ಹೊಸ ವರ್ಷಾಚರಣೆ ವೇಳೆ ಗುಂಡು ಹಾರಾಟ:ಹಲವರಿಗೆ ಗಾಯ
ಕರಾಚಿ,ಜ.1: ಹೊಸ ವರ್ಷ ಸಂಭ್ರಮಾಚರಣೆಗಾಗಿ ಕೆಲವರು ಗಾಳಿಯಲ್ಲಿ ಹಾರಿಸಿದ ಗುಂಡುಗಳು, ಆಕಸ್ಮಿಕವಾಗಿ ತಗಲಿ ಮಹಿಳೆ ಸೇರಿದಂತೆ ಹಲವಾರು ಗಾಯಗೊಂಡ ಘಟನೆ ಪಾಕಿಸ್ತಾನದ ಕರಾಚಿ ನಗರದಲ್ಲಿ ರವಿವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದು, ಅವರನ್ನು ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಕೇಂದ್ರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆಯೆಂದು ಆಸ್ಪತ್ರೆಯ ಕಾರ್ಯಕಾರಿ ನಿರ್ದೇಶಕ ಸಿಮಿನ್ ಜಮಾಲಿ ತಿಳಿಸಿದ್ದಾರೆ.
Next Story