ಅಫ್ಘಾನ್ ನಲ್ಲಿ ಸರಣಿ ದಾಳಿ; 14 ಪೊಲೀಸರ ಬಲಿ
ಕಾಬೂಲ್, ಮೇ 22: ಅಫ್ಘಾನಿಸ್ತಾನದ ಪೂರ್ವದ ಪ್ರಾಂತ ಘಝ್ನಿಯಲ್ಲಿ ತಾಲಿಬಾನ್ ಸರಣಿ ದಾಳಿಗಳನ್ನು ನಡೆಸಿದ್ದು, ಓರ್ವ ಜಿಲ್ಲಾ ಪೊಲೀಸ್ ಮುಖ್ಯಸ್ಥ ಮತ್ತು ಮೀಸಲು ಪೊಲೀಸ್ ಪಡೆಯೊಂದರ ಕಮಾಂಡರ್ ಸೇರಿದಂತೆ ಕನಿಷ್ಠ 14 ಪೊಲೀಸರು ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ದಿಹ್ ಯಾಕ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ 7 ಪೊಲೀಸರು ಹತರಾಗಿದ್ದಾರೆ ಎಂದು ಪ್ರಾಂತೀಯ ಕೌನ್ಸಿಲ್ ಸದಸ್ಯ ಹಸನ್ ರಝ ಯೂಸುಫ್ ತಿಳಿಸಿದರು. ಜಘತು ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಉಳಿದ 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ದಿಹ್ ಯಾಕ್, ಜಘತು, ಅಜ್ರಿಸ್ತಾನ್ ಮತ್ತು ಕರಬಾಗ್ ಜಿಲ್ಲೆಗಳಲ್ಲಿ ಸೋಮವಾರ ರಾತ್ರಿ ಆರಂಭಗೊಂಡ ಆಕ್ರಮಣ ಮಂಗಳವಾರದವರೆಗೂ ಮುಂದುವರಿಯಿತು.
Next Story