ರನ್ವೇಯಿಂದ ಜಾರಿದ ರಿಯಾದ್-ಮುಂಬೈ ಜೆಟ್ ಏರ್ವೇಸ್ ವಿಮಾನ
ರಿಯಾದ್, ಆ.3: ರಿಯಾದ್ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಜೆಟ್ ಏರ್ವೇಸ್ ವಿಮಾನ 9 ಡಬ್ಲು 523 ರಿಯಾದ್ ಏರ್ಪೋರ್ಟ್ನಲ್ಲಿ ಇಂದು ಟೇಕ್ ಆಫ್ ಆಗುತ್ತಿದ್ದ ವೇಳೆ ಸ್ಥಗಿತಗೊಂಡ ಕಾರಣ ರನ್ವೇಯಿಂದ ಜಾರಿದ ಘಟನೆ ನಡೆದಿದೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 142 ಪ್ರಯಾಣಿಕರು ಹಾಗೂ ಏಳು ಮಂದಿ ವಿಮಾನ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದ್ದು, ಯಾರಿಗೂ ಏನೂ ಆಗಿಲ್ಲ ಎಂದು ಏರ್ಲೈನ್ಸ್ ಮೂಲಗಳು ತಿಳಿಸಿವೆ.
ಘಟನೆಯ ಬಳಿಕ ವಿಮಾನದ ಪ್ರಯಾಣಿಕರಿಗೆ ಟರ್ಮಿನಲ್ ಕಟ್ಟಡದೊಳಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ಜೆಟ್ ಏರ್ವೇಸ್ನ ಅಧಿಕೃತ ಹೇಳಿಕೆಯಲ್ಲಿ ತಿಳಿದುಬಂದಿದೆ.
ಪೈಲಟ್ಗೆ ರನ್ವೇಯಲ್ಲಿ ಸಮಸ್ಯೆ ಕಂಡು ಬಂದ ಕಾರಣ ವಿಮಾನ ವನ್ನು ಸ್ಥಗಿತಗೊಳಿಸಲು ನಿರ್ಧರಿಸಿದರು ಎಂದು ಡಿಜಿಸಿಎಗೆ ನೀಡಿದ ವರದಿಯಲ್ಲಿ ಜೆಟ್ ಏರ್ವೇಸ್ ತಿಳಿಸಿದೆ.
ವಿಮಾನವನ್ನು ರನ್ವೇಯಲ್ಲಿ ಲಭ್ಯವಿರುವ ಸ್ಥಳದಲ್ಲೇ ನಿಲ್ಲಿಸಲು ಜೋರಾಗಿ ಬ್ರೇಕ್ ಹಾಕುವ ಅಗತ್ಯವಿತ್ತು. ಈ ವಿಷಯದ ಬಗ್ಗೆ ಸಮಗ್ರ ತನಿಖೆ ಬಾಕಿಯಿದೆ ಎಂದು ವರದಿಯಾಗಿದೆ.