ಐಸಿಸ್ ಉಗ್ರರಿಂದ 15 ತಾಲಿಬಾನಿಗಳ ಹತ್ಯೆ
ಮಝಾರಿ ಶರೀಫ್ (ಅಫ್ಘಾನಿಸ್ತಾನ), ಜು. 18: ಉತ್ತರ ಅಫ್ಘಾನಿಸ್ತಾನದ ಸರೆ ಪುಲ್ ಪ್ರಾಂತದಲ್ಲಿ ತಾಲಿಬಾನ್ ಕಮಾಂಡರ್ ಒಬ್ಬನ ಮನೆಯ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಪ್ರಾರ್ಥನಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ.
‘‘ತಾಲಿಬಾನ್ ಕಮಾಂಡರ್ನ ಮನೆಯಲ್ಲಿ ಪ್ರಾರ್ಥನಾ ಕಾರ್ಯಕ್ರಮವೊಂದು ನಡೆಯುತ್ತಿದ್ದಾಗ ಇಬ್ಬರು ಐಸಿಸ್ ಭಯೋತ್ಪಾದಕರು ನುಗ್ಗಿ ಗುಂಡಿನ ದಾಳಿ ನಡೆಸಿದರು’’ ಎಂದು ಸರೆ ಪುಲ್ ಗವರ್ನರ್ ಕಚೇರಿಯ ವಕ್ತಾರರೊಬ್ಬರು ತಿಳಿಸಿದರು.
15 ತಾಲಿಬಾನಿಗಳು ಮೃತಪಟ್ಟರು ಹಾಗೂ ಐವರು ಗಾಯಗೊಂಡರು ಎಂದರು.
Next Story