ಅಫ್ಘಾನ್: ಸೇನಾ ಠಾಣೆ ಮೇಲೆ ದಾಳಿ; 6 ಸೈನಿಕರು ಹತ
ಕಾಬೂಲ್, ಜೂ. 6: ಪಶ್ಚಿಮ ಅಫ್ಘಾನಿಸ್ತಾನದ ಬಡ್ಗೀಸ್ ಪ್ರಾಂತದ ಸೇನಾ ಹೊರಠಾಣೆಯೊಂದರ ಮೇಲೆ ತಾಲಿಬಾನ್ ನಡೆಸಿದ ದಾಳಿಯಲ್ಲಿ ಆರು ಸೈನಿಕರು ಮೃತಪಟ್ಟಿದ್ದಾರೆ ಹಾಗೂ ಏಳು ಮಂದಿ ಗಾಯಗೊಂಡಿದ್ದರೆ.
ಮಂಗಳವಾರ ರಾತ್ರಿ ದಾಳಿ ನಡೆದ ಬಳಿಕ, ಉಗ್ರರು ಮತ್ತು ಸೈನಿಕರ ನಡುವೆ ಎರಡು ತಾಸುಗಳ ಗುಂಡಿನ ಚಕಮಕಿ ನಡೆಯಿತು ಎಂದು ಪ್ರಾಂತೀಯ ಮಂಡಳಿ ಮುಖ್ಯಸ್ಥ ಅಬ್ದುಲ್ ಅಝೀಝ್ ಬೇಗ್ ತಿಳಿಸಿದರು.
ದಾಳಿಕಾರರು ತಮ್ಮೊಂದಿಗೆ ಎರಡು ಸೇನಾ ವಾಹನಗಳು ಮತ್ತು ಶಸ್ತ್ರಾಸ್ತ್ರಗಳನ್ನು ಕದ್ದೊಯ್ದಿದ್ದಾರೆ.
ಉತ್ತರ ಅಫ್ಘಾನಿಸ್ತಾನದ ಬಗ್ಲನ್ ಪ್ರಾಂತದಲ್ಲಿ ರಸ್ತೆ ಬದಿಯಲ್ಲಿ ಬಾಂಬೊಂದು ಸಿಡಿದು ಓರ್ವ ನಾಗರಿಕ ಮೃತಪಟ್ಟಿದ್ದಾರೆ ಹಾಗೂ ಮೂವರು ಗಾಯಗೊಂಡಿದ್ದಾರೆ.
Next Story