ಜಿಂಬಾಬ್ವೆ ಅಧ್ಯಕ್ಷರಾಗಿ ಮನಂಗಾಗ್ವ ಶುಕ್ರವಾರ ಪ್ರಮಾಣ
ಹರಾರೆ, ನ. 22: ಜಿಂಬಾಬ್ವೆಯ ಪದಚ್ಯುತ ಉಪಾಧ್ಯಕ್ಷ ಎಮರ್ಸನ್ ಮನಂಗಾಗ್ವ ದೇಶದ ಅಧ್ಯಕ್ಷರಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸರಕಾರಿ ವೆಬ್ಸೈಟ್ ಝಡ್ಬಿಸಿ ಬುಧವಾರ ವರದಿ ಮಾಡಿದೆ.
93 ವರ್ಷದ ಅಧ್ಯಕ್ಷ ರಾಬರ್ಟ್ ಮುಗಾಬೆ ರಾಜೀನಾಮೆ ನೀಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಸರಕಾರ ಮತ್ತು ಪಕ್ಷದಿಂದ ವಜಾಗೊಂಡ ಬಳಿಕ ಮಾಜಿ ಉಪಾಧ್ಯಕ್ಷರು ವಿದೇಶಕ್ಕೆ ಹೋಗಿದ್ದರು.
Next Story