ಶಾಪಿಂಗ್ ಮಾಲ್ ಸಮೀಪ ವಿಮಾನ ಪತನ: ಐವರು ಮೃತ್ಯು
ಲಾಸ್ ಏಂಜಲೀಸ್, ಆ.6: ಕ್ಯಾಲಿಫೋರ್ನಿಯಾದ ಸ್ಯಾಂಟಾ ಅನಾ ಸಿಟಿಯಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿದ್ದು, ಐವರು ಮೃತಪಟ್ಟಿದ್ದಾರೆ.
ಸ್ಯಾಂಟಾ ಅನಾ ಸಿಟಿಯಲ್ಲಿರುವ ಸೌತ್ ಕೋಸ್ಟ್ ಪ್ಲಾಝಾ ಶಾಪಿಂಗ್ ಸೆಂಟರ್ ಸಮೀಪ ವಿಮಾನ ಪತನಗೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಶಾಪಿಂಗ್ ಮಾಲ್ ನ ಪಾರ್ಕಿಂಗ್ ಲಾಟ್ ಗೆ ವಿಮಾನ ಬಿದ್ದಿದೆ ಎನ್ನಲಾಗಿದೆ.
ಪಾರ್ಕಿಂಗ್ ಲಾಟ್ ನಲ್ಲಿದ್ದವರಿಗೆ ಗಾಯವಾಗಿದೆಯೇ ಎನ್ನುವುದು ಇನ್ನೂ ತಿಳಿದುಬಂದಿಲ್ಲ.
Next Story