‘ಫ್ಲೈ ದುಬೈ’ ಅಪಘಾತಕ್ಕೆ ಪೈಲಟ್ಗಳ ಪ್ರಮಾದ ಕಾರಣ
ಮಾಸ್ಕೊ, ಮಾ.26: ಕಳೆದ ವಾರ ರೋಸೊತಿವ್-ಆನ್-ಡಾನ್ನಲ್ಲಿ ಅಪಘಾತಕ್ಕೀಡಾಗಿ 62 ಪ್ರಯಾಣಿಕರ ಸಾವಿಗೆ ಕಾರಣವಾದ ಫ್ಲೈ ದುಬೈ ಪ್ರಯಾಣಿಕರ ವಿಮಾನದ ಪೈಲಟ್ಗಳ ಕೊನೆಯ ಮಾತುಗಳನ್ನು ರಶ್ಯದ ಸರಕಾರಿ ಟಿ.ವಿ. ಪ್ರಸಾರ ಮಾಡಿದ್ದು, ಅಪಘಾತಕ್ಕೆ ಪೈಲಟ್ಗಳ ತಪ್ಪೇ ಕಾರಣವೆಂದು ಸೂಚಿಸಿದೆ.
737 ಬೋಯಿಂಗ್ ನೆಲಕ್ಕಪ್ಪಳಿಸುವ ನಿಮಿಷಕ್ಕೆ ಮೊದಲು, ವಿನಿಮಯವಾದ ಕೊನೆಯ ಮಾತುಗಳ ದಾಖಲೆಯನ್ನು, ವಿಮಾನದ ಧ್ವನಿ ದಾಖಲೆಯು ಲಭ್ಯವಿರುವ ತನಿಖೆ ಆಯೋಗದ ಮೂಲವೊಂದರಿಂದ ತಾನು ಪಡೆದಿದ್ದೇನೆಂದು ರಶ್ಯದ ರೊಸಿಯ-1 ವಾಹಿನಿಯ ಶುಕ್ರವಾರ ರಾತ್ರಿ ಹೇಳಿದೆ.
ಕಳೆದ ಶನಿವಾರ, ದುಬೈಯಿಂದ ಆಗಮಿಸಿದ್ದ ಈ ನತದೃಷ್ಟ ವಿಮಾನ, ದಕ್ಷಿಣ ರಶ್ಯದ ನಗರದಲ್ಲಿ ಭಾರೀ ಮಳೆ, ಗಾಳಿಯಿಂದಾಗಿ ರನ್ವೇ ಗೊಚರಿಸದೆ ಇಳಿಯಲು ವಿಫಲವಾಗಿ, ಎರಡನೆ ಪ್ರಯತ್ನದಲ್ಲಿ ನೆಲಕ್ಕಪ್ಪಳಿಸಿ ಸ್ಪೋಟಗೊಂಡು ಬೆಂಕಿಯ ಚೆಂಡಾಗಿತ್ತು.
ಆಟೋ ಪೈಲಟನ್ನು ಸ್ವಿಚ್ ಆಫ್ ಮಾಡಿದೊಡನೆಯೇ ಪೈಲಟ್ ವಿಮಾನದ ಧ್ವನಿ ದಾಖಲೆ ಸೂಚಿಸುತ್ತಿದೆ.
ರಶ್ಯನ್ ಭಾಷೆಗೆ ತರ್ಜುಮೆ ಮಾಡಲಾದ ಆ ದಾಖಲೆಯಲ್ಲಿ ಪೈಲಟ್ ಪದೇ ಪದೇ ‘ಚಿಂತಿಸಬೇಡಿ’ ಎನ್ನುತ್ತಿದ್ದುದ್ದನ್ನು. ಸೆಕೆಂಡಿನ ಬಳಿಕ ‘ಅದನ್ನು ಮಾಡಬೇಡಿ’ ಎಂದಿದ್ದನು. ‘ಮೇಲಕ್ಕೆ ಎತ್ತಿ’ ಎಂಬುದು ಆತ ಹೇಳಿದ್ದುದು ಆತನ ಕೊನೆಯ ಮಾತಾಗಿತ್ತು.
ವಿಮಾನ ಕೆಳಗೆ ಬೀಳುತ್ತಿದ್ದ ಕೊನೆಯ 6 ಸೆಂಕೆಂಡ್ಗಳಲ್ಲಿ ಕೇವಲ ‘ಭಯಾನಕ ಆಕ್ರಂದನ’ ಮಾತ್ರ ಕೇಳಿಸಿದೆಯೆಂದು ವಾಹಿನಿಯ ಮೂಲಗಳು ತಿಳಿಸಿವೆ.
ಚಾಲಕನು ವಿಮಾನವನ್ನು ಸಮಾನಾಂತರ ಸ್ಥಿತಿಗೆ ಹಿಂದಕ್ಕೆಳೆಯುವುದಕ್ಕಾಗಿ ಬಾಲದಲ್ಲಿನ ಸ್ಥಿರಗೊಳಿಸುವ ರೆಕ್ಕೆಯನ್ನು ಆಕಸ್ಮಿಕವಾಗಿ ಸ್ವಿಚ್ ಆನ್ ಮಾಡಿದ್ದನೆಂದು ಪರಿಣತರನ್ನುಲ್ಲೇಖಿಸಿ ವಾಹಿನಿ ಹೇಳಿದೆ. ಆದರೆ, ಇದು ಅಧಿಕೃತ ಹೇಳಿಕೆಯಲ್ಲವೆಂದು ಅದು ಒತ್ತಿ ಹೇಳಿದೆ.
ಈ ರೆಕ್ಕೆ ಸಕ್ರಿಯವಾದಾಗ, ವಿಮಾನವು ಪ್ರಾಯೋಗಿಕವಾಗಿ ಪೈಲಟ್ನ ನಿಯಂತ್ರಣ ಫಲಕಕ್ಕೆ ಪ್ರತಿಕ್ರಿಯಿಸುವುದಿಲ್ಲವೆಂದು ವಾಹಿನಿ ತಿಳಿಸಿದೆ. ವಿಮಾನವು ನೇರವಾಗಿ ಕೆಳಗೆ ಜಾರಿದುದಕ್ಕೆ ಸ್ಟೆಬಿಲೈಜರ್ ಕಾರಣವೆಂಬುದನ್ನು ಪೈಲಟ್ಗಳು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿರಲಿಲ್ಲ.
ಚಾಲಕನು ‘ದೀರ್ಘ ಆಯಾಸದಿಂದಾಗಿ’ ಪ್ರಮಾದದಿಂದ ರೆಕ್ಕೆಯನ್ನು ಸಕ್ರಿಯಗೊಳಿಸುವ ಸ್ವಿಚ್ ಅದುಮಿರ ಬಹುದೆಂದು ವಾಹಿನಿ ಹೇಳಿದೆ.
ವಿಮಾನದ ಸ್ವಯಂ ಚಾಲಿತ ವ್ಯವಸ್ಥೆಗಳಲ್ಲಿ ಅಭೂತಪೂರ್ವ ತಪ್ಪು ಇನ್ನೊಂದು ಸಂಭಾವ್ಯ ವಿವರಣೆಯಾಗಿದೆಯೆಂದು ಅದು ತಿಳಿಸಿದೆ.