ಫಿಲಿಪ್ಪೀನ್ಸ್ನಲ್ಲಿ ಭೂಕುಸಿತ: 26 ಮಂದಿ ಬಲಿ
ಮನಿಲಾ,ಡಿ.17: ಮಧ್ಯಫಿಲಿಪ್ಪೀನ್ಸ್ನ ಬಿಲಿರಾನ್ ದ್ವೀಪದಲ್ಲಿ ರವಿವಾರ ಅಪ್ಪಳಿಸಿದ ಉಷ್ಣವಲಯದ ಚಂಡಮಾರುತ ಕಾಯ್ತಾಕ್ನ ಪ್ರಕೋಪದಿಂದಾಗಿ ಉಂಟಾದ ಭೀಕರ ಭೂಕುಸಿತಕ್ಕೆ 26 ಮಂದಿ ಬಲಿಯಾಗಿದ್ದಾರೆ.
ಬಿಲಿರಾನ್ ದ್ವೀಪದ ನಾಲ್ಕು ಪಟ್ಟಣಗಳು ಚಂಡಮಾರುತ ಹಾವಳಿಯಿಂದ ತತ್ತರಿಸಿದ್ದು, ಮಣ್ಣಿನ ರಾಶಿಗಳಲ್ಲಿ ಹೂತುಹೋಗಿದ್ದ 26 ಮಂದಿಯ ಶವಗಳನ್ನು ಈತನಕ ಹೊರತೆಗೆಯಲಾಗಿದೆ ಎಂದು ಸೊಫ್ರೊನಿಯೊ ಡಾಸಿಲಿಯೊ ತಿಳಿಸಿದ್ದಾರೆ.ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷಗಳ ನಡುವೆ ಇನ್ನೂ ಹಲವಾರು ಸಿಲುಕಿಕೊಂಡಿರುವ ಸಾಧ್ಯತೆಯಿದೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
Next Story