ನ.3ರಂದು ನ್ಯಾಯಾಲಯಕ್ಕೆ ಹಾಜರಾಗಲಿರುವ ಶರೀಫ್
ಇಸ್ಲಾಮಾಬಾದ್, ನ. 2: ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ವಿಚಾರಣೆ ಎದುರಿಸಲು ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಝ್ ಶರೀಫ್ ಗುರುವಾರ ದೇಶಕ್ಕೆ ಮರಳಿದ್ದಾರೆ.
ಶರೀಫ್ ಕುಟುಂಬ ಲಂಡನ್ನಲ್ಲಿ ಹೊಂದಿರುವ ಆಸ್ತಿಗೆ ಸಂಬಂಧಿಸಿದ ಮೊಕದ್ದಮೆಯ ವಿಚಾರಣೆ ಇಲ್ಲಿನ ನ್ಯಾಯಾಲಯವೊಂದರಲ್ಲಿ ನ.3ರಂದು ನಡೆಯಲಿದ್ದು, ಅವರು ಹಾಜರಾಗಬೇಕಾಗಿದೆ.
ಗೊತ್ತಿರುವ ಆದಾಯ ಮೂಲವನ್ನು ಮೀರಿ ಸಂಪತ್ತು ಹೊಂದಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಶರೀಫ್ರನ್ನು ಜುಲೈಯಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿತ್ತು.
ಲಂಡನ್ನಲ್ಲಿರುವ ಆಸ್ತಿ ಸೇರಿದಂತೆ ಶರೀಫ್ ಕುಟುಂಬದ ಹಣಕಾಸಿನ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ಕೂಡ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೊ (ಎನ್ಎಬಿ)ಗೆ ಆದೇಶ ನೀಡಿರುವುದನ್ನು ಸ್ಮರಿಸಬಹುದಾಗಿದೆ.
Next Story