ತಾಲಿಬಾನ್ ಜೈಲಿಗೆ ದಾಳಿ: 54 ಮಂದಿ ಬಿಡುಗಡೆ
ಕಾಬೂಲ್, ಜು. 17: ದಕ್ಷಿಣ ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತದಲ್ಲಿ ತಾಲಿಬಾನ್ ಉಗ್ರ ಸಂಘಟನೆಯು ನಿರ್ವಹಿಸುತ್ತಿದ್ದ ಜೈಲೊಂದರ ಮೇಲೆ ದಾಳಿ ನಡೆಸಿದ ಭದ್ರತಾ ಪಡೆಗಳು ಜೈಲಿನಲ್ಲಿದ್ದ ಕನಿಷ್ಠ 54 ಮಂದಿಯನ್ನು ಬಿಡುಗಡೆಗೊಳಿಸಿವೆ.
ಮೂಸಾ ಕಾಲಾ ಜಿಲ್ಲೆಯಲ್ಲಿರುವ ಜೈಲಿನ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿದ ಕಮಾಂಡೊ ಘಟಕವು ಬಂಧಿಗಳನ್ನು ಬಿಡುಗಡೆ ಮಾಡಿತು ಎಂದು ಪ್ರಾಂತೀಯ ಗವರ್ನರ್ರ ವಕ್ತಾರರೊಬ್ಬರು ತಿಳಿಸಿದರು. ಜೈಲಿನಲ್ಲಿ 32 ನಾಗರಿಕರು, 16 ಪೊಲೀಸರು, ನಾಲ್ವರು ಸೈನಿಕರು ಮತ್ತು ಇಬ್ಬರು ಸೇನಾ ವೈದ್ಯರನ್ನು ಕೂಡಿ ಹಾಕಲಾಗಿತ್ತು.
Next Story