಮಾರ್ನಿಂದ ಪಲಾಯನಗೈಯುತ್ತಿದ್ದ ಸುಮಾರು 45 ರೊಹಿಂಗ್ಯಾ ಮುಸ್ಲಿಮರನ್ನು ಒಯ್ಯುತ್ತಿದ್ದ ದೋಣಿಯೊಂದು ಬಂಗಾಳ ಕೊಲ್ಲಿಯಲ್ಲಿ ಮುಳುಗಿದ್ದು, ನಾಲ್ಕು ದೇಹಗಳನ್ನು ಪತ್ತೆಹಚ್ಚಲಾಗಿದೆ ಎಂದು ಬಾಂಗ್ಲಾದೇಶದ ಅಧಿಕಾರಿಯೊಬ್ಬರು ತಿಳಿಸಿದರು.
ಸುಮಾರು 23 ಮಂದಿಯನ್ನು ರಕ್ಷಿಸಲಾಗಿದೆ ಹಾಗೂ ಸುಮಾರು 12 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಸರಕಾರದ ಮುಖ್ಯಸ್ಥ ಮುಹಮ್ಮದ್ ಮಿಕರುಝಮನ್ ತಿಳಿಸಿದರು.
ದೋಣಿ ಮಂಗಳವಾರ ಬೆಳಗ್ಗೆ ಕಾಕ್ಸ್ ಬಝಾರ್ ಜಿಲ್ಲೆಯ ಇನಾನಿ ಬೀಚ್ ಸಮೀಪ ಮುಳುಗಿತು.
ಆಗಸ್ಟ್ 25ರ ಬಳಿಕ ಸುಮಾರು 6 ಲಕ್ಷ ರೊಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್ನಲ್ಲಿ ಸೇನೆಯ ದೌರ್ಜನ್ಯಕ್ಕೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಸುಮಾರು 190 ಮಂದಿ ಪಲಾಯನಗೈಯುತ್ತಿದ್ದ ವೇಳೆ ದೋಣಿ ಮಗುಚಿ ಸಮುದ್ರ ಅಥವಾ ನದಿಯಲ್ಲಿ ಮುಳುಗಿದ್ದಾರೆ.
Next Story