ಅಫ್ಘಾನ್: ಆತ್ಮಹತ್ಯಾ ದಾಳಿಯಲ್ಲಿ 10 ಸಾವು
ಕಾಬೂಲ್, ಜು. ೧: ಅಫ್ಘಾನಿಸ್ತಾನದ ಪೂರ್ವದ ನಗರ ಜಲಾಲಾಬಾದ್ನಲ್ಲಿ ರವಿವಾರ ಜನರ ಗುಂಪೊಂದರ ಮೇಲೆ ಓರ್ವ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿದ್ದು, ಕನಿಷ್ಠ ೧೦ ಮಂದಿ ಮೃತಪಟ್ಟಿದ್ದಾರೆ ಹಾಗೂ ಐವರು ಗಾಯಗೊಂಡಿದ್ದಾರೆ.
ಗವರ್ನರ್ರ ಕಚೇರಿಗೆ ಹೋಗುತ್ತಿದ್ದ ಗುಂಪೊಂದನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ನಂಗರ್ಹಾರ್ ಪ್ರಾಂತದ ಪೊಲೀಸ್ ಮುಖ್ಯಸ್ಥ ಜನರಲ್ ಗುಲಾಮ್ ಸನಯೀ ತಿಳಿಸಿದರು.
ರವಿವಾರ ಈ ವಲaಯಕ್ಕೆ ಭೇಟಿ ನೀಡಿರುವ ಅಧ್ಯಕ್ಷ ಅಶ್ರಫ್ ಘನಿ ಜೊತೆ ಮಾತನಾಡಲು ಈ ಗುಂಪು ತೆರಳುತ್ತಿತ್ತು.
Next Story