ಅಫ್ಘಾನ್ ಸಚಿವಾಲಯ ದ್ವಾರದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: 13 ಸಾವು
ಕಾಬೂಲ್, ಜೂ. 11: ಕಾಬೂಲ್ನಲ್ಲಿರುವ ಅಫ್ಘಾನಿಸ್ತಾನ ಗ್ರಾಮೀಣ ಪುನರ್ವಸತಿ ಮತ್ತು ಅಭಿವೃದ್ಧಿ ಸಚಿವಾಲಯದ ದ್ವಾರದಲ್ಲಿ ಸೋಮವಾರ ಸಂಭವಿಸಿದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಹಾಗೂ 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಉದ್ಯೋಗಿಗಳು ಕಚೇರಿಯಿಂ ಮನೆಗೆ ತೆರಳುವ ಹೊತ್ತಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಸರಕಾರಿ ವಕ್ತಾರರೊಬ್ಬರು ತಿಳಿಸಿದರು.
ಸ್ಫೋಟದ ಹೊಣೆಯನ್ನು ಐಸಿಸ್ಹೊತ್ತುಕೊಂಡಿದೆ. ಈ ವಿಷಯವನ್ನು ಭಯೋತ್ಪಾದಕ ಗುಂಪಿನ ಸುದ್ದಿ ಸಂಸ್ಥೆ ‘ಅಮಾಕ್’ ತಿಳಿಸಿದೆ.
‘‘ಮಹಿಳೆಯರು, ಮಕ್ಕಳು ಮತ್ತು ಸಚಿವಾಲಯದ ಉದ್ಯೋಗಿಗಳು ಸಂತ್ರಸ್ತರಲ್ಲಿ ಸೇರಿದ್ದಾರೆ’’ ಎಂದು ಆಂತರಿಕ ಸಚಿವಾಲಯದ ವಕ್ತಾರರೋರ್ವರು ತಿಳಿಸಿದರು.
Next Story