ಟ್ರಂಪ್ ಗಾಲ್ಫ್ ಕ್ಲಬ್ನಲ್ಲಿ ಗುಂಡು ಹಾರಾಟ; ಓರ್ವ ಸೆರೆ
ವಾಶಿಂಗ್ಟನ್, ಮೇ 18: ಅಮೆರಿಕದ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಒಡೆತನದ ರಿಸಾರ್ಟ್ 'ಟ್ರಂಪ್ ನ್ಯಾಶನಲ್ ಡೋರಲ್ ಗಾಲ್ಫ್ ಕ್ಲಬ್'ನಲ್ಲಿ ಶುಕ್ರವಾರ ಮುಂಜಾನೆ ಗುಂಡು ಹಾರಾಟ ನಡೆದಿದೆ ಹಾಗೂ ಓರ್ವ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಗುಂಡು ಹಾರಾಟದಲ್ಲಿ ಸಾವು-ನೋವುಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಡೋರಲ್ ಪೊಲೀಸ್ ಇಲಾಖೆ ಟ್ವಿಟರ್ನಲ್ಲಿ ಹೇಳಿದೆ.
ಮಯಾಮಿಯ ಹೊರವಲಯದಲ್ಲಿರುವ 800 ಎಕರೆ ವಿಸ್ತಾರದ ಟ್ರಂಪ್ ನ್ಯಾಶನಲ್ ಡೋರಲ್ ಗಾಲ್ಫ್ ಕ್ಲಬ್ನಲ್ಲಿ 'ಬ್ಲೂ ಮಾನ್ಸ್ಟರ್' ಸೇರಿದಂತೆ ವರ್ಷಕ್ಕೆ 4 ಚಾಂಪಿಯನ್ಶಿಪ್ ಗಾಲ್ಫ್ ಕೋರ್ಸ್ಗಳನ್ನು ನಡೆಸಲಾಗುತ್ತದೆ.
ಇದನ್ನು ಟ್ರಂಪ್ 2012ರಲ್ಲಿ 150 ಮಿಲಿಯ ಡಾಲರ್ (ಸುಮಾರು 1020 ಕೋಟಿ ರೂಪಾಯಿ)ಗೆ ಖರೀದಿಸಿದ್ದರು.
Next Story