ಮಾಸ್ಕೊ: ಅಂಡರ್ಪಾಸ್ಗೆ ನುಗ್ಗಿದ ಬಸ್; 5 ಸಾವು
ಮಾಸ್ಕೊ, ಡಿ. 25: ಪಶ್ಚಿಮ ಮಾಸ್ಕೊದಲ್ಲಿ ಸೋಮವಾರ ಪಾದಚಾರಿ ಅಂಡರ್ಪಾಸ್ನೊಳಗೆ ಬಸ್ಸೊಂದು ನುಗ್ಗಿದ್ದು, ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ತಾಂತ್ರಿಕ ಸಮಸ್ಯೆ ಸೇರಿದಂತೆ ಈ ಘಟನೆಯ ಸಂಭಾವ್ಯ ಕಾರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
‘‘ಬಸ್ ಚಾಲಕ ಬಸ್ಸನ್ನು ಚಲಾಯಿಸಲು ಆರಂಭಿಸುತ್ತಿದ್ದಂತೆಯೇ ಅದು ತನ್ನ ದಿಕ್ಕನ್ನು ಬದಲಿಸಿತು ಹಾಗೂ ಪಾದಚಾರಿ ಅಂಡರ್ಪಾಸ್ಗೆ ನುಗ್ಗಿತು’’ ಎಂದು ಪೊಲೀಸರ ಹೇಳಿಕೆಯೊಂದು ತಿಳಿಸಿದೆ.
ಚಾಲಕನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.
Next Story