ಸೌದಿಯಾದ್ಯಂತ ಮರಳು ಬಿರುಗಾಳಿ: ಶಾಲೆ, ವಿಶ್ವವಿದ್ಯಾಲಯಗಳಿಗೆ ರಜೆ
ರಿಯಾದ್, ಎ. 1: ಸೌದಿ ಅರೇಬಿಯದಾದ್ಯಂತ ಮರಳು ಬಿರುಗಾಳಿ ಬೀಸಲಿದ್ದು, ಕಡಿಮೆ ದೃಗ್ಗೋಚರತೆ ಎದುರಾಗಲಿದೆ ಎಂದು ನಜ್ರಾನ್ನ ನಾಗರಿಕ ರಕ್ಷಣಾ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ರಸ್ತೆ ಮೂಲಕ ಪ್ರಯಾಣಿಸುವ ಜನರು ಎಚ್ಚರಿಕೆಯಿಂದ ಇರಬೇಕು ಎಂಬುದಾಗಿಯೂ ಅದು ಸೂಚಿಸಿದೆ.
ದಟ್ಟ ಮೋಡಗಳು ಮತ್ತು ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಅದು ಎಚ್ಚರಿಸಿದೆ.
ಜಝನ್, ಅಸಿರ್, ಅಲ್-ಬಹ, ಮಕ್ಕಾ, ಮದೀನಾ, ಅಲ್-ಕಾಸಿಮ್, ಹೈಲ್, ರಿಯಾದ್, ಈಸ್ಟರ್ನ್ ಪ್ರಾವಿನ್ಸ್ ಮತ್ತು ನಜ್ರನ್ಗಳಲ್ಲಿ ದೃಗ್ಗೋಚರತೆ ಕಡಿಮೆ ಇರುತ್ತದೆ ಎಂದಿದೆ.
ಬಿಶಾ, ತತ್ಲಿತ್ ಮತ್ತು ಬಿಲ್ಕರ್ನ್ಗಳಲ್ಲಿರುವ ಎಲ್ಲ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ರವಿವಾರ ರಜೆ ನೀಡಲಾಗಿತ್ತು.
Next Story