ಇರಾನ್ ವಿರುದ್ಧದ ಯುದ್ಧ ‘ಎಲ್ಲ ಯುದ್ಧಗಳ ತಾಯಿ’: ಟ್ರಂಪ್ಗೆ ಎಚ್ಚರಿಕೆ ನೀಡಿದ ಹಸನ್ ರೂಹಾನಿ
ದುಬೈ, ಜು.22: ಇರಾನ್ ವಿರುದ್ಧ ಪ್ರತಿಕೂಲ ನೀತಿಗಳನ್ನು ರೂಪಿಸುವದರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಎಚ್ಚರಿಕೆ ನೀಡಿರುವ ಇರಾನ್ ಅಧ್ಯಕ್ಷ ಹಸನ್ ರೂಹಾನಿ, ಇರಾನ್ ವಿರುದ್ಧ ಯುದ್ಧವು ಎಲ್ಲ ಯುದ್ಧಗಳ ತಾಯಿಯಾಗಿರಲಿದೆ ಎಂಬುದನ್ನು ಅಮೆರಿಕ ತಿಳಿದುಕೊಳ್ಳಬೇಕು ಎಂದು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನ್ನ ಪರಮಾಣು ಕಾರ್ಯಕ್ರಮದ ಬಗ್ಗೆ 2015ರಲ್ಲಿ ಮಾಡಲಾದ ಅಂತರ್ರಾಷ್ಟ್ರೀಯ ಒಪ್ಪಂದವನ್ನು ಡೊನಾಲ್ಡ್ ಟ್ರಂಪ್ ಹಿಂಪಡೆಯಲು ನಿರ್ಧರಿಸಿದ ನಂತರ ಅಮೆರಿಕದಿಂದ ಇರಾನ್ ಮೇಲಿನ ಒತ್ತಡ ಮತ್ತು ನಿರ್ಬಂಧಗಳು ಹೆಚ್ಚಾಗಿವೆ.
Next Story