ಕಾಬೂಲ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ; ಐವರ ಸಾವು, ಹಲವು ಮಂದಿ ಪತ್ರಕರ್ತರಿಗೆ ಗಾಯ
ಕಾಬೂಲ್ , ಎ.29: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಸೋಮವಾರ ಬೆಳಗ್ಗೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಐವರು ಮೃತಪಟ್ಟು, ಹಲವು ಮಂದಿ ಪತ್ರಕರ್ತರು ಗಾಯಗೊಂಡಿದ್ದಾರೆ.
ಶಶ್ದಾರಕ್ ಎಂಬಲ್ಲಿರುವ ಎನ್ ಡಿಎಸ್ ಗುಪ್ತಚರ ಸಂಸ್ಥೆಯ ಕಟ್ಟಡದ ಸಮೀಪ ಎರಡು ಬಾರಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಟೊಟೊ ನ್ಯೂಸ್ ತಿಳಿಸಿದೆ.
ಆದರೆ ಯಾವುದೇ ಸಂಘಟನೆಯು ಈ ವರೆಗೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.ಕಳೆದ ವಾರ ಮತದಾರರ ನೋಂದಣಿ ಕೇಂದ್ರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ 60 ಮಂದಿ ಮೃತಪಟ್ಟಿದ್ದರು.
Next Story