ವಿಯೆಟ್ನಾಂ ಚಂಡಮಾರುತ: ಮೃತರ ಸಂಖ್ಯೆ 69ಕ್ಕೆ
ಡನಂಗ್ (ವಿಯೆಟ್ನಾಂ), ನ. 7: ವಿಯೆಟ್ನಾಂನ ದಕ್ಷಿಣ-ಮಧ್ಯ ಕರಾವಳಿಯಲ್ಲಿ ಇತ್ತೀಚೆಗೆ ಬೀಸಿದ ಚಂಡಮಾರುತದಿಂದಾಗಿ ಮೃತಪಟ್ಟವರ ಸಂಖ್ಯೆ 69ಕ್ಕೇರಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ವಿಯೆಟ್ನಾಂಗೆ ಚಂಡಮಾರುತ ‘ಡಾಮ್ರೆ’ ಅಪ್ಪಳಿಸಿತ್ತು. ಅದರ ಪರಿಣಾಮವಾಗಿ ಬಿರುಗಾಳಿಯಿಂದ ಕೂಡಿದ ಭಾರೀ ಮಳೆಯಾಗಿತ್ತು ಹಾಗೂ ಪ್ರವಾಹ ಏರ್ಪಟ್ಟಿತ್ತು.
ಮುಂದಿನ ವಾರಾಂತ್ಯದಲ್ಲಿ ವಿಯೆಟ್ನಾಂ ಏಶ್ಯ-ಪೆಸಿಫಿಕ್ ಆರ್ಥಿಕ ಸಹಕಾರ (ಎಪಿಇಸಿ)ದ ಆತಿಥ್ಯ ವಹಿಸಲಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಇತರ ವಿಶ್ವ ನಾಯಕರು ಭಾಗವಹಿಸಲಿದ್ದಾರೆ.
Next Story